Advertisement

ಸಕ್ಕರೆ ಕಾರ್ಖಾನೆ ಆರಂಭಿಸಲು ರಾಜ್ಯ ಸರ್ಕಾರದಿಂದ ಹಣಕಾಸು ವ್ಯವಸ್ಥೆ: ಯಡಿಯೂರಪ್ಪ

09:44 AM Aug 30, 2019 | keerthan |

ಮಂಡ್ಯ: ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕಾವೇರಿಗೆ ಬಾಗಿನ ಅರ್ಪಿಸಿದರು.ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು ಒಂದು ತಿಂಗಳ ಹಿಂದೆ ಯಾವುದೇ ಜಲಾಶಯ ತುಂಬದೇ ಇರುವ ಸಂದರ್ಭದಲ್ಲಿ ನನಗೆ ಆತಂಕವಾಗಿತ್ತು. ಆದರೆ ವರುಣ ದೇವನ ಕೃಪೆಯಿಂದ 4 ದಿನಗಳ ಕಾಲ ವ್ಯಾಪಕ ಮಳೆ ಆಗಿರುವುದರಿಂದ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿಗೆ ಕೊಡಬೇಕಾಗಿರುವ ನೀರಿನ ಬಿಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಮಾಡಬೇಕಾಗಿದೆ ಎಂದು ಹೇಳಿದರು.

Advertisement

ಕೃಷ್ಣರಾಜಸಾಗರಕ್ಕೆ ಉತ್ತಮ ಅಭಿವೃದ್ಧಿಯನ್ನು ಮಾಡಲು ನಾನು ಪಣತೊಟ್ಟು ಕೆಲಸ ಮಾಡುತ್ತೇನೆ. ಬೇಕಾಗಿರುವ ಹಣಕಾಸು ಹಾಗೂ ಅಂದಾಜು ವೆಚ್ಚವನ್ನು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದರು. ಈ ಭಾಗದ ರೈತರು ಸಂಬಂಧಪಟ್ಟ ಕಂದಾಯ ಭೂಮಿದಾರರಿಗೆ ಹಿಡುವಳಿದಾರರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ನಡೆದುಕೊಳ್ಳಬೇಕು ಹಾಗೂ ಹಕ್ಕು ಪತ್ರ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ಇಲ್ಲಿ ರೈತರು ಬೆಳೆದ ಪ್ರಮುಖವಾಗಿರುವುದರಿಂದ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಹಣಕಾಸಿನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗೂ ಮೈಸೂರು ಸಕ್ಕರೆ ಕಾರ್ಖಾನೆ ಮುಂದಿನ ವರ್ಷದೊಳಗೆ ಆರಂಭಿಸಲು ಸೂಕ್ತವಾದಂತಹ ಕ್ರಮಗಳನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಪ್ರತಿ ವರ್ಷವೂ ಕಾವೇರಿ ಅಣೆಕಟ್ಟು ತುಂಬಿ ರೈತರ ಬೆನ್ನೆಲುಬಾದ ಹಣೆಕಟ್ಟು ಕಾವೇರಿ ತಾಯಿ ಪೂಜೆ ಸಲ್ಲಿಸಿದ್ದೇನೆ ಎಂದ ಬಿ ಎಸ್ ವೈ ರಾಜ್ಯದಲ್ಲಿ ಅಭಿವೃದ್ಧಿ ಮಳೆಯಿಂದಾಗಿ ಸಂಕಷ್ಟಕ್ಕೊಳಗಾದ ಜನರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಮಂಡ್ಯ ಮಂಡ್ಯ ಜಿಲ್ಲಾ ಸಂಸದೆ ಸುಮಲತಾ ಅಂಬರೀಶ್ , ಮೈಸೂರು ಸಂಸದ ಪ್ರತಾಪ್ ಸಿಂಹ, ಮಂಡ್ಯ ವಿಧಾನಸಭಾ ಸದಸ್ಯರಾದ ಎನ್ ಶ್ರೀನಿವಾಸ್, ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು, ಡಿಸಿ ತಮ್ಮಣ್ಣ, ಶ್ರೀರಂಗಪಟ್ಟಣ ವಿಧಾನಸಭಾ ಸದಸ್ಯರಾದ ರವೀಂದ್ರ ಶ್ರೀಕಂಠಯ್ಯ, ಮಳವಳ್ಳಿ ವಿಧಾನಸಭಾ ಸದಸ್ಯರಾದ ಅನ್ನದಾನಿ, ವಿಧಾನಪರಿಷತ್ ಸದಸ್ಯರಾದ ಕೇಟಿ ಶ್ರೀಕಂಠೇಗೌಡ, ನಾಗಮಂಗಲ ಸದಸ್ಯರಾದ ಸುರೇಶ್ ಗೌಡ ಮಂಡ್ಯ ಜಿಲ್ಲಾಧಿಕಾರಿಯಾದ ವೆಂಕಟೇಶ್ ರವರು ಜಿಲ್ಲಾ ವರಿಷ್ಠಾಧಿಕಾರಿ ಪರಶುರಾಮ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next