ಬೆಂಗಳೂರು: ಕೋವಿಡ್ ಸೋಂಕು ಪತ್ತೆ, ಚಿಕಿತ್ಸೆ, ನಿಯಂತ್ರಣ ಮುಂದುವರಿಯಲಿದ್ದು, ಪ್ರತ್ಯೇಕ ಕೋವಿಡ್-19 ನಿಧಿ ಸ್ಥಾಪಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ವರ್ಷವಿಡೀ ಕೋವಿಡ್ ನಿಯಂತ್ರಣ ಮತ್ತು ಆರ್ಥಿಕತೆ ಮೇಲೆ ಅದು ಬೀರುವ ಪರಿಣಾಮಗಳನ್ನು ಸರಿಪಡಿಸಲು ಈ ನಿಧಿ ಸ್ಥಾಪಿಸಲು ಚರ್ಚೆ ನಡೆದಿದೆ ಎನ್ನಲಾಗಿದೆ.
ಇದಕ್ಕಾಗಿ ನಾನಾ ಇಲಾಖೆಗಳಿಂದ ಇಂತಿಷ್ಟು ಅನುದಾನ ಕಡಿತ ಮಾಡಿ ನಿಧಿಯಡಿ ಕಾಯ್ದಿರಿಸಬೇಕಾಗಬಹುದು. ಇದು ಸಹಜವಾಗಿಯೇ ಬಜೆಟ್ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರಲಿದೆ. ಮುಂದೆ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸದ್ಯಕ್ಕಿಲ್ಲ 2ನೇ ಪ್ಯಾಕೇಜ್
ಈಗಾಗಲೇ ಘೋಷಿಸಿರುವ ಪ್ಯಾಕೇಜ್‌ನಡಿ ನೆರವು ಹಂಚಿಕೆ ಮಾರ್ಗಸೂಚಿ ರಚಿಸುವ ಬಗ್ಗೆ ಸರಕಾರ ಚರ್ಚೆ ನಡೆಸಿದೆ. ಇತರ ಶ್ರಮಿಕ ವರ್ಗಗಳಿಗೂ ಪ್ಯಾಕೇಜ್ ಘೋಷಣೆ ಕೆಲವು ದಿನ ಮುಂದೂಡಿಕೆಯಾಗುವ ಸಾಧ್ಯತೆ ಇದೆ.