Advertisement

ಬಿಸಿಯೂಟ ನೌಕರರಿಗೆ ರಾಜ್ಯ ಸರಕಾರದ ಹುಸಿ ಭರವಸೆ: ವಸಂತ ಆಚಾರಿ

02:01 PM Feb 19, 2018 | Team Udayavani |

ಮಹಾನಗರ: ಬಿಸಿಯೂಟ ನೌಕರರಿಗೆ ವೇತನ ಏರಿಕೆ ಮಾಡದ ರಾಜ್ಯ ಸರಕಾರದ ನೀತಿ ಖಂಡಿನೀಯ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಇತ್ತೀಚೆಗೆ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಯಿತು. ಈ ಹೋರಾಟದ ಸಮಯದಲ್ಲಿ ಸರಕಾರದಿಂದ ಸಭೆ ನಡೆಸ ಲಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳು ಹಾಗೂ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ 2 ಬಾರಿ ನಿರಂ ತರ 6 ಗಂಟೆಗಳ ಸಭೆ ನಡೆಸಲಾಗಿದೆ. ಬಿಸಿಯೂಟ ನೌಕರರಿಗೆ ಸಂಬಂಧಿಸಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂಬ ಭರವಸೆಯೊಂದಿಗೆ ಹೋರಾಟ ಹಿಂಪಡೆಯಲಾಗಿತ್ತು. ಆದರೆ ಇದೀಗ ಅವರ ಭರವಸೆ ಹುಸಿಯಾಗಿದೆ ಎಂದರು.

ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿಯವರು ಮಾತನಾಡಿ, ಈ ಬಜೆಟ್‌ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಿಷ್ಠ 3,000 ರೂ. ಆದರೂ ವೇತನ ನಿಗದಿಪಡಿಸಬೇಕಿತ್ತು ಎಂದರು.

ಪ್ರತಿಭಟನ ಪ್ರದರ್ಶನದ ನೇತೃತ್ವವನ್ನು ಬಿಸಿಯೂಟ ನೌಕರರ ಮುಂದಾಳುಗಳಾದ ರೇಖಲತಾ, ಪ್ರಮೀಳಾ, ಭಾರತಿ, ಅನಿತಾ, ಎಮೇಜಾ ವಹಿಸಿದ್ದರು. ಕಾರ್ಯದರ್ಶಿ ಗಿರಿಜಾ ಸ್ವಾಗತಿಸಿ, ಖಜಾಂಚಿ ಭವ್ಯಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next