ಬಾದಾಮಿ: ತಾಲೂಕಿನ ಗೊಲ್ಲ (ಯಾದವ) ಸಮಾಜದ ಮುಖಂಡರು ಮತ್ತು ಪದಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿಯನ್ನು ಭೇಟಿಯಾಗಿ ಸರ್ಕಾರದ ಆದೇಶದಂತೆ ಅಲೆಮಾರಿ ಮತ್ತು ಅರೆ ಅಲೆಮಾರಿ ವರ್ಗದ ಗೊಲ್ಲ ಸಮಾಜದ ಕುಟುಂಬಗಳ ಅಂಕಿ ಅಂಶ ಸಲ್ಲಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗೊಲ್ಲ ಸಮಾಜದ ಜನರು ಇಲ್ಲ ಎಂಬ ಅಂಶ ಬೆಳಕಿಗೆ ಬಂದ ಕುರಿತಾಗಿ
ಸಮಾಜದ ಮುಖಂಡರು ತಾಲೂಕಿನ ನಗರ ಮತ್ತು 22 ಗ್ರಾಮಗಳಲ್ಲಿ ವಾಸವಿರುವ 4895 ಜನಸಂಖ್ಯೆ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳಿಗೆ ಒದಗಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ಸೋಮಣ್ಣ ಬಿಂಗೇರಿ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ಪಿಡಿಒ ಅವರಿಗೆ ನಿಖರ ಮಾಹಿತಿ ಇಲ್ಲ. ಯಾವ ಗ್ರಾಮಗಳಲ್ಲಿ ಗೊಲ್ಲ (ಯಾದವ) ಸಮಾಜದ ಎಷ್ಟು ಜನರಿದ್ದಾರೆ? ಎಂಬುದನ್ನು ತಮಗೆ ಮಾಹಿತಿ ಸಲ್ಲಿಸಲಾಗಿದೆ. ಆದ್ದರಿಂದ ಇಲಾಖೆ ಮೂಲಕ ಸಂಬಂಧಿಸಿದ ಗ್ರಾಪಂಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಎಂ. ಬಿಂಗೇರಿ, ಪುರಸಭೆ ಸದಸ್ಯ ಬಸವರಾಜ ಗೊರಕೊಪ್ಪ, ಹನಮಂತಗೌಡ ಪಾಟೀಲ, ನಿಂಗಪ್ಪ ಮುಳ್ಳಾಡಿ, ಕರಿಯಪ್ಪ ವಾಲೀಕಾರ, ಯಮನಪ್ಪ ಮುರಡಿ, ಮಲ್ಲಪ್ಪ ಮುಳ್ಳಾಡಿ, ಮಾರುತಿ ವಾಲೀಕಾರ ಇದ್ದರು.