Advertisement

ಪ್ರಕೃತಿಯನ್ನು ಸಂರಕ್ಷಿಸುವ ಹೊಣೆ ನಾಗರಿಕರ ಜವಾಬ್ದಾರಿ

01:09 PM Mar 02, 2022 | Team Udayavani |

ಆನೇಕಲ್‌: ಪ್ರಕೃತಿಯನ್ನು ಪ್ರೀತಿಸುವ,ಸಂರಕ್ಷಿಸುವ ಹೊಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನರಸಿಂಹರಾಜು ಹೇಳಿದರು.

Advertisement

ಪಟ್ಟಣದ ಅಕ್ಷರ ಪದವಿಪೂರ್ವ ಹಾಗೂ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ನಾಲ್ಕು ದಿನದ ರಾಜ್ಯಮಟ್ಟದ ರೋವರ್‌, ರೇಂಜರ್‌ಗಳ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರದ ಸಮಾರೋಪದಲ್ಲಿಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ತನ್ನವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆನಿರಂತರ ದಾಳಿ ನಡೆಸಿದ್ದಾನೆ. ಇಂತಹ ಪರಿಸ್ಥಿತಿ ಹೀಗೆಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ. ಇದು ನಡೆಯಬಾರದೆಂದರೆಇಂದಿನಿಂದಲೇ ಪರಿಸರದ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದರು.

ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದಉಳುವಿಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯು ಯುವಕರಿಗೆ ಇದರಮಹತ್ವವನ್ನು ಪ್ರಾಯೋಗಿಕವಾಗಿ ಮನವರಿಕೆಮಾಡಿ ಕೊಡುವ ನಿಟ್ಟಿನಲ್ಲಿ ಪ್ರಕೃತಿ ಅಧ್ಯಯನ ಮತ್ತುಚಾರಣ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನಾರ್ಹ ಸಂಗತಿ ಎಂದರು.

ಸೇವಾ ಮನೋಭಾವ ವೃದ್ಧಿ: ಅಕ್ಷರ ಕಾಲೇಜಿನ ಪ್ರಾಂಶುಪಾಲೆ ವೀಣಾ ನಾಗರಾಜ್‌ ಮಾತನಾಡಿ,ರಾಜ್ಯಮಟ್ಟದ ಶಿಬಿರ ನಮ್ಮ ಕಾಲೇಜಿನಆವರಣದಲ್ಲಿ ನಡೆದಿದ್ದು ತುಂಬಾ ಸಂತೋಷತಂದಿದೆ. ಈ ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿಸೇರುವುದರಿಂದ ವಿದ್ಯಾರ್ಥಿಗಳಿಗೆ ಶಿಸ್ತು,ಸಂಯಮ, ವಿಧೇಯತೆ, ಸಮಯಪಾಲನೆ, ದೇಶ ಭಕ್ತಿಯ ಜೊತೆಗೆ ಸೇವಾ ಮನೋಭಾವವೃದ್ಧಿಯಾಗುತ್ತದೆ. ಸ್ನೇಹ ಸೌಹಾರ್ದತೆಯ ಮಹತ್ವ ಮನವರಿಕೆ ಆಗುತ್ತದೆ ಎಂದರು.

ರಾಜ್ಯಮಟ್ಟದ ಶಿಬಿರ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಎ.ಎನ್‌. ನರೇಂದ್ರಕುಮಾರ್‌ ಮಾತನಾಡಿ, ನಾಲ್ಕು ದಿನ ಕಾಲಆಯೋಜಿಸಿದ್ದ ಈ ರಾಜ್ಯಮಟ್ಟದ ಶಿಬಿರದಲ್ಲಿರಾಜ್ಯದ 25 ಜಿಲ್ಲೆಗಳಿಂದ 120 ರೋವರ್‌, ರೇಂಜರ್‌ಗಳು ಭಾಗವಹಿಸಿದ್ದರು. ಇವರಿಗೆ ನಮ್ಮ ವ್ಯಾಪ್ತಿಯಲ್ಲಿಬರುವಂತಹ ಪ್ರಕೃತಿಯ ರಮಣೀಯ, ಪ್ರೇಕ್ಷಣೀಯಹಾಗೂ ಪುರಾತನ ಸ್ಥಳಗಳಾದ ಬನ್ನೇರುಘಟ್ಟದ ಜೈವಿಕಉದ್ಯಾನವನ, ಚಿಟ್ಟೆ ಪಾರ್ಕ್‌, ಶ್ರೀ ಶ್ಯಾಮ್‌ಮಂದಿರ್‌, ಆಶಾಪುರಾ ಮಾತಾಜಿ ತೀರ್ಥಧಾಮ್‌,ಶ್ರೀ ಚಂಪಕಧಾಮಸ್ವಾಮಿ ದೇವಾಲಯ, ಸುವರ್ಣಮುಖೀ, ನೆರಳೂರಿನ ಜೈನ್‌ ಮಂದಿರ,ಮುತ್ಯಾಲಮಡುವು ಜಲಪಾತ, ಶ್ರೀ ತಿಮ್ಮರಾ ಯಸ್ವಾಮಿ ದೇವಾಲಯ, ಚಿಕ್ಕತಿರುಪತಿ ದೇವಾಲಯಇನ್ನೂ ಮುಂತಾದ ಪ್ರದೇಶಗಳಿಗೆ ಪ್ರವಾಸ ಮಾಡಿಸಿ ಅಲ್ಲಿ ಚಾರಣದ ಜೊತೆಗೆ ಸ್ಥಳಗಳ ಮಹತ್ವ ಹಾಗೂ ಇತಿಹಾಸಗಳನ್ನು ತಿಳಿಸಲಾಯಿತು ಎಂದರು.

Advertisement

ಪರಿಸರದ ಬಗ್ಗೆ ಕಾಳಜಿ: ಅಷ್ಟೇ ಅಲ್ಲದೆ ಭೇಟಿನೀಡಿದ ಎಲ್ಲ ಪ್ರದೇಶಗಳಲ್ಲೂ ಪ್ಲಾಸ್ಟಿಕ್‌ ಹಾಗೂತ್ಯಾಜ್ಯವನ್ನು ಸಂಗ್ರಹಿಸಿ, ಅಲ್ಲಿನ ಸ್ಥಳೀಯ ಸಂಸ್ಥೆಗಳ ಮುಖೇನ ವಿಲೇವಾರಿ ಮಾಡಲಾಯಿತು.

ಈ ಮುಖೇನ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ, ಅರಣ್ಯ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಮಹತ್ವ ಮತ್ತು ಪ್ಲಾಸ್ಟಿಕ್‌ ಮುಕ್ತ ಜೀವನದ ಅರಿವು ಮೂಡಿಸಲಾಯಿತು ಎಂದರು.

ಅಕ್ಷರ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕೆ. ನಾಗರಾಜು, ಪ್ರಾಂಶುಪಾಲ ನಾಗರಾಜು, ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ್‌,ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಕೇಂದ್ರ ಸ್ಥಾನಿಕಆಯುಕ್ತ ಟಿ. ಪ್ರಕಾಶ್‌ರೆಡ್ಡಿ, ಖಜಾಂಚಿ ಸಿ. ಲಕ್ಷ್ಮೀಕಾಂತರಾಜು, ಸಹ ಕಾರ್ಯದರ್ಶಿ ಜಿ. ನಾಗರಾಜು, ಜಂಟಿ ಕಾರ್ಯದರ್ಶಿ ಆರ್‌. ಸುಮಾ, ಜಿಲ್ಲಾ ತರಬೇತಿ ಆಯುಕ್ತೆ ಕೆ.ವಿ. ವಸಂತಮ್ಮ, ಜಿಲ್ಲಾ

ಸಂಘಟಕ ಕೆ.ಟಿ. ಮಲ್ಲೇಶಪ್ಪ, ಪದಾಧಿಕಾರಿ ಕೆ. ಮೂರ್ತಿ, ಪಿ. ಪ್ರಸನ್ನ ಕುಮಾರ್‌, ಆರ್‌. ಅರುಣ್‌, ಸಿ.ಶಶಿಕುಮಾರ್‌, ಕೆ. ಆಶಾ, ಎಸ್‌. ಹೇಮಲತಾ, ಮೋನಾ ಮೆನೇಜ್‌, ಮಂಜುಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next