Advertisement

Bengaluru Tech ನಾವೀನ್ಯತೆಗಳ ಸವಾಲುಗಳಿಗೆ ರಾಜ್ಯ ಸಿದ್ಧ: ಪ್ರಿಯಾಂಕ್‌ ಖರ್ಗೆ

08:06 PM Aug 28, 2023 | Team Udayavani |

ಬೆಂಗಳೂರು: ಬೆಂಗಳೂರು ಟೆಕ್‌ ಶೃಂಗಸಭೆಯ 26ನೇ ಆವೃತ್ತಿ ನವೆಂಬರ್‌ 29 ರಿಂದ ಡಿಸೆಂಬರ್‌ 1ರವೆಗೆ ನಡೆಯಲಿದೆ. ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್‌, ಜಪಾನ್‌, ನೆದರ್‌ಲ್ಯಾಂಡ್‌, ಇಸ್ರೇಲ್‌, ಇಂಗ್ಲೆಂಡ್‌, ಸ್ವಿಡ್ಜರ್‌ಲ್ಯಾಂಡ್‌ ಸೇರಿ ಸುಮಾರು ಐವತ್ತಕ್ಕೂ ಅಧಿಕ ದೇಶಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Advertisement

ಸುಮಾರು 200ಕ್ಕೂ ಹೆಚ್ಚು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಪರಿಣಿತರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಗ್ಲೋಬಲ್‌ ಇನ್ನೋವೇಷ‌ನ್‌ ಅಲೈನ್ಸ್‌ (ಜಿಐಎ) ಪಾಲುದಾರ ದೇಶಗಳಿಂದ ಸುಮಾರು 16 ಸಂವಾದಗಳು ನಡೆಯಲಿವೆ.

ಕೃತಕ ಬುದ್ದಿಮತ್ತೆ, ಸೆಮಿಕಂಡಕ್ಟರ್‌, ಕ್ವಾಂಟಂ ಕಂಪ್ಯೂಟಿಂಗ್‌, ಸ್ಪೇಸ್‌ ಟೆಕ್‌, ಡಿಜಿಟಲ್‌ ಹೆಲ್ತ್‌, ಇ-ಕಾಮರ್ಸ್‌ ಮತ್ತು 6ಜಿ ಬಗ್ಗೆ ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಜಿಐಎ ಪ್ರತಿನಿಧಿಗಳು ಸಭೆ ನಡೆಸಿದರು.

ಆಸ್ಟ್ರೇಲಿಯಾ, ಫ್ರಾನ್ಸ್‌, ಜಪಾನ್‌, ನೆದರ್‌ಲ್ಯಾಂಡ್‌, ಇಸ್ರೇಲ್‌, ಇಂಗ್ಲೆಂಡ್‌, ಸ್ವಿಡ್ಜರ್‌ಲ್ಯಾಂಡ್‌, ಪೋಲೆಂಡ್‌ನ‌ ದೂತವಾಸದ ಕಚೇರಿಯ ಹಿರಿಯ ಅಧಿಕಾರಿಗಳ ಭಾಗವಹಿಸಿ ಬೆಂಗಳೂರು ಟೆಕ್‌ ಸಮಿತಿಗೆ ಬೆಂಬಲ ಸೂಚಿಸಿದರು. ಭಿನ್ನರೀತಿಯ ಆಲೋಚನೆಗೆ ಮುನ್ನಡಿ ಬರೆಯುವ ಟೆಕ್‌ ಶೃಂಗಸಭೆ ಎದುರು ನೋಡುತ್ತಿರುವುದಾಗಿ ಹೇಳಿದರು. ಇದೇ ವೇಳೆ ತಮ್ಮ ತಮ್ಮ ರಾಷ್ಟ್ರಗಳಲ್ಲಿ ಆಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆ ತೆರೆದಿಟ್ಟರು.

ಹೊಸ ಆವಿಷ್ಕಾರಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಜಗತ್ತು ಇಂದು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಪರಿಹರಿಸುವಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ನಿರತವಾಗಿದೆ, ಹವಾಮಾನ ಬದಲಾವಣೆಯ ಪರಿಹಾರ, ಆರೋಗ್ಯ ರಕ್ಷಣೆ ಹಾಗೂ ಸೈಬರ್‌ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ಗಡಿಗಳನ್ನು ಮೀರಿ ಸಮಗ್ರ ಪರಿಹಾರಗಳನ್ನು ರೂಪಿಸಬೇಕಾಗಿದ್ದು ಮಾನವ ಕುಲಕ್ಕೆ ಪ್ರಯೋಜನವಾಗುವಂತಹ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕಾಗಿದೆ. ಕರ್ನಾಟಕ ನಾವೀನ್ಯತೆಗಳ ಸವಾಲುಗಳಿಗೆ ಸಿದ್ಧವಿದೆ ಎಂದರು.

Advertisement

ಸಾಫ್ಟ್‌ವೇರ್‌ ತಂತ್ರಜ್ಞಾನಗಳ ರಫ್ತಿನ ವಿಚಾರದಲ್ಲಿ ರಾಜ್ಯ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಸಾಫ್ಟ್‌ವೇರ್‌ ರಫ್ತು ಪ್ರಮಾಣದಲ್ಲಿ ಶೇ.40 ಕರ್ನಾಟಕದ್ದಾಗಿದೆ. ಬೆಂಗಳೂರು ವಿಶ್ವದ ನಾಲ್ಕನೆ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್‌ ಆಗಿದ್ದು ನಾವು ವಿಶ್ವದ ಅತ್ಯುತ್ತಮ ನುರಿತ ಉದ್ಯೋಗಿಗಳನ್ನು ಹೊಂದಿದ್ದೇವೆ ಎಂದು ಹೇಳಿದರು.

ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ನಾವು ಕೌಶಲ್ಯ ಸಲಹಾ ಸಮಿತಿ ಹೊಂದಿದ್ದೇವೆ, ಸೈಬರ್‌ ಸೆಕ್ಯುರಿಟಿ, ಅಗ್ರಿ ಇನೋವೇಶನ್‌, ಡೇಟಾ ಸೈನ್ಸ್‌, ಏರೋಸ್ಪೇಸ್‌, ಸೆಮಿಕಂಡಕ್ಟರ್‌ ಫೇಬಲ್ಸ…, ಮೆಷಿನ್‌ ಇಂಟೆಲಿಜೆನ್ಸ್‌ ರೊಬೊಟಿಕ್ಸ್‌ ಅನಿಮೇಷನ್‌ ಕ್ಷೇತ್ರದಲ್ಲಿ ಪರಿಣಿತ ಹೊಂದಿ ತಂತ್ರಜ್ಞಾನರನ್ನು ಹೊಂದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌, ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ದರ್ಶನ್‌ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next