Advertisement
ಮೃತ ಯೋಧ ಪಾಟೀಲ ಜಮ್ಮುವಿನ ನಗರೋಟಾ ಸೆಕ್ಟರ್‌ನಲ್ಲಿ 651 ಎಂಜನಿಯರಿಂಗ್ ಪ್ಲಾಂಟ್ ಯೂನಿಟ್ ಮದ್ರಾಸ್ ರೆಜಿಮೆಂಟ್‌ನಲ್ಲಿ ಕಳೆದ 5 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಯೋಧನ ತಂದೆ-ತಾಯಿ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಸಹೋದರ ಕೂಡ ಶ್ರೀನಗರದಲ್ಲಿ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅಂತ್ಯಕ್ರಿಯೆಶನಿವಾರ ಮದ್ಯಾಹ್ನ 12 ಗಂಟೆಗೆ ಗೋಕಾಕ್‌ನ ನಬಾಪೂರ (ಖನಗಾಂವ) ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.