Advertisement
ಹೇರೂರು ದಯಾನಂದ ಶೆಟ್ಟಿಹೇರೂರು ದಯಾನಂದ ಶೆಟ್ಟಿ ಅವರು ಕಂಪೆನಿ ನಾಟಕಗಳಲ್ಲಿ ಪಳಗಿ ದವರು. ಸರ್ವಮಂಗಲ ನಾಟಕ ಸಭಾ, ಹಾಲಸಿದ್ದೇಶ್ವರ ನಾಟಕ ಕಂಪೆನಿಗಳ ಸದಸ್ಯರಾಗಿದ್ದರು. ಭಕ್ತ ಕುಂಬಾರ, ಯಚ್ಚಮ ನಾಯಕ, ಬೇಡರ ಕಣ್ಣಪ್ಪ, ಸತೀಧರ್ಮ, ಶ್ರೀರಾಮ ಜನನ, ದಾನಶೂರ ಕರ್ಣ, ಟಿಪ್ಪು ಸುಲ್ತಾನ್, ಮಕ್ಮಲ್‌ಟೋಪಿ ಮೊದಲಾದ ನಾಟಕಗಳಲ್ಲಿ ನಟಿಸಿದ್ದರು. ಯೆಚ್ಚಮ ನಾಯಕ ನಾಟಕದಲ್ಲಿ ರಾಜ್ ಜತೆ ತಿರುವೆಂಕಟ ಪಾತ್ರವನ್ನು ನಿರ್ವಹಿಸಿದ್ದರು. ಸುಬ್ಬಯ್ಯ ನಾಯ್ಡು ನಾಟಕ ಕಂಪೆನಿಯಲ್ಲಿ ಸುಮಾರು 15 ವರ್ಷ ಕೆಲಸ ಮಾಡಿದ್ದ ಶೆಟ್ಟಿಯವರು ಆಗ ರಾಜಕುಮಾರ್ ಜತೆ ಅಭಿನಯಿಸಿದ್ದರು.
ಮೂಲ್ಕಿ ಬಳಿಯ ಕವತ್ತಾರಿನಲ್ಲಿ ಜನಿಸಿದ ಕೃಷ್ಣಮೂರ್ತಿಯವರು ನಟ, ನಿರ್ದೇಶಕರು. ಯಕ್ಷಗಾನದ ಮೂಲಕ ನಾಟಕ ರಂಗ ಪ್ರವೇಶಿಸಿ ದರು. ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಆರಂಭಿಕ ರಂಗ ಕಲಿಕೆ ನಡೆಸಿ ದರು. ಚಿತ್ರದುರ್ಗದ ಜಮುರಾ ಸುತ್ತಾಟ, ಮಲ್ಲಾಡಿಹಳ್ಳಿಯ ತಿರುಕ ರಂಗ, ಕುಕ್ಕೆ ಸುಬ್ರಹ್ಮಣ್ಯದ ಕುಸುಮಸಾರಂಗ, ಮುದ್ರಾಡಿಯ ನಮ ತುಳುವೆರ್ ಮೊದಲಾದ ರಂಗ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಏಕವ್ಯಕ್ತಿ ಪ್ರಯೋಗ “ಸಾಯುವನೇ ಚಿರಂಜೀವಿ’ಯನ್ನು ನಾಡಿನಾದ್ಯಂತ 111 ಬಾರಿ ಪ್ರಯೋಗಿಸಿದ್ದಾರೆ. 300ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.