Advertisement

ಏಕತಾ ಪ್ರತಿಮೆ: ಒಂದೇ ವರ್ಷದಲ್ಲಿ 82 ಕೋಟಿ ರೂ. ಆದಾಯ

09:54 AM Dec 13, 2019 | sudhir |

ಅಹಮದಾಬಾದ್‌: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವುದು ಮಾತ್ರವಲ್ಲ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 82.51 ಕೋಟಿ ರೂ. ಆದಾಯವನ್ನೂ ಸರಕಾರಕ್ಕೆ ತಂದಿಟ್ಟಿದೆ.
ವರ್ಷದ ಅವಧಿಯಲ್ಲಿ 29 ಲಕ್ಷ ಮಂದಿ ಪ್ರತಿಮೆಗೆ ಭೇಟಿ ನೀಡಿರುವುದಾಗಿ ಗುಜರಾತ್‌ ಅರಣ್ಯ ಸಚಿವ ಗಣಪತ್‌ ವಸವ ಅವರು ವಿಧಾನಸಭೆಗೆ ತಿಳಿಸಿದ್ದಾರೆ.

Advertisement

ಇದರೊಂದಿಗೆ ಪ್ರತಿಮೆ ಸನಿಹದಲ್ಲಿರುವ ಜಂಗಲ್‌ ಸಫಾರಿಗೆ ವಿವಿಧ ಕಾಡು ಪ್ರಾಣಿಗಳನ್ನು ತರಲು 2.64 ಕೋಟಿ ರೂ. ವೆಚ್ಚ ಮಾಡಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಗುಜರಾತ್‌ ಸರಕಾರ ಏಕತಾ ಪ್ರತಿಮೆ ಪ್ರದೇಶದ ಅಭಿವೃದ್ಧಿ ಮತ್ತು ಪ್ರವಾಸಿ ಮಸೂದೆಯನ್ನು ಮಂಡಿಸಿದೆ. ಈ ವೇಳೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಸ್ಥಳೀಯ ಆದಿವಾಸಿ ಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿವೆ. ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ ಅವರು ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಸರಕಾರ ಅವರ ಭೂಮಿಯನ್ನು ಕಸಿದು ಅಭಿವೃದ್ಧಿಗೆ ಹೊರಟಿದೆ. ಸುಮಾರು 70ಕ್ಕೂ ಹೆಚ್ಚು ಆದಿವಾಸಿಗಳಿರುವ ಗ್ರಾಮಗಳು ಇದರಿಂದ ತೊಂದರೆಗೆ ಸಿಲುಕಲಿವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next