Advertisement

ಅಭಿವೃದ್ಧಿಗೆ ಅಂಕಿ-ಅಂಶ ಅವಶ್ಯ: ಡಿಡಿಪಿಐ ಸೊನ್ನದ

12:00 PM Jun 30, 2019 | Suhan S |

ಕೊಪ್ಪಳ: ಅಂಕಿ-ಅಂಶಗಳನ್ನು ಸಮರ್ಪಕವಾಗಿ ಹೊಂದಾಣಿಕೆ ಮಾಡುವುದೇ ಒಂದು ವ್ಯವಸ್ಥಿತ ಆಡಳಿತವಾಗಿದ್ದು, ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದರೆ ಯೋಜನೆ ಸಂಪೂರ್ಣ ವಿಫಲವಾಗುತ್ತವೆ ಎಂದು ಡಿಡಿಪಿಐ ಉಮಾದೇವಿ ಸೊನ್ನದ ಅವರು ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಆರ್ಥಿಕ ಮತ್ತು ಸಾಂಖ್ಯೀೕಕ ನಿರ್ದೇಶನಾಲಯ ಹಾಗೂ ಕೊಪ್ಪಳ ಜಿಲ್ಲಾಡಳಿತ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶನಿವಾರ ನಡೆದ ಭಾರತದ ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ ಅವರ ಜನ್ಮ ದಿನಾಚರಣೆ ಹಾಗೂ 13ನೇ ಸಾಂಖ್ಯೀೕಕ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು, ಆಯಾ ವ್ಯಾಪ್ತಿಯ ಅಂಕಿಅಂಶಗಳ ನಿಖರತೆಯನ್ನು ಅವಲಂಬಿಸಿರುತ್ತವೆ. ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದಲ್ಲಿ ಯಾವುದೇ ಯೋಜನೆಗಳು ಸಫಲವಾಗಲ್ಲ. ಸಮಸ್ಯೆಗಳನ್ನು ಗುರುತಿಸಲು ಅಂಕಿ-ಅಂಶಗಳು ಅತ್ಯವಶ್ಯವಾಗಿವೆ. ಒಂದು ನಿರ್ದಿಷ್ಟ ಗುರಿ ತಲುಪಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು, ಯೋಜನೆ ಯಶಸ್ವಿಗೊಳ್ಳಬೇಕಾದರೆ ಹಾಗೂ ಯೋಜನೆಗಳ ನಿಯಂತ್ರಣ ಮಾಡಬೇಕಾದರೆ ಅಂಕಿ-ಅಂಶಗಳು ಮುಖ್ಯವಾಗಿವೆ. ತಂತ್ರಜ್ಞಾ ನದಲ್ಲಿ ಅಂಕಿ ಅಂಶಗಳು ಬಲವಾದ ಪ್ರಾಬಲ್ಯವನ್ನು ಹೊಂದಿವೆ. ಸರ್ಕಾರದ ಎಲ್ಲಾ ಇಲಾಖೆಗಳು ನಿಖರವಾಗಿ ಅಂಕಿ-ಅಂಶಗಳನ್ನು ಕೊಟ್ಟಾಗ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ದೇಶದ ಅಭಿವೃದ್ಧಿಗೆ ನಿಖರ ಸಂಖ್ಯೆಗಳನ್ನು ತಿಳಿಯಲು ಅಂಕಿಅಂಶ ಅವಶ್ಯ ದೇಶದ ಪರಿಣಾಮಕಾರಿ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳು ಏಕೆ ಬೇಕು? ಯಾವ ರೀತಿ ಅನುಷ್ಠಾನಗೊಳ್ಳಬೇಕು?ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು? ಎನ್ನುವುದರ ಬಗ್ಗೆ ಅಂಕಿಅಂಶಗಳ ಸಹಿತ ಸಾಕಾರಗೊಳ್ಳುವಲ್ಲಿ ಪ್ರೊ. ಮಹಾಲನೋಬಿಸ್‌ ಅವರ ಕೊಡುಗೆ ಅತ್ಯಂತ ಪ್ರಮುಖವಾಗಿದೆ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಸರಿಯಾದ ಅಂಕಿಅಂಶಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿವೆ. ಜೀವನದ ಪ್ರತಿಯೊಂದು ಹೆಜ್ಜೆಗೂ ಅಂಕಿಸಂಖ್ಯೆಗಳ ಅಗತ್ಯ. ಸಾರ್ವಜನಿಕರ ಆಡಳಿತ ನಿಂತಿರುವುದೇ ಅಂಕಿ-ಅಂಶಗಳಿಂದ, ಹೀಗಾಗಿ ಅಂಕಿ-ಅಂಶಗಳನ್ನು ಹೊಂದಾ ಣಿಕೆ ಮಾಡುವಂತಹದ್ದೇ ಆಡಳಿತವಾಗಿದೆ. ಅಂಕಿ-ಅಂಶ ತಿಳಿದವನಿಗೆ ಯಾವುದೇ ಗೊಂದಲವಿಲ್ಲ ಎಂದರು.

Advertisement

ಅರ್ಥಶಾಸ್ತ್ರ ಉಪನ್ಯಾಸಕ ಅಶೋಕ ಓಜನಹಳ್ಳಿ ಮಾತನಾಡಿ, ಜಗತ್ತಿನ ಮುಂದುವರೆದ ದೇಶಗಳು ವಸ್ತುನಿಷ್ಠ ಮಾದರಿಯಲ್ಲಿ ನಿಖರ ಮಾಹಿತಿ ಸಂಗ್ರಹಿಸುವ ಮೂಲಕವೇ ಯಶಸ್ಸುಗಳಿಸಿವೆ. ಅವಶ್ಯಕತೆ, ಆದ್ಯತತೆ ಗುರುತಿಸಿ, ಅಗತ್ಯ ಯೋಜನೆ ಸಿದ್ಧಪಡಿಸಲು, ಆದ್ಯತಾ ವಲಯಗಳನ್ನು ಗುರುತಿಸಲು, ಅಂಕಿ-ಸಂಖ್ಯೆ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತವೆ. 2015 ರಲ್ಲಿ 193 ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿಗಾಗಿ ಕೈಜೋಡಿಸಿವೆ. ಸುಸ್ಥಿರ ಅಭಿವೃದ್ಧಿಗಾಗಿ ಬಡತನ ಮತ್ತು ಹಸಿವು ಕೊನೆಗಾಣಿಸುವುದು, ಆರೋಗ್ಯವಂತಹ ವಾತಾವರಣ ಕಲ್ಪಿಸುವುದು, ಪರಿಸರ ಸಂರಕ್ಷಣೆ ಸೇರಿದಂತೆ 17 ಪ್ರಮುಖ ಅಂಶಗಳನ್ನು ಹೊಂದಲಾಗಿದೆ ಎಂದರು.

ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್‌ ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯರು ಪುಷ್ಪನಮನ ಸಲ್ಲಿಸಿದರು. ಅಲ್ಲದೆ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಹಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ವೈಶಂಪಾಯನ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಯುನಿಸೆಫ್‌ ಕೊಪ್ಪಳದ ಮಲ್ಲಿಕಾ ಹಾಗೂ ಪ್ರತಿಭಾರಿಂದ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next