Advertisement

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

09:35 PM Feb 01, 2023 | Team Udayavani |

ಬೆಂಗಳೂರು: ಅಧಿಕಾರಾವಧಿ ಮುಗಿಯುವ ಹಂತಕ್ಕೆ ಬರುತ್ತಿರುವಂತೆಯೇ ಬಿಜೆಪಿ ಕರ್ನಾಟಕ ಸರಕಾರದ ಕಮಿಷನ್‌ ದರ ಶೇ.40ರಿಂದ ಶೇ. 80 ಆಗಿದೆಯೇ ಬಸವರಾಜ ಬೊಮ್ಮಾಯಿ ಅವರೇ? ಮತ್ತೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಲೂಟಿ ಮಾಡುವ ತುರಾತುರಿಯೇ ಎಂದು ಪ್ರಶ್ನಿಸಿ ಕಾಂಗ್ರೆಸ್‌ ಟ್ವೀಟ್‌ ಮೂಲಕ ಬಿಜೆಪಿಯನ್ನು ಕುಟುಕಿದೆ.

Advertisement

ಕಾಮಗಾರಿ ನಡೆದು ಮೂರೇ ತಿಂಗಳಲ್ಲಿ ಕಿತ್ತು ಹೋಗಿರುವ ಕಳಸ ತಾಲೂಕಿನ ಕಾಂಕ್ರೀಟ್‌ ರಸ್ತೆ ಕಮಿಷನ್‌ ದರ ಏರಿಕೆಯ ಕತೆ ಹೇಳುತ್ತಿದೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಬೆಳಗಾವಿಯಲ್ಲೋ ಅಥವಾ ಉತ್ತರ ಪ್ರದೇಶದಲ್ಲೋ ? ಬಿಜೆಪಿಯದ್ದು ಹಿಂದಿ ಪ್ರೇಮವೋ, ಅಥವಾ ಹೈಕಮಾಂಡಿನ ಹಿಂದಿ ಹೇರಿಕೆಯೋ, ಕನ್ನಡದ ಕಗ್ಗೊಲೆ ಮಾಡಿ ಶತಾಯ ಗತಾಯ ಕರ್ನಾಟಕವನ್ನು ಹಿಂದಿ ರಾಜ್ಯ ಮಾಡುವುದು ಬಿಜೆಪಿಯ ಗುಪ್ತ ಅಜೆಂಡಾದಲ್ಲೊಂದು ಎಂದು ಕಾಂಗ್ರೆಸ್‌ ಗುರುತರ ಆರೋಪ ಮಾಡಿದೆ.

ಧಾರವಾಡದ ಕೃಷಿ ವಿವಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೈತರ ಪ್ರತಿಭಟನೆ ಎದುರಿಸಿದ್ದಾರೆ. ಡಬಲ್‌ ಎಂಜಿನ್‌ ಸರಕಾರ ಎನ್ನುವ ಬಿಜೆಪಿ ಇದುವರೆಗೂ ಬೆಳೆ ಹಾನಿ ಪರಿಹಾರ ನೀಡದೆ ರೈತರನ್ನು ವಂಚಿಸಿದೆ. ವಿಫ‌ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇದು ಆರಂಭವಷ್ಟೇ. ಇನ್ನು ಮುಂದೆ ನೀವು ಹೋದಲ್ಲೆಲ್ಲ ಜನಾಕ್ರೋಶ ಎದುರಿಸುವುದು ನಿಶ್ಚಿತ. ರೈತ ವಿರೋಧಿ ಬಿಜೆಪಿ ಎಂದು ಟೀಕಿಸಿದೆ.

ಹೈಕೋರ್ಟ್‌ ಛೀಮಾರಿ:
ಉತ್ಸವಗಳಿಗೆ ಕೋಟಿ ಕೋಟಿ ರೂ. ಖರ್ಚು ಮಾಡುವ ಸರಕಾರ ಮಕ್ಕಳಿಗೆ ಶೂ, ಸಮವಸ್ತ್ರ ನೀಡುವುದಿಲ್ಲ ಎಂದು ಹೈಕೋರ್ಟ್‌ ಛೀಮಾರಿ ಹಾಕಿರುವುದನ್ನು ತನ್ನ ಟ್ವೀಟ್‌ ಖಾತೆಯಲ್ಲಿ ಉಲ್ಲೇಖೀಸಿರುವ ಕಾಂಗ್ರೆಸ್‌,
ಶಾಲೆ ಗೋಡೆಗಳಿಗೆ ಕೇಸರಿ ಬಣ್ಣ ಹೊಡೆಯಲು ಇರುವ ಹಣ ಮಕ್ಕಳಿಗೆ ಶೂ, ಸಾಕ್ಸ್‌ ನೀಡಲು ಇಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಒಂದೂ ಜನಪರ ಯೋಜನೆ ರೂಪಿಸಲಿಲ್ಲ, ನಮ್ಮ ಸರಕಾರದ ಜನಪರ ಯೋಜನೆಗಳನ್ನೂ ಉಳಿಸಲಿಲ್ಲ. ಬಿಜೆಪಿಯ ಸಾಧನೆಯಾದರೂ ಏನು ಎಂದು ಕಾಂಗ್ರೆಸ್‌ ಗಂಭೀರವಾಗಿ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next