ಅಹ್ಮದಾಬಾದ್: ಗುಜರಾತ್‌ನ ಸರ್ದಾರ್ ಸರೋವರ್ ಡ್ಯಾಂನಲ್ಲಿ ನಿರ್ಮಿಸಲಾಗಿರುವ 182 ಮೀ. ಎತ್ತರದ ಸರ್ದಾರ್ ವಲ್ಲಭಬಾಯಿ ಪ್ರತಿಮೆಯನ್ನು (ಏಕತಾ ಪ್ರತಿಮೆ) ನೋಡಲು ಆಗಮಿಸುತ್ತಿರುವವರ ಸಂಖ್ಯೆ ಶೇ 30.5ರಷ್ಟು ಹೆಚ್ಚಾಗಿದೆ.
ಇದು ಕೊರೊನಾ ಪೂರ್ವದಲ್ಲಿ ಆಗಮಿಸುತ್ತಿದ್ದ ದೈನಂದಿನ ಪ್ರವಾಸಿಗರ ಸಂಖ್ಯೆಯನ್ನೂ ದಾಟಿದೆ. ಕೊರೊನಾ ಪೂರ್ವದಲ್ಲಿ ಏಕತಾ ಪ್ರತಿಮೆಗೆ ಪ್ರತಿದಿನ ಭೇಟಿ ನೀಡುತ್ತಿದ್ದವರ ಸರಾಸರಿ ಸಂಖ್ಯೆ 10,194ರಷ್ಟಿತ್ತು.
ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ: ಬೆಂಗಳೂರಿಗೆ ಬಂತು 700 ಕೆ.ಜಿ. ತೂಕದ ಖಡ್ಗ
ಇತ್ತೀಚಿನ ದಿನಗಳಲ್ಲಿ ಇದು 18,187ಕ್ಕೇರಿದ್ದು ಒಟ್ಟಾರೆ ಶೇ 30.5ರಷ್ಟು ಹೆಚ್ಚಾಗಿದೆ ಎಂದು ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.