Advertisement
ಈ ಐತಿಹಾಸಿಕ ಕ್ಷಣಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾ ಯಣ, ಆರ್.ಅಶೋಕ್, ನಾರಾಯಣಗೌಡ, ಬೈರತಿ ಬಸವರಾಜ್, ಸುನಿಲ್‌ಕುಮಾರ್, ಮುನಿ ರತ್ನ, ಸಂಸದರಾದ ಪಿ.ಸಿ.ಮೋಹನ್, ಸಂದಾನಂದ ಗೌಡ , ತೇಜಸ್ವಿ ಸೂರ್ಯ ಸಾಕ್ಷಿಯಾದರು.
Related Articles
Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಯೋಜನೆಯ ಸಾಕಾರಕ್ಕೆ ಕೆಲಸ ಮಾಡಿ ದ್ದೇವೆ. ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹಾಕಿದ ಶ್ರೀಕಾರದ ಬಲವೂ ಇದೆ. ಕೆಂಪೇಗೌಡರ ಸಂದೇಶವನ್ನು ಜನರಿಗೆ ತಲುಪಿಸಲು ಮುಂದೆಯೂ ನಾವು ಶ್ರಮಿಸಲಿದ್ದೇವೆ. ನಾವು ಕೆಂಪೇಗೌಡರನ್ನು ಕಟ್ಟುತ್ತ, ನಾಡನ್ನು ಕಟ್ಟೋಣ ಎಂದು ಭಾವನಾತ್ಮಕವಾಗಿ ನುಡಿದರು.
ಚಿರಸ್ಥಾಯಿ: ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕರ್ನಾಟಕ ಇತಿಹಾಸದಲ್ಲಿ ಕೆಂಪೇಗೌಡ ಅವರ ಹೆಸರನ್ನು ಚಿರಸ್ಥಾಯಿ ಆಗಿ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯಿರಿಸಿದೆ. 2009ರಲ್ಲಿ ಕೆಂಪೇ ಗೌಡರ ಜಯಂತಿಯನ್ನು ವಾರ್ಡ್ ಮಟ್ಟ ದಲ್ಲಿ ಆಚರಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು.
ಎಲ್ಲ ತಾಲೂಕುಗಳಿಂದ ಮಣ್ಣು ತರುವಂತಹ ಉದ್ದೇಶ ಕೆಂಪೇಗೌಡರ ಜೀವನದ ಸಾಧನೆಗಳು ಕೂಡ ನಮ್ಮ ಜನರಿಗೆ ಗೊತ್ತಾಗಬೇಕು ಎನ್ನುವುದಾ ಗಿದೆ. ಐಟಿ ಬಿಟಿ ಸೇರಿದಂತೆ ಮತ್ತಿತರ ತಂತ್ರಜ್ಞಾನ ಗಳು ಈ ನಗರದಲ್ಲಿವೆ ಎಂದರೆ ಕೆಂಪೇಗೌಡರು ನಿರ್ಮಿ ಸಿದ ಪ್ರಗತಿಪರ ಚಿಂತನೆಗೆ ಕಾರಣವಾಗಿವೆ ಎಂದರು.
ಅಶ್ವತ್ಥನಾರಾಯಣಗೆ ಶಹಬ್ಟಾಸ್ಗಿರಿಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲ ಗಣ್ಯರು ಯೋಜನೆಯ ರೂವಾರಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಶಹಬ್ಟಾಸ್‌ಗಿರಿ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಯೋಜನೆಯ ರೂಪುರೇಷೆ, ವಿನ್ಯಾಸ, ಪ್ರಗತಿ ಎಲ್ಲವನ್ನೂ ಉತ್ತಮವಾಗಿ ನಿರ್ವಹಣೆ ಮಾಡಿದ ಶ್ರೇಯಸ್ಸು ಸಚಿವ ಅಶ್ವತ್ಥನಾರಾಯಣ ಅವರಿಗೆ ಸಲ್ಲುತ್ತದೆ. ಅವರು ಇದಕ್ಕಾಗಿ ಹಗಲಿ ರುಳೂ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ಅಶ್ವತ್ಥನಾರಾಯಣ ನೇತೃತ್ವದ ನಿಯೋಗ ಭೇಟಿ ಮಾಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಪಾರ್ಕ್ ನಿರ್ಮಾಣಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಸಮ್ಮತಿಸಿ ಅನುದಾನವನ್ನು ಕೂಡ ನೀಡಿದ್ದೆ. ಇಂದು ಸಾಕಾರಗೊಳ್ಳುತ್ತಿರುವುದಕ್ಕೆ ಅಶ್ವತ್ಥನಾರಾಯಣ ಅವರೇ ಕಾರಣ ಎಂದು ಶ್ಲಾ ಸಿದರು. ಈ ಯೋಜನೆಯು ಅಶ್ವತ್ಥನಾರಾಯಣ ಅವರ ಕನಸಿನ ಕೂಸಾಗಿದೆ. ಇದಕ್ಕಾಗಿ ಅವರು ಹಗಲಿರುಳೂ ಶ್ರಮಿಸಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಜನರ ಬದುಕು ಕಟ್ಟಿದರು: ಸಿಎಂ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರು ನಾಡು ಕಟ್ಟುವ ಕೆಲಸವನ್ನಷ್ಟೇ ಮಾಡಿಲ್ಲ. ಇದರ ಜತೆಗೆ ಜನರ ಬದುಕನ್ನು ಕೂಡ ಕಟ್ಟಿದರು. ಸರ್ವಜನಾಂಗದವರನ್ನು ಒಗ್ಗೂಡಿಸುವ ಕೆಲಸ ಮಾಡಿ ಸಾಮಾಜಿಕ ಹರಿಕಾರ ಎಸಿನಿಕೊಂಡರು ಎಂದು ಹೇಳಿದರು. ಆ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಸರಿಯಾದ ಗೌರವ ಸಿಗಬೇಕೆಂಬ ಸಂಕಲ್ಪದ ಹಿನ್ನೆಲೆಯಲ್ಲಿ ಸರ್ಕಾರ ಪ್ರಗತಿ ಪಥ ಪ್ರತಿಮೆ ನಿರ್ಮಿಸುವತ್ತ ಹೆಜ್ಜೆಯಿರಿಸಿದೆ. ಅನೇಕ ದಶಕಗಳ ಕನಸು ನನಸಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರವು ವಿಧಾನಸೌಧ ದಲ್ಲಿ ಒಂದೆ ಕಡೆ ಸಾಮಾಜಿಕ ಹರಿಕಾರ ಬಸವಣ್ಣ ಅವರ ಪ್ರತಿಮೆಯನ್ನು ಮತ್ತೊಂದು ಕಡೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು. ಈ ಇಬ್ಬರೂ ಕೂಡ ನಾಡನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ, ಜತೆಗೆ ಸರ್ವಜನಾಂಗದ ತೋಟವಾಗಿ ಕಟ್ಟಿದ್ದಾರೆ.
-ಡಾ| ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ ಕೆಂಪೇಗೌಡರ ಕೊಡುಗೆಯನ್ನು ಈ ನಾಡು ಮರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಂಟ್ರಲ್ ಪಾರ್ಕ್ ಮತ್ತು ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಘೋಷಣೆ ಮಾಡಿದೆ.
-ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ