Advertisement

ಚಾರಿತ್ರಿಕ ದಾಖಲೆಗಳ ಉಪಯೋಗದ ಅರಿವು ಮೂಡಿಸಿ: ಡಾ|ವಂಶಿಕೃಷ್ಣ

10:38 AM Apr 27, 2018 | Team Udayavani |

ಮಹಾನಗರ : ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂಸ್ಕೃತಿ ಬಗ್ಗೆ ಪೂರ್ಣ ಪ್ರಮಾಣದ ಅರಿವು ಇಲ್ಲದೇ ಇರುವುದರಿಂದ ಚಾರಿತ್ರಿಕ ದಾಖಲೆಗಳ ಉಪಯೋಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಪಲಿಮಾರು ತತ್ವ ಸಂಶೋಧನ ಕೇಂದ್ರದ ನಿರ್ದೇಶಕ ಡಾ| ವಂಶಿಕೃಷ್ಣ ಆಚಾರ್ಯ ಅಭಿಪ್ರಾಯಪಟ್ಟರು.

Advertisement

ಮಂಗಳೂರಿನ ರಥಬೀದಿಯ ಡಾ| ಪಿ.ದಯಾನಂದ ಪೈ, ಪಿ.ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ದಶಮಾನೋತ್ಸವದ ಅಂಗವಾಗಿ ಕಾಲೇಜಿನ ಇತಿಹಾಸ ವಿಭಾಗ, ಐಕ್ಯೂಎಸಿ, ವಿಭಾಗೀಯ ಪತ್ರಾಗಾರ ಕಚೇರಿ ಮೈ ಮೈಸೂರು, ಮಂಗಳೂರು ವಿವಿ ಇತಿಹಾಸ ಪ್ರಾಧ್ಯಾಪಕರ ಸಂಘ (ಮಾನುಷ)ಇದರ ಜಂಟಿ ಆಶ್ರಯದಲ್ಲಿ ‘ಚಾರಿತ್ರಿಕ ದಾಖಲೆಗಳ ಮಹತ್ವ ಅದರ ಅರಿವು ‘ವಿಷಯದ ಕುರಿತು ಚರಿತ್ರೆಯ ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸ ಪ್ರಾಧ್ಯಾಪಕರುಗಳಿಗೆ ಉಡುಪಿಯ ನಿರ್ಮಿತಿ ಕೇಂದ್ರದ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಭಾಷಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಸಂಸ್ಕೃತಿಯನ್ನು ತಿಳಿಸುವ ಗ್ರಂಥಗಳು ತಾಡವೊಲೆ ಕಡತಗಳ ರೂಪದಲ್ಲಿದ್ದು, ಅವುಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗ್ರಾಮೀಣ ಪ್ರದೇಶದಲ್ಲಿ ನಿಜವಾದ ಸಂಪತ್ತುಗಳಿದ್ದು, ಮಠ-ಮಂದಿರಗಳಲ್ಲಿ ದಾಖಲೆಗಳು ಇನ್ನು ಉಳಿದಿದೆ. ವಿದ್ಯಾರ್ಥಿಗಳು ತಮ್ಮ ಸ್ಥಾನದಲ್ಲಿ ಇಂತಹ ದಾಖಲೆಗಳು ಸಿಕ್ಕಾಗ ಅದನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಥಬೀದಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜ ಶೇಖರ ಹೆಬ್ಟಾರ್‌ ಅಧ್ಯಕ್ಷತೆ ವಹಿಸಿ, ಬದುಕು ಇತಿಹಾಸವಾಗಬೇಕು, ವಿದ್ಯಾರ್ಥಿಗಳು ಸಂಶೋಧನೆಗೆ ಒತ್ತು ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ನಿರ್ಮಿತ ಕೇಂದ್ರ ಯೋಜನಾ ನಿರ್ದೇಶಕ ಅರುಣ್‌ ಕುಮಾರ್‌, ಪ್ರಾಜೆಕ್ಟ್ ಇಂಜಿನಿಯರ್‌ ಚೇತನ್‌, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಹೆಗ್ಡೆ, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಭಾಗವಹಿಸಿದ್ದರು. 

Advertisement

ಮಾನುಷದ ಅಧ್ಯಕ್ಷ ಡಾ| ತಾರಾ ರಾವ್‌ ಉಪಸ್ಥಿತಿಯಲ್ಲಿ ವಿವಿಧ ಕಾಲೇಜಿ ನಿಂದ ಆಗಮಿಸಿದ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು. ಮಾನುಷದ ಕಾರ್ಯದರ್ಶಿ ಡಾ| ಗಣಪತಿ ಗೌಡ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕ ಡಾ| ನವೀನ್‌ ಎನ್‌.ಕೊಣಾಜೆ ವಂದಿಸಿದರು. ರಥಬೀದಿ ವಿದ್ಯಾರ್ಥಿನಿ ಪೂರ್ಣಿಮಾ ನಿರೂಪಿಸಿದರು.

ವಿಚಾರಗೋಷ್ಠಿ
ವಿಚಾರಸಂಕಿರಣದ ಪ್ರಥಮ ಅವಧಿಯಲ್ಲಿ ಪತ್ರಾಗಾರದ ವೀಕ್ಷಣೆಯನ್ನು ಡಾ| ಮೋಹಿತ್‌ ಸುವರ್ಣ ಅವರ ನೇತೃತ್ವದಲ್ಲಿ ಏರ್ಪಡಿಸಲಾಯಿತು. ಎರಡನೇ ಗೋಷ್ಠಿಯಲ್ಲಿ ಡಾ| ಹರೀಶ್‌ ಪೈ ಅವರು ಮಣಿಪಾಲದ ಪಾರಂಪರಿಕ ಕಲಾಗ್ರಾಮ ಬಗ್ಗೆ ಪ್ರಾತ್ಯಕ್ಷಿಕತೆ ನಡೆಸಿಕೊಟ್ಟರು. ಮೂರನೇ ಗೋಷ್ಠಿಯಲ್ಲಿ ಡಾ| ಗಣಪತಿ ಗೌಡ ಚಾರಿತ್ರಿಕ ದಾಖಲೆಗಳನ್ನು ಜನಸಾಮಾನ್ಯರು ಅರಿವಿಲ್ಲದೇ ಹೇಗೆ ವಿರೂಪಗೊಳಿಸುತ್ತಾರೆ ಮತ್ತು ಅವಜ್ಞೆಗೆ ಒಳಗಾಗುವುದನ್ನು ಉದಾಹರಣೆ ಸಹಿತ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next