Advertisement
2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಉತ್ತರ ಪ್ರದೇಶದ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷದ ರಾಷ್ಟ್ರೀಯ ನಾಯಕರು ಈ ಚುನಾವಣೆಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಫಲಿತಾಂಶ ಬರುವ ವರೆಗೂ ಬೇರೆ ರಾಜ್ಯಗಳ ರಾಜಕೀಯ ಬದಲಾವಣೆಗಳ ಬಗ್ಗೆ ಬಿಜೆಪಿ ವರಿಷ್ಠರು ಹೆಚ್ಚಿನ ಗಮನ ನೀಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸಂಕ್ರಾಂತಿಯ ಅನಂತರ ಸಂಪುಟ ಪುನಾರಚನೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ಸ್ವಾಮೀಜಿಗಳು ಹಾಗೂ ಸಮುದಾಯದ ನಾಯಕರ ಮೂಲಕ ಒತ್ತಡ ಹೇರುವ ಕಸರತ್ತನ್ನು ತೆರೆಮರೆಯಲ್ಲಿ ನಡೆಸುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್
ಸಚಿವರು ನಿರಾಳ?ಸೋಂಕಿನ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ರುವುದರಿಂದ ಜ. 7ರಿಂದ 9ರ ವರೆಗೆ ನಡೆಯಬೇಕಾಗಿದ್ದ ಚಿಂತನ ಬೈಠಕ್ ಮುಂದೂಡಿಕೆಯಾಗಿದೆ. ಹೊಸ ದಿನಾಂಕ ನಿಗದಿಯಾಗಿಲ್ಲ. ಇದು ಸಚಿವರಿಗೆ ನಿರಾಳತೆ ತಂದಿದೆ. ಬೈಠಕ್‌ನಲ್ಲಿ ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆಯಾಗುವುದರಲ್ಲಿತ್ತು. ಚುನಾವಣೆ ಫಲಿತಾಂಶದವರೆಗೂ ಪುನಾರಚನೆ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿರುವುದು ಸಚಿವರು ಮತ್ತಷ್ಟು ನಿರಾಳರಾಗುವಂತೆ ಮಾಡಿದೆ.