ಗಂಗಾವತಿ: ಗಂಗಾವತಿ-ಮುನಿರಾಬಾದ್ ರಸ್ತೆ ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿಯಾಗಿದೆ. ರಸ್ತೆ ತಗ್ಗು ಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮೂರು ವರ್ಷಗಳಿಂದಗಂಗಾವತಿ-ಮುನಿರಾಬಾದ್ ರಸ್ತೆಯನ್ನು 130ನೇ ರಾಜ್ಯ ಹೆದ್ದಾರಿಯನ್ನಾಗಿ ಸರಕಾರ ಘೋಷಣೆ ಮಾಡಿದೆ, ಆದರೆ ತಕ್ಕಮಟ್ಟಿಗೆ ಅಭಿವೃದ್ಧಿ ಮಾಡಿಲ್ಲ.ರಾಜ್ಯ ಹೆದ್ದಾರಿ ಅತ್ಯಂತ ಕಿರಿದಾಗಿದ್ದು, ಹೆದ್ದಾರಿಗೆಇರಬೇಕಾದ ಯಾವುದೇ ನಿಯಮಗಳನ್ನುಲೋಕೋಪಯೋಗಿ ಇಲಾಖೆ ಪಾಲನೆ ಮಾಡಿಲ್ಲ. ಪ್ರತಿ ವರ್ಷ ರಸ್ತೆ ಮೇಲುಸ್ತುವಾರಿ ನೆಪದಲ್ಲಿಕೋಟ್ಯಂತರ ರೂ. ಖರ್ಚಾಗುತ್ತಿದೆ. ರಸ್ತೆಯ ಅಕ್ಕಪಕ್ಕದ ಗಿಡಕಂಟಿಗಳು ಮತ್ತು ರಸ್ತೆ ಮಧ್ಯೆಇರುವ ಗುಂಡಿ ಹಾಗೆ ಇರುತ್ತವೆ. ವಿಶ್ವ ವಿಖ್ಯಾತ ಆನೆಗೊಂದಿ, ಆದಿಶಕ್ತಿ ದೇಗುಲ, ನವವೃಂದಾವನಗಡ್ಡಿ, ಚಿಂತಾಮಣಿ, ಪಂಪಾ ಸರೋವರ,ಕಿಷ್ಕಿಂದಾ ಅಂಜನಾದ್ರಿಬೆಟ್ಟ, ಋಷಿಮುಖ ಪರ್ವತ, ಹನುಮನಹಳ್ಳಿ ವಿರೂಪಾಪೂರ ಗಡ್ಡಿ ಸಾಣಾಪೂರ ಕೆರೆ ಇದೇ ರಸ್ತೆಯಲ್ಲಿಬರುವುದರಿಂದ ಪ್ರತಿದಿನ ದೇಶ, ವಿದೇಶದ ಸಾವಿರಾರು ಈ ರಸ್ತೆಯನ್ನೇ ಅವಲಂಬಿಸುತ್ತಾರೆ.
ರಸ್ತೆ ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರಕ್ಕೆತೊಂದರೆಯಾಗಿದೆ. ರಸ್ತೆ ಎರಡು ಬದಿಯಲ್ಲಿಮುಳ್ಳಿನ ಗಿಡ ಕಂಟಿಗಳು ಬೆಳೆದಿದ್ದು ವಾಹನಗಳು ಹೋಗಲು ತೊಂದರೆಯಾಗಿದೆ. ಈ ರಸ್ತೆ ಇರುವ ಪ್ರದೇಶ ಗುಡ್ಡಗಾಡಿನಿಂದಕೂಡಿರುವುದರಿಂದ ರಸ್ತೆ ಇಕ್ಕಾಟ್ಟಾಗಿದ್ದು ಅಂಕುಡೊಂಕಾಗಿದೆ. ವೇಗವಾಗಿ ವಾಹನಗಳುಬಂದರೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಲೋಕೋಪಯೋಗಿ ಇಲಾಖೆ ಪ್ರತಿವರ್ಷ ರಸ್ತೆ, ಸಣ್ಣಪುಟ್ಟ ರಿಪೇರಿ ಸೇರಿ ದುರಸ್ತಿ ನೆಪದಲ್ಲಿ ಕೋಟ್ಯಂತರ ರೂ. ಬಿಲ್ ಮಾಡುತ್ತಿದೆ.
ಅಪಘಾತ: ಗಂಗಾವತಿಯಿಂದ ಮುನಿರಾಬಾದವರೆಗಿನ ರಸ್ತೆ ತಿರುವುಗಳಿಂದ ಮತ್ತು ತೆಗ್ಗು ದಿನ್ನೆಗಳಿಂದ ಕೂಡಿದ್ದು ಲೋಕೋಪಯೋಗಿ ಇಲಾಖೆಯು ಎಲ್ಲಿಯೂ ಅಪಘಾತ ನಿಯಂತ್ರಿಸಲು ಸೂಚನಾ ಫಲಕ (ಸಿಗ್ನಲ್) ಅಳವಡಿಸಿಲ್ಲ. ಈ ರಸ್ತೆಯಲ್ಲಿ ಬಸ್, ಕಾರು ಸೇರಿ ದ್ವಿಚಕ್ರ ವಾಹನಗಳ ಸಂಚಾರ ವಿಪರೀತವಾಗಿದೆ. ಟೋಲ್ ಗೇಟ್ ತಪ್ಪಿಸಲು ಲಾರಿ ಚಾಲಕರು ಇದೇ ರಸ್ತೆ ಬಳಕೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಕಡೆಬಾಗಿಲು ಹತ್ತಿರ ತುಂಗಭದ್ರಾ ನದಿಗೆಸೇತುವೆ ನಿರ್ಮಾಣವಾದ ನಂತರ ಮೈನ್ಸ್ ಇತರೆ ಲಾರಿಗಳ ಓಡಾಟ ಹೆಚ್ಚಾಗಿದೆ. 40-60 ಟನ್ ಭಾರದ ಲಾರಿಗಳು ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ತೆಗ್ಗುತಪ್ಪಿಸಲು ಹೋಗಿ ಪ್ರತಿದಿನವೂ ದ್ವಿಚಕ್ರ, ಕಾರು ಹಾಗೂ ಸಣ್ಣಪುಟ್ಟ ವಾಹನ ಸವಾರರು ಅಪಘಾತಮಾಡುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಸಂಗಾಪೂರದ ಹತ್ತಿರ ಈಶಾನ್ಯ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಪರಿಣಾಮ ಶಿಕ್ಷಕ, ಶಿಕ್ಷಕಿ ಮೃತಪಟ್ಟ ಘಟನೆ ಜರುಗಿದೆ.
-ಕೆ.ನಿಂಗಜ್ಜ