ಕುಂದಾಪುರ/ ತೆಕ್ಕಟ್ಟೆ: ಸುಣ್ಣಾರಿಯ ಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿ ನಡೆಯುತ್ತಿರುವ ಪ.ಪೂ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಬಾಲ ಕರ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಬಾಲಕಿಯರ ಕ್ವಾರ್ಟರ್ ಫೈನ ಲ್‌ನಲ್ಲಿ ಉಡುಪಿ ತಂಡ ಗದಗ ತಂಡದ ವಿರುದ್ಧ 25-17, 25-15 ಅಂತರದಿಂದ; ದ.ಕ. ತಂಡ ಬೆಳಗಾವಿ ವಿರುದ್ಧ 24-26, 25-15, ಟೈ ಬ್ರೇಕರ್‌ನಲ್ಲಿ 15-6ರಿಂದ ಜಯ ಸಾಧಿಸಿತು.
ಸೆಮಿಫೈನಲ್‌ನಲ್ಲಿ ಉಡುಪಿಯ ಬಾಲಕಿಯರ ತಂಡ ವಿಜಯನಗರ ತಂಡವನ್ನು, ದ.ಕ. ತಂಡ ಮೈಸೂರು ತಂಡವನ್ನು ಎದುರಿಸಲಿದೆ.
ಬಾಲಕರ ವಿಭಾಗ
ಬಾಲಕರ ವಿಭಾಗದಲ್ಲಿ ಉಡುಪಿ ತಂಡ ಚಾಮರಾಜನಗರ ತಂಡದ ವಿರುದ್ಧ 25-20, 24-26, ಟೈ ಬ್ರೇಕರ್‌ನಲ್ಲಿ 15-13ರಿಂದ ಜಯ ಸಾಧಿಸಿತು. ದ.ಕ. ತಂಡ ಚಿಕ್ಕಮ ಗಳೂರು ತಂಡದ ಎದುರು 25-18, 25-18 ಅಂತರದಿಂದ ಗೆಲುವು ಕಂಡಿತು. ವಿಜೇತ ತಂಡಗಳು ಕ್ರಮವಾಗಿ ತುಮಕೂರು ಹಾಗೂ ಮೈಸೂರು ತಂಡದ ವಿರುದ್ಧ ಸೆಮಿಫೈನಲ್ ಆಡಲಿವೆ. ಸೆಮಿಫೈನಲ್, ಫೈನಲ್ ಪಂದ್ಯಗಳು ಡಿ. 10ರಂದು ನಡೆಯಲಿವೆ.
Related Articles
ಗಮನಸೆಳೆದ ಕುಟ್ಟಪ್ಪ
ಅಪಘಾತದಲ್ಲಿ ಕಾಲು ಕಳೆದುಕೊಂಡ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಆಟಗಾರ ಕುಟ್ಟಪ್ಪ ಅವರು ಕೃತಕ ಕಾಲಿನೊಂದಿಗೆ ಅದ್ಭುತ ಆಟ ಪ್ರದರ್ಶಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಪ್ರಧಾನ ತೀರ್ಪುಗಾರರಾಗಿ ಉಡುಪಿ ಜಿಲ್ಲಾ ಪ.ಪೂ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ ಹಾಗೂ ಇತರ ತೀರ್ಪುಗಾರರು ಭಾಗವಹಿಸಿ ದ್ದರು. ಈ ಸಂದರ್ಭದಲ್ಲಿ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಎಕ್ಸಲೆಂಟ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ| ರಮೇಶ್ ಶೆಟ್ಟಿ, ಸುಜ್ಞಾನ್ ಎಜು ಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಉಪನ್ಯಾಸಕ ವೃಂದ, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.