ಶಿರಸಿ: 14 ಹಾಗೂ 17 ವರ್ಷ ವಯೋಮಾನದೊಳಗಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಡಿ.7ರ ಗುರುವಾರ ಸಂಪನ್ನವಾಯಿತು.
ಮೂರು ದಿನಗಳ ಕಾಲ ಶಿರಸಿ ಶೈಕ್ಷಣಿಕ ಜಿಲ್ಲೆಯ ಆತಿಥ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುತೇಕ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಸ್ಪರ್ಧಾ ತಂಡಗಳು ಗೆಲುವಿನ ನಗೆ ಬೀರಿತು.
14 ವರ್ಷ ವಯೋಮಿತಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಪ್ರಥಮ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಜಿಲ್ಲೆ ಪ್ರಥಮ ಹಾಗೂ ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
17 ವರ್ಷದ ವಯೋಮಿತಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಪ್ರಥಮ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಬೆಳಗಾಂವ್ ಜಿಲ್ಲೆ ಪ್ರಥಮ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.
ವಿಜೇತರಿಗೆ ಇಲಾಖೆಯ ಡಿಡಿಪಿಐ ಬಸವರಾಜ ಪಾರಿ, ಬಿಇಓ ನಾಗರಾಜ ನಾಯ್ಕ ಬಹುಮಾನ ವಿತರಿಸಿದರು.
ರಾಜ್ಯದ ವಿವಿಧಡೆಯಿಂದ 126 ತಂಡದಿಂದ 700 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. 150ಕ್ಕೂ ಅಧಿಕ ನಿರ್ಣಾಯಕರು ಭಾಗವಹಿಸಿದ್ದರು.