ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 847 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 20 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.22) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 946 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ‍್ಯೆ 13,621 ಇದೆ. ಕೋವಿಡ್ ಪಾಸಿಟಿವಿಟಿ ದರ 0.57% ಹಾಗೂ ಡೆತ್ ರೆಟ್ 2.36% ಇದೆ ಎಂದು ವರದಿಗಳಲ್ಲಿರುವ ಅಂಕಿ-ಅಂಶಗಳು ತಿಳಿಸಿವೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-0, ಬೆಳಗಾವಿ-14, ಬೆಂಗಳೂರು ಗ್ರಾಮಾಂತರ-23, ಬೆಂಗಳೂರು ನಗರ-312, ಬೀದರ್-0, ಚಾಮರಾಜನಗರ-7, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-31, ಚಿತ್ರದುರ್ಗ-3, ದಕ್ಷಿಣ ಕನ್ನಡ-108, ದಾವಣಗೆರೆ-8, ಧಾರವಾಡ-4, ಗದಗ-3, ಹಾಸನ-46, ಹಾವೇರಿ-0, ಕಲಬುರಗಿ-3, ಕೊಡಗು-26, ಕೋಲಾರ-14, ಕೊಪ್ಪಳ-0, ಮಂಡ್ಯ-18, ಮೈಸೂರು-74, ರಾಯಚೂರು-1, ರಾಮನಗರ-1, ಶಿವಮೊಗ್ಗ-52, ತುಮಕೂರು-25, ಉಡುಪಿ-48, ಉತ್ತರ ಕನ್ನಡ-22, ವಿಜಯಪುರ-2, ಯಾದಗಿರಿ-0.
ಇದನ್ನೂ ಓದಿ :ವಿಸರ್ಜನೆಗೆ ಬರಲೊಪ್ಪದ ಗಣಪ! ಬೈಲುಪಾರ್ ನಲ್ಲೊಂದು ವಿಚಿತ್ರ ಘಟನೆ