Advertisement

ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ಕಾರ್ಯಕ್ರಮ

01:13 PM Jan 21, 2022 | Team Udayavani |

ಬೆಂಗಳೂರು:  ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ವರ್ಷಗಳ “ಅಮೃತ ಭಾರತಿಗೆ ಕನ್ನಡದ ಆರತಿ “‘ಎಂಬ ಶೀರ್ಷಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಕನ್ನಡ ಸಂಸ್ಕ್ರತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

Advertisement

ಎರಡು ಇಲಾಖೆಯ ನೂರು ದಿನಗಳ ಸಾಧನೆ ಪುಸ್ತಕ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ಈ ವಿಷಯ ತಿಳಿಸಿದರು. ಅಮೃತಮಹೋತ್ಸವ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಲು ಸರಕಾರ ಈ ಯೋಜನೆ ರೂಪಿಸಿದೆ. ಸ್ವಾತಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿದ ವ್ಯಕ್ತಿಗಳು ಜತೆಗೆ ಸ್ವಾತಂತ್ರ್ಯ ಹೋರಾಟದ ಸ್ಥಳಗಳನ್ನು ಗುರುತಿಸಿ ಅವುಗಳ ಸ್ಮರಣೆ ಮಾಡಲಾಗುತ್ತದೆ. ಆ ನಿಮ್ಮಿತ್ತ 75  ಸ್ವಾತಂತ್ರ್ಯ ಯೋಧರ ಪುಸ್ತಕ ಹಾಗೂ ಸ್ವಾತಂತ್ರ್ಯದ ನೆಲದಲ್ಲಿ ಒಂದು ದಿನ ಎಂಬ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.

ಸಂಸ್ಕೃತ ಕನ್ನಡದ ತಾಯಿ

ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕನ್ನಡಕ್ಕೆ ಕನ್ನಡ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು. ಆದರೆ ಸಂಸ್ಕೃತಕ್ಕೆ ವಿರೋಧ ಮಾಡುವುದು ಸರಿಯಲ್ಲ‌. ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದು ಹೇಳಿದರು.

ಸಂಸ್ಕೃತ ಕನ್ನಡದ ತಾಯಿ ಎಂದು ದಾಖಲೆ ಕೇಳುವ ವಿಚಾರ ಅಲ್ಲ. ಅದಕ್ಕೆ ಆರ್.ಟಿ.ಸಿ ಕೊಡಿ ಪಹಣಿ ಕೊಡಿ ಅಂದ್ರೆ ಆಗಲ್ಲ.ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು, ಕೊಡಲೇಬೇಕು ಎಂದರು.

Advertisement

ಆದರೆ ಸಂಸ್ಕೃತಕ್ಕೆ ವಿರೋಧ ಮಾಡುವುದು ಸರಿಯಲ್ಲ.ಮುಂದಿನ ಬಜೆಟ್ ನಲ್ಲಿ ಕನ್ನಡಕ್ಕೆ ಹೆಚ್ಚಿನ ಅನುದಾನ ನೀಡುವ ಕೆಲಸ ಸರ್ಕಾರ ಮಾಡಲಿದೆ ಎಂದರು. ರವೀಂದ್ರ ಕಲಾಕ್ಷೇತ್ರದ ಬುಕಿಂಗ್ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ರವೀಂದ್ರ ಕಲಾಕ್ಷೇತ್ರದಲ್ಲಿ ಇನ್ನುಮುಂದೆ ಆನ್ ಲೈನ್ ಬುಕಿಂಗ್ ನಡೆಯುತ್ತದೆ. ತಿಂಗಳು‌ ಮೊದಲೇ ಬುಕಿಂಗ್ ಮಾಡಿ ಬೇರೆಯವರಿಗೆ ಸಬ್ ಬುಕ್ ನೀಡಲಾಗುತ್ತಿತ್ತು ಅದನ್ನು ನಿಯಂತ್ರಣ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ರಂಗ ಮಂದಿರಗಳು ಕೂಡ ಆನ್ ಲೈನ್ ಬುಕಿಂಗ್ ಮಾಡುವುದಕ್ಕೆ ಚಿಂತನೆ ನಡೆದಿದೆ. ರವೀಂದ್ರ ಕಲಾಕ್ಷೇತ್ರದ ಬಾಡಿಗೆ ದರ ಸ್ವಲ್ಪ ಹೆಚ್ಚಿಗೆ ಮಾಡಬೇಕು ಅಂತ ಸಲಹೆ ಬಂದಿದೆ. ಕಲಾವಿದರ ಅನುಕೂಲಕ್ಕೋಸ್ಕರ 1.2 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next