Advertisement

Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವಕ್ಕಾಗಿ ಶೋಧ

04:49 PM Sep 16, 2024 | Poornashri K |

ಮುದ್ದೇಬಿಹಾಳ(ವಿಜಯಪುರ):  ತಾಲೂಕಿನ ಚಟ್ಟಿಹಾಳ ಗ್ರಾಮದ ಯುವತಿ ಬಾಲವ್ವ ಕಮರಿ (19)  ಕೃಷ್ಣಾ ನದಿಗೆ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಆಕೆಯ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳದ ತಂಡ ಹಾಗೂ ನುರಿತ ಈಜುಗಾರರೊಂದಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 14 ರಂದೇ ಯುವತಿ ನದಿಗೆ ಹಾರಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next