Advertisement

25ಕ್ಕೆ ರಾಜ್ಯಮಟ್ಟದ ರೈತರ ಬೃಹತ್‌ ಸಮಾವೇಶ

05:36 PM Aug 20, 2019 | Team Udayavani |

ಮಾಗಡಿ: ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ರಾಜ್ಯಮಟ್ಟದ ರೈತರ ಬೃಹತ್‌ ಸಮಾವೇಶ ಆ.25 ರ ಬೆಳಗ್ಗೆ 10.30ಕ್ಕೆ ಮಾಗಡಿ ಬೆಂಗಳೂರು ಮುಖ್ಯ ರಸ್ತೆ ದೊಡ್ಡಗೊಲ್ಲರಹಟ್ಟಿ ಸ್ಯಾನ್‌ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗುಡ್ಡೇಗೌಡ ತಿಳಿಸಿದರು. ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಆಹ್ವಾನ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ರೈತರ ಸಮಸ್ಯೆ ಬಗೆಹರಿಸಲು ಸರ್ಕಾರಗಳು ವಿಫ‌ಲವಾಗಿದ್ದು ಸರ್ಕಾರವನ್ನು ಎಚ್ಚರಿಸಲು ರೈತರ ಹಿತ ರಕ್ಷಣಾ ವೇದಿಕೆ ಸ್ಥಾಪಿಸಲಾಗಿದೆ. ಶೀಘ್ರ ಬೃಹತ್‌ ಹೋರಾಟ ಹಮ್ಮಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಚುನಾಯಿತ ಪ್ರತಿನಿಧಿಗಳು ಅಧಿಕಾರದ ವ್ಯಾಮೋಹ ಬಿಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕೆಂದರು.

ರೈತರ ಆತ್ಮಹತ್ಯೆ ನಿಲ್ಲಲಿ:ಕರ್ನಾಟಕ ರೈತರ ಹಿತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬೆಳಗವಾಡಿ ರಂಗನಾಥ್‌, ರೈತರ ಆತ್ಮಹತ್ಯೆ ನಿಲ್ಲಬೇಕು. ನೆರೆ ಹಾವಳಿಗೆ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡ ಬೇಕು. ಸಕಾಲಕ್ಕೆ ಸರ್ಕಾರ ಸವಲತ್ತು ಕೊಡದಿ ದ್ದರೆ ಹೋರಾಟ ಅನಿವಾರ್ಯ ಎಂದರು.

ರಾಜ್ಯದಲ್ಲಿ ರೈತ ಹಿತ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಸದಸ್ಯತ್ವ ನೋಂದಣಿಗೆ ತಿಳಿಸಿದ ಅವರು, ಆ.25 ರಂದು ನಡೆಯ ಲಿರುವ ರಾಜ್ಯ ಮಟ್ಟದ ರೈತರ ಬೃಹತ್‌ ಸಮಾ ವೇಶದಲ್ಲಿ ಭಾಗವಹಿಸುವಂತೆ ತಿಳಿಸಿದರು.

Advertisement

ವೇದಿಕೆ ಗೌರವಾಧ್ಯಕ್ಷ ಕೆ.ಎಚ್.ಕೃಷ್ಣ ಮೂರ್ತಿ, ತಾಲೂಕಿನಿಂದ ಸುಮಾರು ಒಂದೂವರೆ ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಎ‍ಚ್ಡಿಕೆ ಉದ್ಘಾಟನೆ:ರಾಜ್ಯ ಮಟ್ಟದ ರೈತರ ಬೃಹತ್‌ ಸಮಾ ವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇ ವೇಗೌಡ ಅಧ್ಯಕ್ಷತೆ ವಹಿಸಲಿ ದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿ ಸಲಿದ್ದಾರೆ. ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಸ್ವಾತಂ ತ್ರ್ಯ ಹೋರಾಟ ಗಾರ ದೊರೆಸ್ವಾಮಿ, ಶಾಸಕ ರಾದ ವಿ.ಸೋ ಮಣ್ಣ, ದಿನೇಶ್‌ ಗುಂಡೂ ರಾವ್‌, ರಾಜ್ಯ ರೈತರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಗುಡ್ಡೇ ಗೌಡ, ಸಂಸದ ಡಿ.ಕೆ.ಸುರೇಶ್‌, ಶಾಸಕರಾದ ಡಿ.ಕೆ.ಶಿವಕುಮಾರ್‌, ಎ.ಮಂಜು ನಾಥ್‌, ಮ ಸಾಲೆ ಜಯರಾಮ್‌, ಎಚ್.ಎಂ.ರೇವಣ್ಣ , ಮುದ್ದಹನುಮೇಗೌಡ, ಆರ್‌.ಮಂಜು ನಾಥ್‌, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಹನುಮಂತೇಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣ ಮೂರ್ತಿ, ಮುತ್ತಪ್ಪ ರೈ, ಶಂಕರೇಗೌಡ, ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತಿತ ರರು ಭಾಗವಹಿಸಲಿದ್ದಾರೆಂದರು.

ಗಣ್ಯರಿಗೆ ಸನ್ಮಾನ: ಎಂಎಲ್ಸಿ ಆ.ದೇವೇಗೌಡ,ಬಿ.ಎಸ್‌. ವಿಶ್ವಕಾರ್ಯಪ್ಪ, ಪರಿಸರವಾದಿ, ಪದ್ಮ ಶ್ರೀ ವಿಜೇತೆ ಸಾಲು ಮರದ ತಿಮ್ಮಕ್ಕ, ಕಾಸಿಯಾ ಮಲ್ಲೇಶ್‌ ಗೌಡ, ಗೋವಿಂದಯ್ಯ, ಮಾರಣ್ಣ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸ ಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ, ಕುಂಬಳ ಕಾಯಿ ಗಂಗಣ್ಣ, ಡಿ.ರವಿ, ಶಂಕರಯ್ಯ ಕಂಬೇ ಗೌಡ, ಕಾಂತರಾಜು, ನಾರಾಯಣಸ್ವಾಮಿ, ತ್ಯಾಗದೆರೆಪಾಳ್ಯದ ರಂಗಸ್ವಾಮಯ್ಯ,ದಿನೇಶ್‌, ಕೆ.ಎಂ. ನಾಗರಾಜು, ಯೋಗೇಶ್‌, ಕಂಬದ ನರಸಯ್ಯ, ಟಿ.ಶೇಷಾದ್ರಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next