Advertisement
ಆ. 4ರಿಂದ ಆ. 8ರ ವರೆಗೆ ಕೂಟ ನಡೆಯಲಿದೆ. ಇದು ದೇಶದಲ್ಲೇ ಮೊದಲ ಮಹಿಳಾ ಟಿ20 ಲೀಗ್ ಎಂದು ಸಂಘಟಕರು ಹೇಳಿದ್ದಾರೆ. ಕಾವೇರಿ, ನರ್ಮದಾ, ಸಿಂಧು, ಯಮುನಾ ಹೆಸರಿನ ನಾಲ್ಕು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಪ್ರತಿ ತಂಡದಲ್ಲೂ ರಾಷ್ಟ್ರ ಮಟ್ಟದಲ್ಲಿ ಆಡಿರುವ ಓರ್ವ ತಾರಾ ಆಟಗಾರ್ತಿ ಇರಲಿದ್ದಾರೆ.
ಬೆಂಗಳೂರಿನ ರೇವಾ ವಿಶ್ವ ವಿದ್ಯಾನಿಲ ಯದ ಸಮೀಪವಿರುವ ಟರ್ಫ್ ಮೈದಾನದ ಸಂಪ್ರಸಿದ್ಧಿ ನ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿವೆ. ಮೊದಲ ಪಂದ್ಯದಲ್ಲಿ ನರ್ಮದಾ ತಂಡವನ್ನು ಯಮುನಾ ತಂಡ ಎದುರಿಸಲಿದೆ. ಆಡಲಿರುವ ಪ್ರಮುಖರು
ಭಾರತ ಮಹಿಳಾ ತಂಡದ ಪರ ಆಡಿರುವ ವೇದಾ ಕೃಷ್ಣಮೂರ್ತಿ, ಆಕಾಂಕ್ಷಾ ಕೊಹ್ಲಿ, ರಾಜೇಶ್ವರಿ ಗಾಯಕ್ವಾಡ್, ಕೆ.ರಕ್ಷಿತಾ ಸೇರಿದಂತೆ ಅನೇಕ ಕ್ರಿಕೆಟ್ ಆಟಗಾರ್ತಿಯರು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.