Advertisement

ರಾಜ್ಯ ಯೋಜನೆಗಳ ವಿಲೀನ?

09:32 AM Feb 14, 2018 | Team Udayavani |

ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (ಎನ್‌ಎಚ್‌ಪಿಎಸ್‌)ಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಸರಕಾರಗಳು ಈಗಾಗಲೇ ಘೋಷಣೆ ಮಾಡಿರುವ ಆರೋಗ್ಯ ಯೋಜನೆಗಳನ್ನೂ ವಿಲೀನ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಶೀಘ್ರದಲ್ಲಿಯೇ ವಿವಿಧ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜತೆಗೆ ಸಭೆ ನಡೆಯಲಿದೆ. ಅದರಲ್ಲಿ ಯೋಜನೆಯ ರೂಪುರೇಷೆಗಳನ್ನು ಚರ್ಚಿಸಿ ಪರಾಮರ್ಶಿಸಲಾಗುತ್ತದೆ. ಯೋಜನೆಯ ಅಷ್ಟೂ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಹಂಚಿಕೊಳ್ಳುವ ಬಗ್ಗೆಯೂ ವಿಚಾರ ವಿನಿಮಯ ನಡೆವ ಸಾಧ್ಯತೆ ಇದೆ. 

Advertisement

10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷ ರೂ. ವಿಮೆ ನೀಡುವ ಯೋಜನೆ ಇದಾಗಿದೆ. ಅದಕ್ಕಾಗಿ ಕೇಂದ್ರ ಸರಕಾರದ ವತಿಯಿಂದ ಈಗಾಗಲೇ 2 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿದೆ. ಯೋಜನೆ ಹೇಗೆ ಇರಬೇಕು ಮತ್ತು ಯಾವ ರೀತಿ ಜಾರಿಯಾಗಬೇಕು ಎಂಬ ವಿವರವಾಗಿರುವ ಟಿಪ್ಪಣಿ ಈಗಾಗಲೇ ಸಿದ್ಧಗೊಂಡಿದೆ. 

ನೀತಿ ಆಯೋಗ ನಡೆಸಿದ ಅಧ್ಯಯನದಲ್ಲಿ ವಿವಿಧ ರಾಜ್ಯಗಳಲ್ಲಿರುವ ಆರೋಗ್ಯ ಯೋಜನೆಗಳನ್ನು ಕೂಡ ಕೇಂದ್ರದ ಯೋಜನೆ ವ್ಯಾಪ್ತಿಯಲ್ಲಿ ವಿಲೀನಗೊಳಿಸುವ ಬಗ್ಗೆ ನೀತಿ ಆಯೋಗ ಅಧ್ಯಯನ ನಡೆಸಿದೆ. ಜತೆಗೆ ಅದರ ಅನುಷ್ಠಾನಕ್ಕಾಗಿ 12 ಸಾವಿರ ಕೋಟಿ ರೂ. ಬೇಕಾಗಬಹುದೆಂದು ಅದು ಅಂದಾಜಿಸಿದೆ. ಸುಮಾರು ಎರಡು ವರ್ಷಗಳಿಂದಲೇ ಯೋಜನೆ ಜಾರಿ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next