Advertisement

ಕರ್ನಾಟಕದಲ್ಲಿ ತಯಾರಾದ ಶ್ರೀರಾಮನ ಪ್ರತಿಮೆ ಅನಾವರಣ

01:37 AM Jun 08, 2019 | mahesh |

ಅಯೋಧ್ಯೆ: ಇಲ್ಲಿನ “ಅಯೋಧ್ಯಾ ಶೋಧ ಸಂಸ್ಥಾನ್‌’ ವಸ್ತು ಸಂಗ್ರಹಾಲಯದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಶ್ರೀರಾಮನ ಮರದ ವಿಗ್ರಹವನ್ನು ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಲೋಕಾರ್ಪಣೆಗೊಳಿಸಿದರು.

Advertisement

ಬೀಟೆ ಮರವನ್ನು ಉಪಯೋಗಿಸಿ ಕೋದಂಡರಾಮನ ಶೈಲಿಯಲ್ಲಿ ಕೆತ್ತಲಾಗಿರುವ ಈ ಪ್ರತಿಮೆ ತಯಾರಾಗಿರುವುದು ಕರ್ನಾಟಕದಲ್ಲಿ ಎಂಬುದು ವಿಶೇಷ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಕಾವೇರಿ ಎಂಪೋರಿಯಂನಲ್ಲಿದ್ದ ಈ ಪ್ರತಿಮೆಯನ್ನು ಉತ್ತರ ಪ್ರದೇಶ ಸರಕಾರ 34 ಲಕ್ಷ ರೂ.ಗಳಿಗೆ ಖರೀದಿಸಿದೆ.

“ಅಯೋಧ್ಯಾ ಶೋಧ ಸಂಸ್ಥಾನ್‌’ನ ನಿರ್ದೇಶಕ ವೈ.ಪಿ. ಸಿಂಗ್‌ ಹೇಳುವ ಪ್ರಕಾರ, ವಸ್ತು ಸಂಗ್ರಹಾಲಯದಲ್ಲಿ 2,500ಕ್ಕೂ ಹೆಚ್ಚು ಶ್ರೀರಾಮನ ವಿವಿಧ ಮೂರ್ತಿಗಳಿದ್ದರೂ ಕೋದಂಡರಾಮನ ಶೈಲಿಯ ವಿಗ್ರಹ ಇರಲಿಲ್ಲ. ಹಾಗಾಗಿ ಅದನ್ನು ಇಲ್ಲಿಗೆ ತಂದು ಪ್ರತಿಷ್ಠಾಪಿಸಲಾಗಿದೆ. ಶ್ರೀರಾಮನ ಜೀವನವನ್ನು ಮುಖ್ಯವಾಗಿ ಐದು ಹಂತಗಳಲ್ಲಿ ಗುರುತಿಸಲಾಗಿದೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿರುವ ಪ್ರತಿಮೆಗಳನ್ನು ಪೂಜಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next