ಶಿವಮೊಗ್ಗ: ಬಿಟ್ ಕಾಯಿನ್ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿಲುವು ಹೊಂದಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಯ ವಿರುದ್ಧ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಈಗಾಗಲೇ ಗೃಹಸಚಿವ ಆರಗ ಜ್ಞಾನೇಂದ್ರ ಅವರೇ ಹೇಳಿದ್ದಾರೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿ ಯಾಗಿದ್ದರೂ ಕಾನೂನು ಕ್ರಮ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಕವರ್ ಕೊಟ್ಟಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ಎಂಇಎಸ್ ಪುಂಡಾಟಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ: ಶ್ರೀರಾಮುಲು
ಉಪ ಚುನಾವಣೆಯಲ್ಲಿ ನಾವು ಕವರ್ ಹಂಚಿದ್ದೇವೆ ಎಂದರೆ ಅವರು ನೇರವಾಗಿ ಹಂಚಿದ್ದಾರೆ ಎಂದರ್ಥವೇ? ಚುನಾವಣೆಯಲ್ಲಿ ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ನಾವು ಮಾಡಿದ್ದೇವೆ. ಚುನಾವಣೆ ಎಂದಾಕ್ಷಣ ಕೃಷ್ಣನ ತಂತ್ರಗಾರಿಕೆ ಮಾಡುತ್ತೇವೆ. ನಾವು ಮೂರು ಅಂಶಗಳ ಆಧಾರದ ಮೇಲೆ ನಾವು ಗೆಲ್ಲತ್ತೇವೆ. ಅಭಿವೃದ್ಧಿ ಕಾರ್ಯ, ಸಂಘಟನೆ ಮತ್ತು ಮೋದಿ ನಾಯಕತ್ವದ ಆಧಾರದ ಮೇಲೆ ಗೆಲ್ಲತ್ತೇವೆ. ಎರಡು ಕ್ಷೇತ್ರದಲ್ಲಿ ನಿಶ್ಚಿತವಾಗಿ ಬಿಜೆಪಿ ಗೆಲ್ಲಲ್ಲದೆ ಎಂದರು.
ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧಾರ ಮಾಡಬೇಕು. ತೈಲದ ಮೇಲಿನ ಸೆಸ್ ಇಳಿಕೆ ಮಾಡಬೇಕಾಗುತ್ತೆ. ನವೆಂಬರ್ 8 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡ್ತೇನೆ ಎಂದರು.