Advertisement
ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ, ಕಳೆದ 20 ವರ್ಷಗಳಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾದ ಎನ್‌ಡಿಆರ್‌ಎಫ್ ನಿಧಿಯ ಅಂಕಿ-ಅಂಶಗಳನ್ನು ಬಿಚ್ಚಿಟ್ಟರು. ಸಿಎಂ ಸಿದ್ದರಾಮಯ್ಯ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಗೆ ಇಟ್ಟುಕೊಂಡು ಮಾತಾಡುತ್ತಿದ್ದಾ ರೆ. ಈ ಮೊದಲು ಮಾರ್ಗಸೂಚಿ ಪ್ರಕಾರ, 4,860 ಕೋ. ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿದ್ದರು. ಈಗ ಕೇಂದ್ರ ಸರಕಾರ 3,454 ಕೋ. ರೂ. ನೀಡಿದ ಬಳಿಕ 18,172 ಕೋ. ರೂ. ನೀv ಬೇಕೆಂದು ಪ್ರತಿ ಭಟನೆ ಮಾಡುತ್ತಿದ್ದಾ ರೆ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
2022ರಲ್ಲಿ ಪ್ರವಾಹದಿಂದ 13,09,421 ಹೆಕ್ಟೇರ್ ಬೆಳೆ ನಾಶವಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದು, 14,62,481 ರೈತರ ಬ್ಯಾಂಕ್ ಖಾತೆಗೆ 3,031.15 ಕೋಟಿ ರೂ.ಗಳ ಇನ್‌ಪುಟ್ ಸಬ್ಸಿಡಿ ಕೊಟ್ಟಿದ್ದರು ಎಂದರು. ದುರುದ್ದೇಶದಿಂದ ಸುಪ್ರೀಂ ಮೊರೆ ರಾಜ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಬರ ಪರಿಹಾರ ಘೋಷಣೆ ಬಗ್ಗೆ ಕೇಂದ್ರವು ಚುನಾವಣ ಆಯೋಗದ ಅನುಮತಿ ಕೇಳಿತ್ತು. ಕೇಂದ್ರ ಸರಕಾರ ಎನ್‌ಡಿಆರ್‌ಎಫ್ ಬಿಡುಗಡೆ ಮಾಡುವುದು ಗೊತ್ತಿದ್ದೇ ರಾಜ್ಯ ಸರಕಾರ ಕೋರ್ಟ್ ಮೆಟ್ಟಿಲೇರಿದೆ ಎಂದರು.