Advertisement

ಯಕ್ಷ ಕಲಾವಿದರಿಗೆ ಅಕಾಡೆಮಿ ನೆರವು

01:03 AM May 09, 2020 | Sriram |

ಕೋಟ: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ಸಂಕಷ್ಟಕ್ಕೆ ಒಳಗಾಗಿರುವ ಯಕ್ಷಗಾನ ಮೇಳಗಳ ಕಲಾವಿದರ ನೆರವಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಮುಂದಾಗಿದೆ.

ಅಕಾಡೆಮಿಯ ವತಿಯಿಂದ ಪ್ರತಿ ವರ್ಷ ಲಕ್ಷಾಂತರ ರೂ. ವ್ಯಯಿಸಿ ತರಬೇತಿ, ಪ್ರಾತ್ಯಕ್ಷಿಕೆ, ದಾಖಲೀಕರಣ ಮುಂತಾದವನ್ನು ಮಾಡಲಾಗುವುದು. ಆದರೆ ಈ ಬಾರಿ ಕೋವಿಡ್-19ದಿಂದಾಗಿ ಅಂತಹ ಯಾವುದೇ ಚಟುವಟಿಕೆ ನಡೆದಿಲ್ಲ. ಹೀಗಾಗಿ ಈ ನಿಧಿಯಲ್ಲಿ ಹೆಚ್ಚಿನ ಮೊತ್ತವನ್ನು ತುರ್ತು ಸಹಾಯಧನವಾಗಿ ಕಲಾವಿದರಿಗೆ ನೀಡುವ ಬಗ್ಗೆ ಅಕಾಡೆಮಿ ಚಿಂತಿಸಿದೆ.
Advertisement

ಅಕಾಡೆಮಿ ಅನುದಾನದ ಜತೆಗೆ ಸಾರ್ವಜನಿಕರು, ಯಕ್ಷಗಾನ ಅಭಿಮಾನಿ ಗಳಿಂದ ದೇಣಿಗೆಯನ್ನು ಸಂಗ್ರಹಿಸಿ ಕಲಾವಿದರಿಗೆ ನೀಡಲು ಚಿಂತನೆ ನಡೆಯುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಕನ್ನಡ – ಸಂಸ್ಕೃತಿ ಇಲಾಖೆ ನೆರವು
ಅರ್ಥಿಕವಾಗಿ ಸಮಸ್ಯೆಗೊಳಗಾದ ಕಲಾವಿದರಿಗೆ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ 2 ಸಾವಿರ ರೂ. ಸಹಾಯಧನ ನೀಡುವ ಯೋಜನೆಗೆ ಅಕಾಡೆಮಿ 699 ಸದಸ್ಯರನ್ನು ಶಿಫಾರಸು ಮಾಡಿದೆ. ಶೀಘ್ರದಲ್ಲಿ ಅವರ ಖಾತೆಗಳಿಗೆ ಹಣ ಜಮೆಯಾಗಲಿದೆ. ಕೇವಲ ವೃತ್ತಿ ಕಲಾವಿದರಿಗೆ ಮಾತ್ರವಲ್ಲದೆ ಕಲೆ ಯನ್ನೇ ಆಶ್ರಯಿಸಿ ಬದುಕು ತ್ತಿರುವ ತರಬೇತುದಾರರು ಮತ್ತಿತರರಿಗೂ ಈ ಸೌಲಭ್ಯ ಸಿಗಲಿದೆ.

ಬೆಳಕು ಚೆಲ್ಲಿದ ಉದಯವಾಣಿ
ಲಾಕ್‌ಡೌನ್‌ ಕಾರಣ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಸ್ಥಗಿತವಾಗಿದ್ದು, ಕಲಾವಿದರು ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಉದಯವಾಣಿಯ ಶುಕ್ರವಾರದ ಸಂಚಿಕೆಯಲ್ಲಿ “ಕೊರೊನಾಘಾತ: ಯಕ್ಷಗಾನ ಕಲಾವಿದರಿಗೂ ಬೇಕು ನೆರವು’ ಎಂಬ ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next