Advertisement

Bhajane; ಡಿ. 3: ಆನೆಗುಡ್ಡೆಯಲ್ಲಿ ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆ

11:04 AM Nov 29, 2023 | Team Udayavani |

ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ನೇತೃತ್ವದಲ್ಲಿ ಕುಂದಾಪುರ ಭಜನ ಮಂಡಳಿಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆ, ಭಕ್ತಿಗಾನ ನೃತ್ಯ ಜೋಡಿ ಭಜನೆ ಸ್ಪರ್ಧೆಯು ಡಿ. 3ರಂದು ನಡೆಯಲಿದ್ದು, ಸುರತ್ಕಲ್‌ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.

Advertisement

ಭವ್ಯ ಪುರಮೆರವಣಿಗೆಗೆ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಲಿದ್ದಾರೆ. ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಮೈಸೂರಿನ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಮಂಗಳೂರು ಶೇಟ್‌ ಜುವೆಲರ್ಸ್‌ ಡೈಮಂಡ್‌ ಹೌಸ್‌ನ ಪ್ರಶಾಂತ್‌ ಶೇಟ್‌, ರಾಜ್ಯ ಮಟ್ಟದ ಕುಣಿತ ಭಜನೆ ಸ್ಪರ್ಧೆಯ ಸಮಿತಿಯ ಅಧ್ಯಕ್ಷ, ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂಭಾಶಿ ಗ್ರಾ.ಪಂ. ಅಧ್ಯಕ್ಷ ಆನಂದ ಪೂಜಾರಿ, ಕೋಟೇಶ್ವರ ಶ್ರೀರಾಮ ಕಲಾ ಸಂಘದ ಅಧ್ಯಕ್ಷ ಸೀತಾರಾಮ ಧನ್ಯ ಗೋಪಾಡಿ, ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಜಯಾನಂದ ಖಾರ್ವಿ ಕುಂದಾಪುರ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next