Advertisement

ರಾಜ್ಯಮಟ್ಟದ ಈಜು ಸ್ಪರ್ಧೆ: ಪುತ್ತೂರು ಬಾಲಕಿಗೆ ಬೆಳ್ಳಿ  ಪದಕ

12:42 PM Jun 06, 2018 | Team Udayavani |

ಪುತ್ತೂರು: ಪುತ್ತೂರು ಅಕ್ವೆಟಿಕ್‌ ಕ್ಲಬ್‌ನ ಸದಸ್ಯೆ, 8 ವರ್ಷದ ಬಾಲಕಿ ಮೋನ್ಯಾ ಕೌಸುಮಿ ಅವರು ಮೈಸೂರಿನಲ್ಲಿ ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ ಆಯೋಜಿಸಿದ ಜೂನಿಯರ್‌ ಹಾಗೂ ಸಬ್‌ ಜ್ಯೂನಿಯರ್‌ ರಾಜ್ಯ ಅಕ್ವೆಟಿಕ್‌
ಚಾಂಪಿಯನ್‌ಶಿಪ್‌ನ 50 ಮೀ. ಫ್ರೀ ಸ್ಟೈಲ್‌ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

Advertisement

ಕಡಿಮೆ ವಯಸ್ಸಿನಲ್ಲೇ ಜ್ಯೂನಿಯರ್‌ ಸ್ಟೇಟ್‌ ಮೀಟ್‌ನಲ್ಲಿ ಭಾಗವಹಿಸಿ ಪದಕ ಪಡೆದ ಸಾಧನೆಯೊಂದಿಗೆ ಪುಣೆಯಲ್ಲಿ ಜೂ. 26ರಂದು ನಡೆಯುವ ರಾಷ್ಟ್ರೀಯ ಅಕ್ವೆಟಿಕ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಪುತ್ತೂರು ಅಕ್ವೆಟಿಕ್‌ ಕ್ಲಬ್‌ನ ನೀಲ್‌ ಮಸ್ಕರೇನಸ್‌ (14 ವರ್ಷ) 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದ ಪಾರ್ಥ ವಾರಣಾಸಿ, ನಿರೂಪ್‌ ಜಿ.ಆರ್‌. ಹಾಗೂ ರೋಹಿತ್‌ ಅವರಿಂದ ತರಬೇತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next