ಹುಮನಾಬಾದ: ಶಿವಮೊಗ್ಗದ ಹುಣಸೋಡು ಸ್ಪೋಟ ಪ್ರಕರಣವನ್ನು ರಾಜ್ಯದ ಪೊಲೀಸರೇ ಸಮಗ್ರ ತನಿಖೆ ನಡೆಸುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವ ಸಾಮರ್ಥ್ಯ ನಮ್ಮ ಅಧಿಕಾರಿಗಳು ಹೊಂದಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನಾ ಸ್ಥಳಕ್ಕೆ ಖುದ್ದು ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಪ್ರಕರಣದ ಮಾಹಿತಿ ಪಡೆದು ಕೊಂಡಿದ್ದಾರೆ. ಅಲ್ಲದೆ, ನಮ್ಮ ರಾಜ್ಯದ ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದು, ಅಂತಹ ಅವಶ್ಯಕತೆ ಬಂದರೆ ಸಿಬಿಐಗೆ ಒಪ್ಪಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ಕೃಷಿ ಉತ್ಪನ್ನ ಸಾಗಿಸಲು ದ್ವಿಚಕ್ರ ವಾಹನಕ್ಕೆ ಟ್ರೈಲರ್ : ಎಲ್ಲರ ಗಮನ ಸೆಳೆದ ವಿನೂತನ ಪ್ರಯೋಗ
ರಾಜ್ಯದಲ್ಲಿ ಗಣಿಗಾರಿಕೆಗೆ ಸ್ಪೋಟಕಗಳು ಬಳಸುವುದು ನಿಷೇಧಿಸಬೇಕಾಗಿದೆ. ಸ್ಪೋಟಕ ಸಾಮಗ್ರಿ ಖರೀದಿ, ಶೇಖರಣೆ ಬಗ್ಗೆ ಕೂಡ ಕಠಿಣ ನಿಯಮಗಳನ್ನು ರೂಪಿಸಲು ಸರ್ಕಾರ ಕ್ರಮ ವಹಿಸುತ್ತದೆ ಎಂದು ಡಿಸೆಂ ಕಾರಜೋಳ ತಿಳಿಸಿದರು.
ಇದನ್ನೂ ಓದಿ: ಹುಣಸೋಡು ಬ್ಲಾಸ್ಟ್ ಪ್ರಕರಣದ ತನಿಖೆ ಸಿಬಿಐಗೆ ವಹಿಸಲ್ಲ: ಆರ್.ಅಶೋಕ್