Advertisement
ಸೈಕ್ಲಿಸ್ಟ್‌ಗಳ ದಶಕಗಳ ಕನಸಾಗಿದ್ದ ಈ ವೆಲೋಡ್ರೋಮ್‌ನ ಕಾಮಗಾರಿ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಅಡೆತಡೆಗಳು ನಿವಾರಣೆಯಾಗಿ ಕಾಮಗಾರಿ ಚುರುಕು ಪಡೆದಿದ್ದು, ಸುಣ್ಣ- ಬಣ್ಣದ ಕಾರ್ಯ ನಡೆಯುತ್ತಿದೆ. ಶೀಘ್ರ ದಲ್ಲೇ ಬಳಕೆಗೆ ಸಿದ್ಧವಾಗಲಿದೆ. ವಿಜಯಪುರ ಸೈಕ್ಲಿಸ್ಟ್‌ಗಳ ತವರು. ಅನೇಕ ಪ್ರತಿಭಾನ್ವಿತ ಸೈಕ್ಲಿಸ್ಟ್ ಗಳು ಇಲ್ಲಿದ್ದಾರೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
Related Articles
Advertisement
ಸೈಕ್ಲಿಸ್ಟ್‌ಗಳ ಅಭ್ಯಾಸ, ನೈಪುಣ್ಯತೆ ಹೆಚ್ಚಿಸಲು ಈ ವೆಲೋಡ್ರೋಮ್ ಸಹಕಾರಿಯಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ. ಇದರ ಸುತ್ತಳತೆಯು 333.3 ಮೀಟರ್ ಇದೆ. ಇದನ್ನು 3 ಸುತ್ತು ಹಾಕಿದರೆ, 1 ಕಿ.ಮೀ. ಆಗಲಿದೆ. ಈಗಾಗಲೇ ಸಂಪೂರ್ಣವಾಗಿ ಸಿವಿಲ್ ಕಾಮಗಾರಿ ಮುಗಿದಿದೆ. ಅಪೆಕ್ಸ್ ಪೈಂಟ್ ಕಾರ್ಯ ಮಾಡಲಾಗುತ್ತಿದೆ ಎನ್ನುತ್ತಾರೆ ಸೈಟ್ ಇಂಜಿನಿಯರ್ ಮಹೇಶ್.
10 ಕೋಟಿ ರೂ. ವೆಚ್ಚ :
ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ ವೆಚ್ಚ 7.34 ಕೋಟಿ ರೂ.ಎಂದು ಅಂದಾಜಿಸಲಾಗಿತ್ತು. ಈಗ ಒಟ್ಟಾರೆ ವೆಚ್ಚ 10 ಕೋಟಿ ರೂ.ವರೆಗೂ ತಲುಪಿದೆ. ಹೆಚ್ಚುವರಿ ಹಣವನ್ನು ಗ್ಯಾಲರಿ, ಕಾಂಪೌಂಡ್, ಸಿಸಿ ರಸ್ತೆ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ವ್ಯಯಿಸಲಾಗಿದೆ ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಸೈಕ್ಲಿಂಗ್ ವೆಲೋಡ್ರೋಮ್’ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ತಿಂಗಳಲ್ಲಿ ಪೈಟಿಂಗ್ ಸೇರಿ ಉಳಿದೆಲ್ಲ ಕಾಮಗಾರಿಗಳು ಪೂರ್ಣಗೊಂಡು ಬಳಕೆಗೆ ಸಜ್ಜಾಗಲಿದೆ. 15 ದಿನದಲ್ಲಿ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಸಿಎಫ್‌ಐ) ತಂಡವು ಭೇಟಿ ನೀಡುವ ನಿರೀಕ್ಷೆ ಇದೆ. ಒಟ್ಟು ಕಾಮಗಾರಿ ವೆಚ್ಚವು 10 ಕೋಟಿ ರೂ. ಆಗಿದೆ.–ಎಸ್.ಜಿ.ಲೋಣಿ, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
– ರಂಗಪ್ಪ ಗಧಾರ