ಇದೀಗ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದ್ದು ನೀತಿ ಸಂಹಿತೆಯೂ ಬುಧವಾರಕ್ಕೆ ಮುಗಿಯುವುದರಿಂದ ಮತ್ತೆ ಆಡಳಿತ ಯಂತ್ರ ಚುರುಕು ಗೊಳಿಸಬೇಕಾಗಿದೆ.
ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಹಾಗೂ ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳ ಫಲಿತಾಂಶವು ಭಾರ ತೀಯ ಜನತಾ ಪಾರ್ಟಿ ಗೆ, ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೊಡ್ಡ ಮಟ್ಟದ ಶಕ್ತಿ ತಂದುಕೊಟ್ಟಿದೆ. “”ಈ ಫಲಿತಾಂಶವು ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ನಮ್ಮ ಬಲ ವೃದ್ಧಿಗೊಳಿಸು ವು ದರ ಜತೆಗೆ ಎಲ್ಲ ವರ್ಗದವರು ಯಡಿಯೂರಪ್ಪ ಸರಕಾರದ ಹದಿನಾರು ತಿಂಗಳ ಸಾಧನೆ ಹಾಗೂ ಕಾರ್ಯಕ್ರಮ ಒಪ್ಪಿಕೊಂಡಿದ್ದಾರೆ ಎನ್ನು ವು ದನ್ನು ಸಾರು ತ್ತದೆ, ಈ ಫಲಿ ತಾಂಶ ವಿಪಕ್ಷಗಳ ಟೀಕೆ-ಆರೋಪಕ್ಕೆ ಉತ್ತರ” ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಬಿಹಾರ ವಿಧಾನಸಭೆ ಸೇರಿದಂತೆ ಗುಜರಾತ್, ಮಧ್ಯಪ್ರದೇಶ, ಒರಿಸ್ಸಾ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿ ಇತರ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿರುವುದು ಬಿಜೆಪಿ ವಲಯದಲ್ಲಿ ಉತ್ಸಾಹ ಇಮ್ಮುಡಿಗೊಂಡಂತಾಗಿದೆ.
ರಾಜ್ಯದ ವಿಷಯಕ್ಕೆ ಬಂದರೆ, ಸಂಪುಟ ವಿಸ್ತರಣೆ ಅಥವಾ ಪುನಾ ರಚನೆ ಕಸರತ್ತಿಗೆ ಕೈ ಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದಿಲ್ಲಿ ನಾಯಕರಿಂದ ಸಂಪೂರ್ಣ ಸ್ವಾತಂತ್ರ್ಯ ಸಿಗ ಬಹುದು. ಇಲ್ಲವೇ ಸೀಮಿತವಾಗಿ ಅನುಮತಿ ಸಿಗಬಹುದು. ಇದು ಬಹುದಿನ ಗಳಿಂದ ಕಾಯುತ್ತಿರುವ ಸಚಿವಾಕಾಂಕ್ಷಿ ಗಳಲ್ಲೂ ಹೊಸ ಆಸೆ ಮೂಡಿಸಿದೆ. ಆದಷ್ಟು ಬೇಗ ಆ ಪ್ರಕ್ರಿಯೆ ಪೂರ್ಣ ಗೊಳಿಸಿ ಮತ್ತೆ ಆಡಳಿತದತ್ತ ಗಮನ ಹರಿಸಬೇಕಾಗಿದೆ.
ಕೊರೊನಾ ಹಾಗೂ ಪ್ರವಾಹದ ನಡುವೆಯೇ ರಾಜ್ಯದಲ್ಲಿ ಚುನಾ ವಣೆ ಎದುರಾಗಿ ನೀತಿ ಸಂಹಿತೆ ಜಾರಿ ಯಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದವು. ಇದರಿಂದ ಒಂದಷ್ಟು ಸಮಸ್ಯೆಯೂ ಉಂಟಾ ಯಿತು. ಆದರೆ ಇದೀಗ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದ್ದು ನೀತಿ ಸಂಹಿತೆಯೂ ಬುಧವಾರಕ್ಕೆ ಮುಗಿಯುವುದರಿಂದ ಮತ್ತೆ ಆಡಳಿತ ಯಂತ್ರ ಚುರುಕುಗೊಳಿಸಬೇಕಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕಾಗಿದೆ. ಕೊರೊನಾ ಲಾಕ್‌ಡೌನ್ ಹಾಗೂ ಪ್ರವಾಹದಿಂದಾಗಿ ಆರ್ಥಿಕತೆ ಮೇಲೂ ಪರಿಣಾಮ ಬೀರಿದ್ದು ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿ ಬಜೆಟ್ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಮುಂದಿನ ಎರಡೂವರೆ ವರ್ಷ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಬಿಜೆಪಿ ಗಮನಹರಿಸಬೇಕಾಗಿದೆ.