Advertisement

ರಾಜ್ಯ ಸರಕಾರ ದ್ವಂದ್ವ ನೀತಿ ಕೈಬಿಡಲಿ: ಸಿ.ಟಿ. ರವಿ

08:27 AM Nov 15, 2018 | Team Udayavani |

ಮಂಗಳೂರು: ಟಿಪ್ಪು ಸುಲ್ತಾನ್‌ ಬಗ್ಗೆ ವಾಸ್ತವಿಕ ಸಂಗತಿ ಸಮಾಜಕ್ಕೆ ತಿಳಿಸಿದವರನ್ನು ಬಂಧಿಸುವ ಮೂಲಕ ರಾಜ್ಯ ಸರಕಾರ ಇಬ್ಬಗೆ ನೀತಿ ಅನುಸರಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು.

Advertisement

ದ.ಕ. ಜಿಲ್ಲಾ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ದೇವರ ಬಗ್ಗೆ ಅವಹೇಳನವಾಗಿ ಮಾತನಾಡುವವರ ವಿರುದ್ಧ ಸರಕಾರ ಯಾವುದೇ ಕ್ರಮಕೈಗೊಳ್ಳದೆ  ಟಿಪ್ಪು ಮತಾಂಧತೆ, ದೌರ್ಜನ್ಯ ಬಗ್ಗೆ ಮಾತನಾಡಿದ ಪತ್ರಕರ್ತ ಸಂತೋಷ ತಮ್ಮಯ್ಯ ಅವರನ್ನು ಮಧ್ಯರಾತ್ರಿ ಬಂಧಿಸಿದ್ದಾರೆ. ಭಗವದ್ಗೀತೆ, ಶ್ರೀಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನ ಮಾಡಿದ ಪ್ರೊ| ಕೆ.ಎಸ್‌. ಭಗವಾನ್‌, ಪ್ರೊ| ಮಹೇಶ್ಚಂದ್ರ, ಯೋಗೇಶ್‌ ಮಾಸ್ಟರ್‌ ಅವರನ್ನೇಕೆ ಬಂಧಿಸಲಿಲ್ಲ? ಸಂತೋಷ್‌ ಬಂಧನವನ್ನು ಬಿಜೆಪಿ ಖಂಡಿಸುತ್ತದೆ. ಸರಕಾರ ಈ ದ್ವಂದ್ವ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್‌ , ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಪ್ರತಾಪ್‌ಸಿಂಹ ನಾಯಕ್‌, ಪ್ರೇಮಾನಂದ ಶೆಟ್ಟಿ, ಕ್ಯಾ| ಬೃಜೇಶ್‌ ಚೌಟ, ಕಿಶೋರ್‌ ರೈ, ಸಂಜಯಪ್ರಭು, ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next