Advertisement
ಸೋಮವಾರ ನಾಗಪುರದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯೊಂದಲ್ಲಿ ಕವಾಡೆ ಇರಾನಿ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿ ಯೋದಲ್ಲಿ ಸೋಮವಾರ ನಾಗಪುರದ ಲಕಡ್‌ಗಂಜ್ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವಾಗ ಕವಾಡೆ ಅವರು ಸ್ಮೃತಿ ಇರಾನಿ ಅವರ ಬಗ್ಗೆ ಅನುಚಿತ ಹೇಳಿಕೆಯನ್ನು ನೀಡುತ್ತ, ಇರಾನಿ ಅವರು ಗಡ್ಕರಿ ಅವರ ಬಳಿ ಕುಳಿತುಕೊಂಡು ಸಂವಿಧಾನವನ್ನು ಬದಲಿಸುವ ಮಾತುಗಳನ್ನಾಡುತ್ತಾರೆ. ನಾನು ಸ್ಮೃತಿ ಇರಾನಿ ಅವರ ಬಗ್ಗೆ ನಿಮಗೆ ಒಂದು ವಿಷಯವನ್ನು ತಿಳಿಸಲು ಬಯಸುತ್ತೇನೆ. ಅವರು ತಮ್ಮ ಹಣೆಗೆ ದೊಡ್ಡ ಬಿಂದಿ ಇಡುತ್ತಾರೆ. ಆದರೆ, ಪತಿಯನ್ನು ಬದಲಿಸುವ ಮಹಿಳೆಯ ಬಿಂದಿ ಕೂಡ ದೊಡ್ಡದಾಗಿರುತ್ತದೆ ಎಂದು ನನಗೆ ಯಾರೋ ಹೇಳಿದ್ದಾರೆ ಎಂದು ಹೇಳುತ್ತಿರುವುದು ಕಾಣ ಸಿಕ್ಕಿದೆ.
ಈ ಸಂಬಂಧ ಚುನಾವಣಾ ಅಧಿಕಾರಿ ಮದನ್ ಸುಭೇದರ್ ಅವರು ಕವಾಡೆ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಐಪಿಸಿ ಕಾಯಿದೆಯ ಪರಿಚ್ಛೇದ 295 (ಎ) , 500 ಮತ್ತು 294 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಕವಾಡೆ ವಿರುದ್ಧ ಲಕಡ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯದೀಪ್ ಕವಾಡೆ ವಿರುದ್ಧ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ನಾಗಪುರ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಬಳಿ ದೂರು ನೀಡಿದ್ದರು. ಜಯದೀಪ್ ಕವಾಡೆ ಅವರು ಈ ಹೇಳಿಕೆಗಳನ್ನು ನೀಡುತ್ತಿದ್ದಾಗ ಅವರ ಹಿಂದೆ ಹಲವು ನಾಯಕರು ಕುಳಿತಿದ್ದರು. ಆದರೆ ಅವರಲ್ಲಿ ಯಾರೂ ಕವಾಡೆಯನ್ನು ತಡೆಯಲು ಪ್ರಯತ್ನಿಸಿಲ್ಲ. ಅದಕ್ಕೆ ಬದಲಿಗೆ ವೀಡಿಯೋದಲ್ಲಿ ಕೆಲವು ನಾಯಕರು ನಗುತ್ತಿರುವುದು ಕಾಣಲು ಸಿಕ್ಕಿದೆ.
Related Articles
Advertisement
ಇದು ಒಂದು ರೀತಿಯಲ್ಲಿ ಮಹಿಳೆಯರಿಗೆ ಅವಮಾನವಾಗಿದೆ. ಮಹಿಳೆಯರು ಪಟೋಲೆ ವಿರುದ್ಧ ಮತ ಚಲಾಯಿಸಬೇಕು. ಅದಕ್ಕಾಗಿ, ಜಯದೀಪ್ ಅವರ ಅನುಚಿತ ಭಾಷಣದ ವೀಡಿಯೋ ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಹರಡಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಸುದ್ದಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.