Advertisement

ರಾಜ್ಯದ ಪಡಿತರ ಚೀಟಿ ಫ‌ಲಾನುಭವಿಗಳಿಗೆ 10 ಕೆ.ಜಿ. ಆಹಾರಧಾನ್ಯ

01:25 AM Apr 28, 2021 | Team Udayavani |

ಬೆಂಗಳೂರು : ರಾಜ್ಯದ ಆದ್ಯತೆಯ ಪಡಿತರ ಚೀಟಿ ಫ‌ಲಾನುಭವಿಗಳಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯ ಸಿಗಲಿದೆ.

Advertisement

ಮೇ, ಜೂನ್‌ನಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಅಂತ್ಯೋದಯ ಮತ್ತು ಆದ್ಯತೆಯ ಪಡಿತರ ಚೀಟಿಯ ಫ‌ಲಾನುಭವಿಗಳಿಗೆ 5 ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ.

ಇದರ ಜತೆಗೆ ಕೇಂದ್ರದಿಂದಲೂ 5 ಕೆ.ಜಿ. ಆಹಾರ ಧಾನ್ಯ ಸಿಗಲಿದೆ. ಹೀಗಾಗಿ ರಾಜ್ಯದ ಫ‌ಲಾನುಭವಿಗಳಿಗೆ ಒಟ್ಟು 10 ಕೆ.ಜಿ. ಸಿಗಲಿದೆ.

2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2.62 ಲಕ್ಷ ಮೆ. ಟನ್‌ ಭತ್ತ, 4.52 ಲಕ್ಷ ಮೆ. ಟನ್‌ ರಾಗಿ ಮತ್ತು 72,238 ಮೆ. ಟನ್‌ ಜೋಳವನ್ನು ರಾಜ್ಯದ ರೈತರಿಂದ ಖರೀದಿಸಲಾಗಿದೆ. ಈ ಆಹಾರ ಧಾನ್ಯಗಳನ್ನು ರಾಜ್ಯದಲ್ಲಿಯೇ ಉಪಯೋಗಿಸಿಕೊಳ್ಳಲಾಗುತ್ತಿದ್ದು, 14 ಜಿಲ್ಲೆಗಳಲ್ಲಿ 5 ಕೆ.ಜಿ. ಅಕ್ಕಿಯ ಬದಲು 3 ಕೆ.ಜಿ. ರಾಗಿ ಮತ್ತು 2 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next