Advertisement
ಪ್ರಸಕ್ತ ಸಾಲಿನಲ್ಲಿ 17 ತಾಂತ್ರಿಕೇತರ ಕೋರ್ಸ್‌ಗಳ ಜತೆಗೆ 14 ಕೋರ್ಸ್‌ಗಳಿಗೂ ಯುಜಿಸಿ ಮಾನ್ಯತೆ ನೀಡಿದೆ. 17 ಕೋರ್ಸ್‌ಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದೇವೆ. ಉಳಿದ 14 ಕೋರ್ಸ್‌ಗಳಿಗೆ 2ನೇ ಹಂತದಲ್ಲಿ ಅರ್ಜಿ ಆಹ್ವಾನಿಸ ಲಿದ್ದೇವೆ. ಯುಜಿಸಿಯಿಂದ ಮಾನ್ಯತೆ ಪಡೆಯವ ಪ್ರಕ್ರಿಯೆಯಿಂದ ಪ್ರಸಕ್ತ ಸಾಲಿನಲ್ಲಿ ದಾಖಲಾತಿ ಪ್ರಕ್ರಿಯೆ ಮೂರು ತಿಂಗಳು ತಡವಾಗಿದೆ. ಎಂಬಿಎ ಹಾಗೂ ಬಿ.ಇಡಿ. ಕೋರ್ಸ್‌ಗೂ ಯುಜಿಸಿ ಮಾನ್ಯತೆ ನೀಡಿದೆ. 2019ರ ಜನವರಿಯಲ್ಲಿ ಇದಕ್ಕೆ ಪ್ರವೇಶ ಪರೀಕ್ಷೆ ನಡೆಸಲಿದ್ದೇವೆ. ಎಲ್‌ಎಲ್‌ಎಂ ಕೋರ್ಸ್‌ನ ಮಾನ್ಯತೆಗೂ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
2013-14, 2014-15 ಹಾಗೂ 2015-16 ರಲ್ಲಿ ವಿವಿಯ ವಿವಿಧ ಕೋರ್ಸ್‌ಗಳಿಗೆ ಸೇರಿ ಪದವಿ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿ ಗಳಿಗೆ ಪದವಿ ಪ್ರಮಾಣ ಕೊಡಿಸುವ ಬಗ್ಗೆ ಯುಜಿಸಿ ಜತೆ ನಿರಂತರ ಮಾತುಕತೆ ನಡೆಸುತ್ತಿ ದ್ದೇವೆ. ಈ ಎಲ್ಲ ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಗಳಿಗೆ ಸೇರಿಕೊಳ್ಳಲು ಅವಕಾಶ ಇದೆ. ಅಂಥ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ವಿನಾಯಿತಿ ನೀಡಲಿದ್ದೇವೆ. ಹಾಗೆಯೇ ಮಹಿಳಾ ಅಭ್ಯರ್ಥಿಗಳಿಗೂ ಶೇ.50ರಷ್ಟು ಶುಲ್ಕ ವಿನಾಯಿತಿ ಇದೆ ಎಂದು ಕುಲಪತಿ ಮಾಹಿತಿ ನೀಡಿದರು.