Advertisement

ರಾಜ್ಯಮಟ್ಟದ ಕರಾಟೆ: ಉತ್ತಮ ಪ್ರದರ್ಶನ

12:47 PM May 03, 2022 | Team Udayavani |

ಬಾಗಲಕೋಟೆ: ಶಿಕ್ಷಣ ಮತ್ತು ಕ್ರೀಡಾ-ಕರಾಟೆಯ ಮೂಲ ಉದ್ದೇಶ ಸಂಸ್ಕಾರವಂತರಾಗಿ ತಂದೆ ತಾಯಿಗಳಿಗೆ, ಗುರು ಹಿರಿಯರಿಗೆ ಗೌರವ ಕೊಡುವುದಾಗಿದೆ. ವಿದ್ಯಾರ್ಥಿಗಳು ಇಂತಹ ಗುಣ ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕು ಎಂದು ಬಾದಾಮಿಯ ಉಪ ತಹಶೀಲ್ದಾರ್‌ ಬಸವರಾಜ ಸಿಂದಗೀಕರ ಹೇಳಿದರು.

Advertisement

ಮಹಾಕೂಟದಲ್ಲಿ ರಾಠೊಡ ಮಾರ್ಷಲ್‌ ಆರ್ಟ್ಸ್ ಮತ್ತು ಸ್ಕೀಲ್‌ ಯೂನಿಯನ್‌ನಿಂದ ಹಮ್ಮಿಕೊಂಡಿದ್ದ 4 ದಿನಗಳ ರಾಜ್ಯಮಟ್ಟದ ಕರಾಟೆ ತರಬೇತಿ ಶಿಬಿರ ಮತ್ತು ಇಂಟರ್‌ ಸ್ಕೂಲ್‌ ಚಾಂಪಿಯನ್‌ಶಿಪ್‌ನಲ್ಲಿ ಅವರು ಮಾತನಾಡಿದರು.

ಪಿಎಸ್‌ಐ ಪಾರ್ವತಿ ಕಂಬಾರ ಮಾತನಾಡಿ, ಪ್ರಸ್ತುತ ಯುಗದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳಾಗುತ್ತಿದ್ದು ಇದಕ್ಕೆ ಪ್ರತಿಕೂಲವಾಗಿ ಎದುರಿಸಲು ಪ್ರತಿಯೊಬ್ಬರು ಕರಾಟೆ ಮಾರ್ಷಲ್‌ ಆರ್ಟ್ಸ್ ಕಲೆಯನ್ನು ಹೆಚ್ಚೆಚ್ಚು ಕಲಿಯಲು ಮುಂದಾಗಬೇಕು ಎಂದು ತಿಳಿಸಿದರು.

ಕವಿ ಎಚ್‌. ಎನ್‌. ಶೇಬನ್ನವರ ಯಾರು ಕೂಡ ಆತ್ಮಕರಕ್ಷಣೆಯ ಕಲೆ ಕರಾಟೆಯನ್ನು ಅರ್ಧಕ್ಕೆ ಮೊಟಕುಗೊಳಿಸದೆ ಸಂಪೂರ್ಣವಾಗಿ ಕಲಿತು ಇನ್ನೊಬ್ಬರಿಗೆ ಆದರ್ಶವಾಗಬೇಕು. ಹೆಣ್ಣು ಮಕ್ಕಳು ಕರಾಟೆ ಕಲಿತರೆ ಆತ್ಮರಕ್ಷಣೆ ಮಾಡಿಕೊಂಡು ಬೇರೆಯವರನ್ನುಅಪಾಯದಿಂದ ಪಾರು ಮಾಡುವ ಆತ್ಮಸ್ಥೈರ್ಯ ಅವರಲ್ಲಿ ಮೂಡುತ್ತದೆ ಎಂದರು.

ರಾಜ್ಯದ ಕರಾಟೆ ಚೀಪ್‌ ಕೋಚ್‌ ಎಸ್‌.ಆರ್‌. ರಾಠೊಡ, ನಗರಸಭೆ ಮಾಜಿ ಅಧ್ಯಕ್ಷ ಬಸವಾಜ ಕಟಗೇರಿ, ಎಸ್‌ಬಿಐ ಬ್ಯಾಂಕ್‌ ಬಾಗಲಕೋಟೆ ವ್ಯವಸ್ಥಾಪಕ ಕುಮಾರಸ್ವಾಮಿ, ಶಿಗಿಕೇರಿ ಗ್ರಾಮದ ಮಠಪತಿ ಅಜ್ಜನವರು ಪಾಲ್ಗೊಂಡಿದ್ದರು.

Advertisement

19ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಪದವಿ: ತರಬೇತಿ ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿ ಭಾಗವಹಿಸಿದ್ದ 19 ವಿದ್ಯಾರ್ಥಿಗಳು 15 ಕಿಮೀ ಗಳ ನಿರಂತರ ಓಟದ ಜತೆ 3 ದಿನಗಳ ಕಾಲ ನಿರಂತರ ಫಿಸಿಕಲ್‌, ಟೆಕ್ನಿಕಲ್‌ ಹಾಗೂ ಓರಲ್‌ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಬ್ಲ್ಯಾಕ್ ಬೆಲ್ಟ್ ಪದವಿ ತಮ್ಮದಾಗಿಸಿಕೊಂಡರು. ರಕ್ಷನ್‌ ಘೋಡಗೇರಿ, ಪವನ್‌ ಸಿಂದಗಿಕರ್‌, ಸುಮಂತ್‌ ಗುಜ್ಜರ, ರಜತ್‌ ಹದ್ಲಿ, ಪ್ರಥಮ ಪವಾರ್‌, ಸಂದನ್‌ ಅಳೊಳ್ಳಿ, ಅಭಿಷೇಕ ತಳವಾರ, ತನ್ವಿ ಪವಾರ್‌, ಅಂಜಲಿ ಹಕ್ಕೆ, ಸಾಗರ ಚಿತ್ತರಗಿ, ಮಲ್ಲಿಕಾರ್ಜುನ, ಬಾಲಕೃಷ್ಣ ನಾಯ್ಕ, ಪ್ರಸನ್ನ ಗೋಂದಳಿ, ವಿಶ್ವನಾಥ ರೋಣದ, ಮಹಮ್ಮದ ಫಜೀಲ್‌, ಸಿಂಧು ನಾಯ್ಕ, ಲಕ್ಷ್ಮೀ ಕಂಬಾರ, ಪುನೀತ್‌ ನಾಯ್ಕ ಹಾಗೂ ಜಯಂತ ನಾಯ್ಕ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ.

33 ವಿದ್ಯಾರ್ಥಿಗಳಿಗೆ ಬೆಸ್ಟ್‌ ಪರ್‌ಫಾರ್ಮರ್‌ ಅವಾರ್ಡ್‌: ಸತತ 4 ದಿನಗಳ ಕಾಲ ಎಲ್ಲಾ ವಿಭಾಗಳಲ್ಲಿ ಹಾಗೂ ಕಟಾ ಮತ್ತು ಕುಮಿಟೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 150 ಕ್ಕೂ ಹೆಚ್ಚು ಇದ್ದ ವಿದ್ಯಾರ್ಥಿಗಳಲ್ಲಿ 33 ಚಿಣ್ಣರು ಬೆಸ್ಟ್‌ ಪರ್‌ ಫಾರ್ಮರ್‌ ಅವಾರ್ಡ್‌ ತಮ್ಮದಾಗಿಸಿಕೊಂಡಿದ್ದಾರೆ. ಅನನ್ಯ, ಸಾನ್ವಿಕಾ, ಶ್ರೀವಾತ್ಸವ್‌, ಅಥರ್ವ, ಶರಣಗೌಡ, ಶ್ರೇಯಸ್ಸು, ಹುಲ್ಲಪ್ಪ, ಕಾರ್ತಿಕ್‌, ಸವಿತಾ, ದಿಯಾ, ನಂದನ್‌, ಪ್ರದೀಪ, ಸಿಂಚನಾ, ಸಿದ್ದಾರ್ಥ, ಭೀಮಪ್ಪ, ಮಹಾಗುಂಡಯ್ಯ, ಲಕ್ಷ್ಮೀ, ಸುವರ್ಣಾ, ನೆಹಾಲ್‌, ಶೀತೆಜ್‌, ಶ್ರಾವಣಿ ಪ್ರೀತಮ್‌, ಸಮರ್ಥ, ವಜ್ರಶ್ರೀ, ರಾಬರ್ಟ್‌, ಸಾನ್ವಿ, ಅಚ್ಯುತ್‌, ಸೃಜನ್‌, ಸಚಿನ್‌, ಪವನಕುಮಾರ್‌, ಸಂಪತ್‌ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next