Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾಲಕ್ಕೆ ಹೋಲಿಸಿದರೆ ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ ಎಂದರು.
ನ. 2, 3, 4ರಂದು ಬೆಂಗಳೂರಿನಲ್ಲಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಮೀಟ್ ನಡೆಯಲಿದೆ. ಕೈಗಾರಿಕಾ ವಲಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ 50 ಸಾವಿರ ಎಕ್ರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಪ್ರತೀ ಜಿಲ್ಲೆಯಲ್ಲಿ 1 ಸಾವಿರ ಎಕ್ರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗುವುದು. ಒಂದು ಜಿಲ್ಲೆ-ಒಂದು ಉತ್ಪನ್ನ ಕಡೆಗೆ ಹೆಚ್ಚಿನ ಗಮನಹರಿಸಲಾಗುವುದು. ಉಡುಪಿ ಜಿಲ್ಲೆಗೆ ಫರ್ನಿಚರ್ ಪಾರ್ಕ್ ಮತ್ತು ಮಹಿಳಾ ಉದ್ಯಮ ಪಾರ್ಕ್ ಸ್ಥಾಪನೆಗೆ ಬೇಡಿಕೆ ಸಲ್ಲಿಸಿದ್ದಾರೆ ಎಂದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ. ಹೆಚ್ಚಿನ ಅಂತರದಿಂದ ಗೆಲುವು ಸಾಧ್ಯವಾಗಲಿದೆ ಎಂದರು.
Related Articles
ಕೇಂದ್ರದ ಹಿರಿಯರು ತಮ್ಮ ಅನುಭವದ ಆಧಾರದಲ್ಲಿ ಮಾರ್ಗದರ್ಶನ ಮಾಡುತ್ತಾರೆ. ನಮಗೆ 150 ಸೀಟು ಗೆಲ್ಲುವ ಗುರಿ ಕೊಟ್ಟಿದ್ದಾರೆ. ಅದರಲ್ಲಿ 135ಕ್ಕೂ ಅಧಿಕ ಸೀಟು ಗೆಲ್ಲುವ ವಿಶ್ವಾಸವಿದೆ ಎಂದರು.
Advertisement
ಕಲ್ಲಿದ್ದಲು ದರ ಏರಿಕೆಥರ್ಮಲ್ ಪವರ್ ಪ್ಲಾಂಟ್‌ಗೆ ಸರಬರಾಜಾಗುವ ಕಲ್ಲಿದ್ದಲು ದರ ಏರಿಕೆ ಯಾದ ಕಾರಣ ವಿದ್ಯುತ್ ದರ ಕೂಡ ಏರಿಕೆಯಾಗಿದೆ. ಹಿಂದೆ ಪ್ರತೀ ಟನ್ ದರ 5,000ದಿಂದ 6,000 ರೂ. ಇರುತ್ತಿತ್ತು. ಈಗ ಪ್ರತೀ ಟನ್‌ಗೆ 12ರಿಂದ 15 ಸಾವಿರ ರೂ.ಗೆ ಏರಿಕೆಯಾಗಿದೆ. ಇದು ಕೇವಲ ತಾತ್ಕಾಲಿಕ ದರ ಹೆಚ್ಚಳವಾಗಿದ್ದು, ಕಲ್ಲಿದ್ದಲು ದರ ಇಳಿಕೆಯಾದಾಗ ವಿದ್ಯುತ್ ದರವೂ ಇಳಿಕೆಯಾಗುತ್ತದೆ ಎಂದರು.