Advertisement

Dharwad; ಸನಾತನ ಕಿಡಿ ಹೊತ್ತಿದರೆ ರಾಜ್ಯ ಮಣಿಪುರವಾಗುತ್ತದೆ: ಪೇಜಾವರ ಶ್ರೀ ಎಚ್ಚರಿಕೆ

07:48 PM Oct 06, 2023 | Team Udayavani |

ಧಾರವಾಡ: ಸನಾತನ ಧರ್ಮ ವಿರೋಧಿಸುವ ಮಟ್ಟಕ್ಕೆ ಕೈ ಹಾಕುವುದು ಸರಿಯಲ್ಲ, ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗದು, ಇದಕ್ಕೆ ಮಣಿಪುರ ರಾಜ್ಯವೇ ಉದಾಹರಣೆಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮನೆ ಮನೆಗೆ ಕಲ್ಲು ಹೊಡೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ? ಇದನ್ನು ಯಾರೂ ಸಹ ಸಣ್ಣ ವಿಚಾರ ಎಂಬುದಾಗಿ ತಿಳಿಯಬಾರದು. ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು. ಹೀಗಾಗಿ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜಕಾರಣಿಗಳು ಒಂದು ಪಕ್ಷಕ್ಕೆ ಸೀಮಿತವಲ್ಲ. ಸಮಾಜದ ಎಲ್ಲರ ಸುಖ ಶಾಂತಿಗೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರೂ ಸಮಾನರು ಎಲ್ಲವೂ ನಮ್ಮದು ಎಂಬ ಭಾವನೆ ಬರಬೇಕು. ಎಲ್ಲರ ಸುಖವನ್ನು ಬಯಸುವ ಕಾರ್ಯ ಆಗಬೇಕು ಎಂದರು.

ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದು:ಖವಾಗಬಾರದು. ಎಲ್ಲರೂ ಸಂತೋಷದಿಂದ ಇರಬೇಕು. ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರವಾಗಿದೆ. ಎಲ್ಲರೂ ಸುಖ ಸಂತೋಷದಿಂದ ಇರಬೇಕು, ಅದಕ್ಕಾಗಿ ಅಳವಡಿಸಿಕೊಳ್ಳವೇಕಾದ ನೀತಿ ನಿಯಮವೇ ಸನಾತನ ಧರ್ಮ. ಎಲ್ಲರಿಗೂ ಸುಖ ಸಿಗುವಂತೆ ನಾವು ಪ್ರಯತ್ನಿಸಬೇಕು. ಮಳೆ ಬಂದಾಗ ಇಡೀ ಊರಿಗೆ ಬರುತ್ತದೆ. ಹಾಗೇ ಸುಖ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ನಾವು ಇನ್ನೊಬ್ಬರ ಸುಖ ಬಯಸಿದರೆ ಮಾತ್ರ ಸುಖವಾಗಿರಲು ಸಾಧ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next