Advertisement

ಜೆಡಿಎಸ್‌ ಶಾಸಕ “ಕೈ’ಸೇರ್ಪಡೆ ಇಂಗಿತ

06:18 PM Oct 29, 2021 | Team Udayavani |

ಚೇಳೂರು: ನಮ್ಮ ನಾಯಕರು ನನ್ನ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ನನಗೆ ಜನರ ಆಶೀರ್ವಾದ ಇದ್ದರೆ ಸಾಕು. ಮುಂದಿನ ದಿನಗಳಲ್ಲಿ ಕೆ.ಎನ್‌. ರಾಜಣ್ಣ ಅವರ ಜತೆಯಲ್ಲಿ ಹೋಗುತ್ತೇನೆ. ನನಗೆ ಬೇರೆ ದಾರಿಯಿಲ್ಲ ಎಂದು ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಹೇಳಿದರು. ಚೇಳೂರು ಹೋಬಳಿ ಕಲ್ಲುಗುಡಿ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಹಾಗೂ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 15 ವರ್ಷ ಬಳಿಕ ತುಂಬಿರುವ ಕಲ್ಲುಗುಡಿ ಗ್ರಾಮದ ಕೆರೆಗೂ ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುವುದು.

Advertisement

ಕಲ್ಲುಗುಡಿ ಗ್ರಾಮದಲ್ಲಿ ಸಮುದಾಯ ಭವನ, ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ಮನೆ ಮನೆಗೆ ನೀರು, ಸಾಗುವಳಿ ಚೀಟಿ, ಕೆರೆಗೆ ಚಾನೆಲ್‌ ಮುಖೇನ ನೀರು ಬಿಡುವುದು ಸೇರಿದಂತೆ ಎಲ್ಲ ಅಭಿವೃದ್ಧಿ ಕೆಲಸಗಳನ್ನೂ ಸಾಕಾರಗೊಳಿಸುವೆ ಎಂದರು.

ಅನ್ನಭಾಗ್ಯ ಹಳ್ಳಿ-ಹಳ್ಳಿಗೂ ಮುಟ್ಟಿದೆ: ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಮಾತನಾಡಿ, ಬಡವರ ಕ್ಷೇಯೋಭಿ ವೃದ್ಧಿಗಾಗಿ ದುಡಿಯುವ ರಾಜಕಾರಣಿ ನಾವಾಗಬೇಕು. ಆಗ ಜನರು ನಮಗೆ ಗೌರವ ಕೊಡುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕೊಡದಿದ್ದರೆ ಜನರ ಸ್ಥಿತಿ ಶೋಚನೀಯವಾಗುತ್ತಿತ್ತು. ಸಿದ್ದರಾಮಯ್ಯರವರ ಅನ್ನಭಾಗ್ಯದ ಕಾರ್ಯಕ್ರಮ ಹಳ್ಳಿ-ಹಳ್ಳಿಗೂ ಮುಟ್ಟಿದೆ. ಕಡುಬಡವನಿಗೂ ತಲುಪಿದೆ.

ಇದನ್ನೂ ಓದಿ:- ಮುದ್ರಾ ಅನುಷ್ಠಾನದಲ್ಲಿ ರಾಜ್ಯವೇ ಮೊದಲು

ಕೊರೊನಾ ಸಂದರ್ಭದಲ್ಲಿ ಅವರ ಕಾರ್ಯಕ್ರಮ ಜನರನ್ನು ಉಳಿಸಿದೆ ಎಂದರು. ಕಲ್ಲುಗುಡಿ ಭಾಗಕ್ಕೆ ಹಸು-ಕುರಿ ಸಾಕಾಣಿಕೆಗೆ ಸಾಲ ನೀಡಲಾಗುವುದು. ಈ ಭಾಗದವರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಚೇಳೂರಿನಲ್ಲಿ ಡಿಸಿಸಿ ಬ್ಯಾಂಕ್‌ ಬ್ರಾಂಚ್‌ ತೆರೆಯಲು ಈಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಅದರ ಉದ್ಘಾಟನೆಗೆ ನನ್ನ ಜೊತೆ ಸಂಸದ ಜಿ.ಎಸ್‌. ಬಸವರಾಜು, ಶಾಸಕ ಎಸ್‌.ಆರ್‌. ಶ್ರೀàನಿವಾಸ್‌ ಕರೆದುಕೊಂಡು ಬಂದು ಇವರ ಕೈಯಲ್ಲಿ ಟೇಪ್‌ ಕಟ್‌ ಮಾಡಿಸುತ್ತೇನೆ ಎಂದರು.

Advertisement

ನನ್ನ ಮನೆಗೆ ಬಂದಿಲ್ಲ: ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕರ ಕೈಗೆ ಸಿಗುವ ಶಾಸಕ ಎಸ್‌.ಆರ್‌. ಶ್ರೀನಿವಾಸ್‌. ಇವರು ಸದ ಸಾರ್ವಜನಿಕರಿಗೆ ಅನುಕೂಲವನ್ನು ಮಾಡುತ್ತಾ ಬಂದಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರು ತುಮಕೂರಿನಲ್ಲಿ ಚುನಾವಣೆಗೆ ನಿಂತಾಗ ಪ್ರಮಾಣಿಕವಾಗಿ ತಮ್ಮ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದಾರೆ.ದೇವೆಗೌಡರು ನಮ್ಮ ಮನೆ ಹತ್ತಿರವೇ ಹೋಗುತ್ತಾರೆ ನನ್ನ ಮನೆಗೆ ಬಂದಿಲ್ಲ. ಆಗ ನಾನು ಜಿ. ಎಸ್‌. ಬಸವರಾಜು ಅವರಿಗೆ ಬೆಂಬಲಿಸಿದೆ. ಈ ಕ್ಷೇತ್ರದ ಕೆಲವರು ಶ್ರೀನಿವಾಸ್‌ ಕಾಂಗ್ರೆಸ್‌ಗೆ ಬರುವುದು ಬೇಡ. ಅವರ ಅಗತ್ಯಲ್ಲ ಎಂದು ಹೇಳುತ್ತಿದ್ದಾರೆ.

ಹೇಳುತ್ತಿರುವರು ಚುನಾವಣೆಯಲ್ಲಿ ಠೇವಣಿಯನ್ನು ಪಡೆದು ಕೊಳ್ಳದವರು. ಗ್ರಾಪಂ ಸದಸ್ಯರಾಗುದವರು. ನಾನು ಶ್ರೀನಿವಾಸ್‌ ಅವರನ್ನು ಬಾಲ್ಯದಿಂದ ಕಂಡವನು. ಅವರ ಗುಣ ಏನು ಎಂದು ಹತ್ತಿರದಿಂದ ತಿಳಿದವನು ಎಂದರು.

ಜ್ಞಾನ-ತಂತ್ರಜ್ಞಾನವೂ ಅಡಗಿದೆ: ಶಿಡ್ಲೆಕೋಣದ ಶ್ರೀ ಸಂಜಯಕುಮಾರ ಸ್ವಾಮೀಜಿ ಮಾತನಾಡಿ, ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಜಗತ್ತಿಗೆ ಆದರ್ಶಪ್ರಾಯರಾಗಿದ್ದು, ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ವಾಲ್ಮೀಕಿ ಬರೆದ ರಾಮಾಯಣ ಪ್ರಸ್ತುತ ಪ್ರಚಲಿತ ದಲ್ಲಿರುವ ಎಲ್ಲ ಘಟನೆಗಳನ್ನೂ ಒಳಗೊಂಡಂತೆ ಜ್ಞಾನ-ತಂತ್ರಜ್ಞಾನವೂ ಅಡಗಿದೆ. ಇಂತಹ ದಾರ್ಶ ನಿಕರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯುವುದು ಅತ್ಯವಶ್ಯಕವಾಗಿದೆ ಎಂದರು. ನಲ್ಲೂರು ಗ್ರಾಪಂ ಅಧ್ಯಕ್ಷ ಸಿದ್ದರಾಜು. ಗ್ರಾಪಂ ಸದಸ್ಯರು ಸೇರಿದಂತೆ ಮುಖಂಡ ತಿಮ್ಮೆಗೌಡ್‌, ಮೂಡ್ಲಪ್ಪ, ಆನಂದ, ಸ್ವಾಮಿ, ರಂಗನಾಥ್‌, ಬಾಲರಾಜು, ಗುರು, ಮಹಲಿಂಗಪ್ಪ, ಗುರುಲಿಂಗಯ್ಯ, ಕಾಂತರಾಜು, ಕಾರ್ತಿಕೆಯನ್‌, ಸಿದ್ದಪ್ಪ ಹಾಗೂ ಇತರರಿದ್ದರು.

ಕುಮಾರಸ್ವಾಮಿ ಥರ ವಚನಭ್ರಷ್ಟ ಆಗಲ್ಲ

ನಾನು ಶಾಸಕನಾದ ಬಳಿಕ ಬಡವರ, ಶೋಷಿತ ವರ್ಗದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಚೇಳೂರು ಹಾಗೂ ಹಾಗಲವಾಡಿ ಹೋಬಳಿಯ ಭಾಗದಲ್ಲಿ ಹಲವು ಚೆಕ್‌ ಡ್ಯಾಂಗಳನ್ನು ನಿರ್ಮಿಸುವ ಮೂಲಕ ನೀರಾವರಿಗೂ ಆದ್ಯತೆ ನೀಡಿದ್ದೇನೆ. ನಾನು ಪಕ್ಷೇ ತರ ಅಭ್ಯರ್ಥಿಯಾಗಿ 2004ರಲ್ಲಿ ಶಾಸಕನಾಗಿ ಆಯ್ಕೆ ಆದಾಗಿನಿಂದ ಕೆಎನ್‌ಆರ್‌ ನನಗೆ ಸಹ ಕಾರ ನೀಡುತ್ತಾ ಬಂದಿದ್ದಾರೆ.

ರಾಜಣ್ಣ ಸಹಕಾರ ಕ್ಷೇತ್ರದ ಭೀಷ್ಮ ಇದ್ದಾಗೆ. ಅವರಿಗೆ ನಾನು ಎಂದೂ ಕುಮಾರಸ್ವಾಮಿ ಥರ ವಚನ ಭ್ರಷ್ಟ ಆಗಲ್ಲ. ಮುಂದೆ ನಾನು ರಾಜಣ್ಣ ಜತೆ ಒಟ್ಟುಗೂಡಿ ಸಾರ್ವಜನಿಕರ ಸೇವೆ ಮಾಡುತ್ತೇನೆ ಎಂದು ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಹೇಳಿದರು.

ಅಂತರ್ಜಲ ವೃದ್ಧಿಗೆ ಮುಂದಾಗಿ: ರಾಜಣ್ಣ

ಚೆಕ್‌ ಡ್ಯಾಂ, ಬದುಗಳನ್ನು ಹೆಚ್ಚಾಗಿ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ಮುಂದಾಗಬೇಕು. ಈಗಾಗಲೇ ಅಂತರ್ಜಲವನ್ನು ಹೆಚ್ಚು ಉಪ ಯೋಗ ಮಾಡಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಹಾಗಾಗಿ, ಭೂಮಿಯಲ್ಲಿ ನೀರನ್ನು ಇಂಗಿಸುವ ಕಾರ್ಯವನ್ನು ಹೆಚ್ಚು ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸಮಸ್ಯೆ ಉಂಟಾಗದಂತೆ ಕೊಡುಗೆಯಾಗಿ ನೀಡಬೇಕು ಎಂದು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next