7,500 ರೂ. ಹಾಗೂ ಇದಕ್ಕಿಂತಲೂ ಹೆಚ್ಚಿನ ಸೇವಾಶುಲ್ಕವನ್ನು ವಿಧಿಸುತ್ತಿದೆ.
Advertisement
ಕಳೆದ ವಾರವಿಡೀ ಸಂಘರ್ಷದಲ್ಲೇ ಕಳೆದು ಹೋಯಿತು. ಈ ಸಂಘರ್ಷಕ್ಕೆ ಕಾರಣ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ. ಈ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸುವುದಕ್ಕೆ ಹೊರಟ ಸರಕಾರದ ಪ್ರಯತ್ನವನ್ನು ವಿರೋಧಿಸಿ ಖಾಸಗಿ ವೈದ್ಯರು ಮುಷ್ಕರಕ್ಕಿಳಿಯುವ ಮೂಲಕ ಉಭಯ ಶಕ್ತಿಗಳೂ ಮುಖಾಮುಖೀಯಾದುದನ್ನು ಇಡೀ ಕರ್ನಾಟಕದ ಜನತೆ ಅಸಹಾಯಕತೆಯಿಂದ ನೋಡುತ್ತ ಕುಳಿತುಕೊಳ್ಳಬೇಕಾಯಿತು.
Related Articles
Advertisement
ವೆಂದರೆ ಕ್ಯಾಪಿಟೇಶನ್ ಶುಲ್ಕದ ಆಧಾರದಲ್ಲಿ ನಡೆಸಲಾಗುವ ವೈದ್ಯಕೀಯ ಕಾಲೇಜುಗಳೇ. ಖಾಸಗಿ ರಂಗದ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಬಗೆಗಿನ ಸರಕಾರದ ವಚನ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕತೆ 43 ವರ್ಷಗಳಷ್ಟು ಹಳೆಯದು! ಮೂಲ ಕರ್ನಾಟಕದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಜಾರಿಗೆ ಬಂದುದು 2007ರ ಜುಲೈಯಲ್ಲಿ; 1976ರ ಕರ್ನಾಟಕ ಖಾಸಗಿ ನರ್ಸಿಂಗ್ ಹೋಮ್‌ಗಳ ನಿಯಂತ್ರಣ ಕಾಯ್ದೆಯ ಬದಲಾಗಿ. 2007ರ ಕಾಯ್ದೆಯನ್ನು 2010ರಲ್ಲಿ ಹಾಗೂ 2012ರಲ್ಲಿ “ಅಲ್ಪ-ಸ್ವಲ್ಪ’ ಎಂಬ ರೀತಿಯಲ್ಲಿ ತಿದ್ದುಪಡಿ ಮಾಡಲಾಯಿತು. ಈಗ ಸಿದ್ದರಾಮಯ್ಯ ನವರ ಸರಕಾರ ಮಾಡಹೊರಟಿರುವ ತಿದ್ದುಪಡಿ ಮೂರನೆಯದು. ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ವೈದ್ಯರನ್ನು ಶಿಕ್ಷೆಗೊಳಪಡಿ ಸುವ ಪ್ರಸ್ತಾವವಿದೆಯೆಂಬ ಕಾರಣಕ್ಕೆ ಖಾಸಗಿ ವೈದ್ಯರು ಕಹಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರಾದರೂ 2007ರ ಮೂಲ ಕಾಯ್ದೆಯಲ್ಲಿಯೇ ತಪ್ಪಿತಸ್ಥ ವೈದ್ಯರಿಗೆ ದಂಡ ವಿಧಿಸುವ ಪ್ರಸ್ತಾವ ವಿದೆಯೆಂಬುದನ್ನು ಅಗತ್ಯವಾಗಿ ಗಮನಿಸಬೇಕು. ಆಸ್ಪತ್ರೆಯನ್ನು ನೋಂದಣಿ ಮಾಡದಿದ್ದರೆ ಅಂಥ ಆಸ್ಪತ್ರೆಗಳನ್ನು ನಡೆಸುವ ವ್ಯಕ್ತಿಗಳನ್ನು ಶಿಕ್ಷಾರ್ಹರೆಂದು ಘೋಷಿಸಿ ಮೂರು ವರ್ಷಗಳ ಸೆರೆಮನೆ ವಾಸ ವಿಧಿಸಲಾಗುವುದೆಂಬ ಎಚ್ಚರಿಕೆ ಈ ಕಾಯ್ದೆಯಲ್ಲಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಒದಗಿಸುವ ಸರಕಾರಿ ವೈದ್ಯರ ಯಾದಿಯನ್ನೂ ನಿಯಂತ್ರಕರಿಗೆ (ಸರಕಾರಕ್ಕೆ) ಒದಗಿಸಬೇಕೆಂಬ ತಾಕೀತು ಕೂಡ ಮೂಲ ಕಾಯ್ದೆಯಲ್ಲಿದೆ.
ಈ ನಡುವೆ, ಸರಕಾರಿ ಆಸ್ಪತ್ರೆಗಳೇ ರೋಗಪೀಡಿತವಾಗಿರುತ್ತ, ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಕೆಲಸಕ್ಕೆ ಸರಕಾರ ಯಾಕೆ ಮುಂದಾಗಬೇಕು ಎಂದೂ ಪ್ರಶ್ನಿಸಲಾಗುತ್ತಿದೆ. ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಶೋಷಣೆ ರಾಜಾರೋಷವಾಗಿ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳಿರುವುದು ಅನುಕೂಲಸ್ಥರಿಗೆ, ಆರೋಗ್ಯ ವಿಮೆ ಹೊಂದಿರುವವರಿಗೆ; ವೈದ್ಯಕೀಯ ಸೇವೆ ಪಡೆಯುವ ಅವಕಾಶವಿರುವ ಖಾಸಗಿ ರಂಗದ ಉದ್ಯೋಗಿಗಳಿಗೆ ಹಾಗೂ ತಮ್ಮಲ್ಲಿಗಿಂತ ಇಲ್ಲಿನ ವೈದ್ಯ ಕೀಯ ಸೇವೆ ಅಗ್ಗವೆಂಬ ಕಾರಣಕ್ಕಾಗಿ ಇಲ್ಲಿಗೆ ಬರುವ ವಿದೇಶೀ ಪ್ರಜೆಗಳಿಗೆ – ಎಂಬುದನ್ನು ಅಗತ್ಯವಾಗಿ ಗಮನಿಸಬೇಕಾ ಗಿದೆ. ಖಾಸಗಿ ಆಸ್ಪತ್ರೆಗಳ ಪೈಕಿ ಕೆಲವೆಡೆಗಳಲ್ಲಿ ಕಾರ್ಯಸಮರ್ಥ ವೈದ್ಯ ರೇನೋ ಇದ್ದಾರೆ; ಆದರೆ ತಮ್ಮ ಸೇವೆಗಳಿಗೆ “ಪಂಚತಾರಾ’ ದರಗಳನ್ನು ವಿಧಿಸುವ ಖಾಸಗಿ ಆಸ್ಪತ್ರೆಗಳೂ ಇಲ್ಲದಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಉಚಿತ ಭೂ ನಿವೇಶನ ಗಿಟ್ಟಿಸಿಕೊಂಡು ಅಸ್ತಿತ್ವಕ್ಕೆ ಬಂದಿರುವ ಖಾಸಗಿ ಚಾರಿಟೆಬಲ್ ಆಸ್ಪತ್ರೆಯೊಂದು ತನ್ನ ಸ್ಪೆಶಲ್ ವಾರ್ಡ್‌ನಲ್ಲಿ ಒಂದು ಬೆಡ್‌ಗೆ 7,500 ರೂ. ಹಾಗೂ ಇದಕ್ಕಿಂತಲೂ ಹೆಚ್ಚಿನ ಸೇವಾಶುಲ್ಕವನ್ನು ವಿಧಿಸುತ್ತಿದೆ.
ವೈದ್ಯಕೀಯ ಸೇವೆಗಳನ್ನು 1986ರ ಬಳಕೆದಾರರ ರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಕೂಡದೆಂದು ಖಾಸಗಿ ವೈದ್ಯರು ಅಖೀಲ ಭಾರತ ಮಟ್ಟದಲ್ಲಿ ಆಗ್ರಹಿಸುತ್ತಿದ್ದು, ಇದೀಗ ನಡೆದಿರುವ ಖಾಸಗಿ ವೈದ್ಯರ ಮುಷ್ಕರವನ್ನು ಈ ವಿರೋಧದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಗ್ರಾಹಕ ಬಳಕೆ ದಾರರ ನ್ಯಾಯಾಲಯಗಳಲ್ಲಿ ವೈದ್ಯಕೀಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ತಕ್ಕ ಪರಿಕರಗಳಿಲ್ಲ; ಇಂಥ ಅನುಕೂಲತೆಗಳ ಕೊರತೆಯಿರುವ ಹಿನ್ನೆಲೆಯಲ್ಲಿ ವೈದ್ಯ ಸಂಬಂಧಿ ಕೇಸುಗಳನ್ನು ಭಾರತೀಯ ವೈದ್ಯಕೀಯ ಮಂಡಳಿ ನಿರ್ವಹಿಸಬೇಕೇ ಹೊರತು ಇತರ ನ್ಯಾಯಾಲಯಗಳಲ್ಲ ಎನ್ನುವುದು ಖಾಸಗಿ ವೈದ್ಯರು ಮಂಡಿಸಿರುವ ವಾದ. ಬಳಿಕ 1996ರಲ್ಲಿ ಸುಪ್ರೀಂ ಕೋರ್ಟು ಶುಲ್ಕ ವಿಧಿಸಲಾಗುವ ವೈದ್ಯಕೀಯ ಸೇವೆಗಳು ಬಳಕೆದಾರರ ರಕ್ಷಣಾ ಕಾಯ್ದೆಯಡಿ ಬರುತ್ತವೆ ಎಂದು ತೀರ್ಪು ನೀಡಿತು. ಬ್ರಿಟಿಷ್ ರಾಷ್ಟ್ರೀಯ ಸ್ವಾಸ್ಥ್ಯ ಯೋಜನೆ
ಸರಕಾರ ಹಾಗೂ ಖಾಸಗಿ ರಂಗದ ವೈದ್ಯರು ಒಂದು ವಿಷಯ ವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ 21ನೇ
ವಿಧಿಯಡಿ ಯಲ್ಲಿ ಈ ದೇಶದ ಪ್ರಜೆಗಳಿಗೆ ಆರೋಗ್ಯದ ಹಕ್ಕನ್ನು (ಜೀವದ ಹಕ್ಕು) ಅನುಭವಿಸುವ ಅವಕಾಶವಿದ್ದೇ ಇದೆ. ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳೂ ಸೇರಿದಂತೆ ಸಂವಿಧಾನದಲ್ಲಿ ಇತರ ಹಲವು ಹಕ್ಕುಗಳನ್ನು ಉಲ್ಲೇಖೀ ಸುವ ವಿಧಿಗಳನ್ನೂ ಅಂತರ್ಗತಗೊಳಿಸಲಾಗಿದೆ. 2000ದ ಇಸವಿ ಯೊಳಗೆ “ಎಲ್ಲರಿಗೂ ಆರೋಗ್ಯ’ ಎಂಬ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ದೇಶದಲ್ಲೀಗ ಇರುವ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆ ಜನರಿಗೆ ಏನೇನೂ ತೃಪ್ತಿ ತಂದಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದರ ಬದಲಿಗೆ ಇನ್ನೊಂದು ಯೋಜನೆಯನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸಲು ಇದೇ ಸೂಕ್ತ ಕಾಲ. ಖಾಸಗಿ ವೈದ್ಯಕೀಯ ಲಾಬಿಯನ್ನು ಎದುರಿಸುವ ಎದೆಗಾರಿಕೆ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್, ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸಿ ಕೇಂದ್ರದೆದುರು ಇರಿಸಬೇಕಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲೇ ಉಲ್ಲೇಖವಾಗಿರುವಂತೆ ಭಾರತ ಒಂದು ಸಮಾಜವಾಗಿ ರಾಷ್ಟ್ರ; ನಮ್ಮ ರಾಜ್ಯ ಸಮಾಜ ಕಲ್ಯಾಣ ಸಂಕಲ್ಪಕ್ಕೆ, ಅದರ ಸಾಕಾರಕ್ಕೆ ಬದ್ಧವಾದ ರಾಜ್ಯವಾಗಿರಬೇಕೆಂದು ಆಗ್ರಹಿಸುವ ಹಕ್ಕು ನಮ್ಮ ಜನರಿಗೆ ಇದ್ದೇ ಇದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ವಿವಿಧ ಬಗೆಯ ಸಾರ್ವಜನಿಕ ಸ್ವಾಸ್ಥ é ಯೋಜನೆಗಳು ಇವೆಯಾದರೂ, ಇವೆಲ್ಲಕ್ಕಿಂತಲೂ ಹೆಚ್ಚು ಶ್ಲಾಘನೆಗೆ ಅರ್ಹ ವಾಗಿರುವ ಯೋಜನೆಯೆಂದರೆ 69 ವರ್ಷಗಳಷ್ಟು ಹಳೆಯ ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ಸೇವಾ ಯೋಜನೆ. ಇದೊಂದು ಸಾರ್ವಜನಿಕರ ದೇಣಿಗೆಯ ಬಲದಲ್ಲಿ ನಡೆಯುವ ರಾಷ್ಟ್ರೀಕೃತ ಆರೋಗ್ಯ ಸೇವಾ ಯೋಜನೆ; ಇಡೀ ದೇಶದ ಜನರು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಅಲ್ಲಿನ ಜನರಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳು ಉಚಿತವಾಗಿಯೇ ಲಭಿಸುತ್ತವೆ; ಅಲ್ಲಿಗೆ ಬೇರೆ ದೇಶಗಳಿಂದ ಬರುವ ಜನರಿಗೆ ಕೂಡ ಕೆಲ ತುರ್ತು ಸೇವೆಗಳನ್ನು ಒದಗಿಸುವ ವ್ಯವಸ್ಥೆಯೂ ಇದೆ. ಬ್ರಿಟನ್‌ನಲ್ಲಿನ ಬಹುತೇಕ ಎಲ್ಲ ಆಸ್ಪತ್ರೆಗಳೂ ಈ ಯೋಜನೆಯ ವ್ಯಾಪ್ತಿಯೊ ಳಗಿವೆ; ಹೆಚ್ಚಿನ ವೈದ್ಯರು ಹಾಗೂ ನರ್ಸ್‌ಗಳು ಕೂಡ ಈ ಯೋಜನೆಯೊಂದಿಗೆ ಕೈಜೋಡಿಸಿದ್ದಾರೆ. ಖಾಸಗಿ ವೈದ್ಯರು ಹಾಗೂ ದಂತ ವೈದ್ಯರು ಕೂಡ ಈ ರಾಷ್ಟ್ರೀಯ ಯೋಜನೆಯಲ್ಲಿ ಗುತ್ತಿಗೆ ಸೇವೆಯ ಆಧಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಯೋಜನೆ ಸಕ್ರಿಯವಾಗಿರುವುದು, ಜನರಿಗೆ ಬೇಕಾದ ವೈದ್ಯಕೀಯ ಸೇವೆಯ ಅಗತ್ಯದ ಆಧಾರದಲ್ಲಷ್ಟೇ ಹೊರತು ಅವರ ಹಣ ಚೆಲ್ಲುವ ಸಾಮರ್ಥ್ಯದ ಆಧಾರದ ಮೇಲಲ್ಲ. ಬ್ರಿಟಿಷ್ ನ್ಯಾಶನಲ್ ಹೆಲ್ತ್ ಸರ್ವಿಸ್ ಸ್ಕೀಮ್ ಎಂಬ ಈ ಯೋಜನೆಯನ್ನು ಜಾರಿಗೊಳಿಸಿದ್ದುದು, ಕ್ಲೆಮೆಂಟ್ ಆ್ಯಟ್ಲೀ ಅವರ ನೇತೃತ್ವದ ಲೇಬರ್ ಪಾರ್ಟಿ ಸರಕಾರ. ಸಮಾಜ ಕಲ್ಯಾಣ ರಾಜ್ಯ ಪರಿಕಲ್ಪನೆಯನ್ನು ಅಳವಡಿಸಬೇಕೆಂಬ ಶಿಫಾರಸನ್ನೊಳಗೊಂಡ 1942ರ “ಬೆವರಿಜ್’ ವರದಿಯ ಆಧಾರದಲ್ಲಿ ಜಾರಿಗೆ ಬಂದ ಸಾರ್ವಜನಿಕ ಆರೋಗ್ಯ ಯೋಜನೆ ಇದು. ಇದನ್ನು ಜಾರಿಗೊಳಿಸಿದವರು, ಆರೋಗ್ಯ ಸಚಿವರಾಗಿದ್ದ ಲೇಬರ್ ಪಾರ್ಟಿ ನಾಯಕ ಅನಾೖರಿನ್ ಬೀವನ್ (1867-1967). ಈ ರಾಷ್ಟ್ರೀಯ ಸ್ವಾಸ್ಥ é ಯೋಜನೆಯನ್ನು ಬ್ರಿಟಿಷ್ ಜನತೆ ಮೆಚ್ಚಿಕೊಂಡಿದ್ದಾರೆ. ಮಾಜಿ ಪ್ರಧಾನಿ, ಕನ್ಸರೆÌàಟಿವ್ ಪಕ್ಷದ ನಾಯಕಿ ಮಾರ್ಗರೆಟ್ ಥ್ಯಾಚರ್ “ಈ ಯೋಜನೆ ನಮ್ಮ ಕೈಯಲ್ಲಿ ಸುರಕ್ಷಿತವಾಗಿದೆ’ ಘೋಷಿಸಿದ್ದೂ ಇದೆ (1982ರಲ್ಲಿ). ಈ ಯೋಜನೆಯಲ್ಲಿ ಕುಂದು-ಕೊರತೆ, ತೊಂದರೆ – ತಾಪತ್ರಯಗಳಿಲ್ಲದೆ ಇಲ್ಲ; ಆದರೂ ಬ್ರಿಟಿಷ್ ಪ್ರಜೆಗಳು ದೊಡ್ಡ ಸಂಖ್ಯೆಯಲ್ಲಿ ಅದನ್ನು ಒಪ್ಪಿಕೊಂಡಿ ದ್ದಾರೆ. ಶೇ. 60 ಮಂದಿ ಬ್ರಿಟಿಷರು ಈ ಯೋಜನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗೆ ಸರಕಾರ ನೀಡುವ ಹಣ ಎಲ್ಲೋ ಕಿಂಚಿತ್ ಪ್ರಮಾಣದ್ದು; ಚಿಕಿತ್ಸೆ ಲಭಿಸಬೇಕಾದರೆ ದೀರ್ಘಕಾಲ ಕಾಯಬೇಕು – ಮುಂತಾದ ಕೆಲ ಟೀಕೆಗಳೂ ಈ ಯೋಜನೆಗೆ ಅಂಟಿಕೊಂಡಿವೆಯೆನ್ನಿ. ಅತ್ತ ಅಮೆರಿಕದಲ್ಲಿ, ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಆರೋಗ್ಯ ಯೋಜನೆಯಲ್ಲಿ ಸುಧಾರಣೆ ತರಲು ತೀವ್ರ ಪ್ರಯತ್ನ ನಡೆಸಿದ್ದು, ಇನ್ನೂ ಜನರ ನೆನಪಿನಲ್ಲಿದೆ. 2010ರ ರೋಗಿಗಳ ರಕ್ಷಣೆ ಹಾಗೂ ಆರೋಗ್ಯ ಪಾಲನೆ ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಿದವರು ಅವರೇ. ಅಮೆರಿಕದಲ್ಲಿ ಆರೋಗ್ಯ ವಿಮೆ ಮಾಡಿಸಿಕೊಳ್ಳದಿರುವ ಹಾಗೂ ಅದರ ವ್ಯಾಪ್ತಿಯಲ್ಲಿ ಬಾರದಿರುವ ಜನರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ಸರಕಾರ ಬಹುಶಃ ತನ್ನದೇ ವಿಭಿನ್ನ ಯೋಜನೆ ರೂಪಿಸಿಕೊಂಡಿರಬಹುದು. ಅಥವಾ ಅದು ಯಾವ ಯೋಜನೆಯನ್ನೂ ಹೊಂದಿಲ್ಲ ಎನ್ನಬಹುದೇನೋ. ಅಂತೂ ನಮ್ಮ ರಾಜಕಾರಣಿಗಳು ಜನತೆಗೆ ಪೊಳ್ಳು ಆಶ್ವಾಸನೆಗಳನ್ನು ನೀಡುವುದನ್ನು ನಿಲ್ಲಿಸಿ, ಬ್ರಿಟಿಷ್ ನಾಯಕರು ತಮ್ಮ ಪ್ರಜೆಗಳಿಗಾಗಿ ಅಳವಡಿಸಿಕೊಂಡಿರುವ ಯೋಜನೆಯನ್ನು ಮಾದರಿಯಾಗಿ ಪರಿಗಣಿಸಿ, ಇಲ್ಲಿಯೂ ಅಂಥ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಇದೇ ಸಕಾಲ. ಅರಕೆರೆ ಜಯರಾಮ್