Advertisement
ಬಾಲಕರು, ಬಾಲಕಿಯರ 14, 16, 18, 20 ವರ್ಷ ವಯೋಮಿತಿ ಹಾಗೂ ಪುರುಷರು, ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ರಾಜ್ಯದ 34 ಜಿಲ್ಲೆಗಳಿಂದ ನೋಂದಾಯಿತ ಕ್ರೀಡಾ ಕ್ಲಬ್, ಕ್ರೀಡಾಶಾಲೆಗಳು, ಬೆಂಗಳೂರಿನ ಎಂ.ಐ.ಜಿ., ಏರ್‌ಫೋರ್ಸ್, ರೈಲ್ವೇ, ಅರಣ್ಯ ಇಲಾಖೆ ಮೊದಲಾದ ತಂಡಗಳು ಭಾಗವಹಿಸಲಿವೆ. ಜೂನಿಯರ್‌ನ 8, ಸೀನಿಯರ್‌ನ 2 ಹೀಗೆ 10 ವಿಭಾಗಗಳಲ್ಲಿ ತಂಡ ಪ್ರಶಸ್ತಿ ಹಾಗೂ ಸಮಗ್ರ ಚಾಂಪಿಯನ್‌ಶಿಪ್‌ಗಾಗಿ ರಾಜ್ಯದ ಸುಮಾರು 2,000 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 500 ಮಂದಿ ಕ್ರೀಡಾಧಿಕಾರಿಗಳು ಸಹಕರಿಸಲಿದ್ದಾರೆ. ಈ ಕೂಟದಲ್ಲಿ ಕ್ರೀಡಾಳುಗಳು ತೋರುವ ನಿರ್ವಹಣೆಯ ಆಧಾರದಲ್ಲಿ ದಕ್ಷಿಣ ವಲಯ ಜೂ. ಕ್ರೀಡಾಕೂಟ, ರಾಷ್ಟ್ರೀಯ ಜೂ. ಕ್ರೀಡಾಕೂಟ ಹಾಗೂ ಮುಕ್ತ ರಾಷ್ಟ್ರೀಯ ಆ್ಯತ್ಲೆಟಿಕ್ ಕ್ರೀಡಾಕೂಟಗಳಿಗೆ ತಂಡದ ಆಯ್ಕೆಯನ್ನು ನಡೆಸಲಾಗುವುದು.
Advertisement
ಸೆ. 4-6: ಮೂಡಬಿದಿರೆಯಲ್ಲಿ ರಾಜ್ಯಮಟ್ಟದ ಆ್ಯತ್ಲೆಟಿಕ್ ಕೂಟ
09:50 AM Aug 31, 2017 | Karthik A |
Advertisement
Udayavani is now on Telegram. Click here to join our channel and stay updated with the latest news.