Advertisement
ಸೋಮವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಾಗಿದೆ. ಏರ್ಪೋರ್ಟ್ ಸುತ್ತಮುತ್ತ 131.1 ಮಿ.ಮೀ. ಮಳೆಯಾಗಿದೆ. ಆದರೆ, ನಗರದಲ್ಲಿ ಜಿಟಿ ಜಿಟಿ ಮಳೆ ರಾತ್ರಿ ಪೂರ್ತಿ ಸುರಿದಿತ್ತು. ಅಲ್ಲದೆ, ಬೆಳಗ್ಗೆ ಒಂದಿಷ್ಟು ಬಿಡುವು ನೀಡಿತಾದರೂ, ಮಧ್ಯಾಹ್ನ ಒಂದು ಗಂಟೆ ಬಳಿಕ ಮತ್ತೆ ಜೋರು ಮಳೆಯಾಗಿದೆ. ಅದರಲ್ಲೂ, ನಗರದ ಕೇಂದ್ರ ಭಾಗಗಳಾದ ವಿಧಾನಸೌಧ, ಕೆ.ಆರ್.ವೃತ್ತ , ಯಶವಂತಪುರ, ಮಲ್ಲೇಶ್ವರ, ಸದಾಶಿವನಗರ, ಮತ್ತಿಕೆರೆ, ಹೆಬ್ಟಾಳ, ಯಲಹಂಕ ಸೇರಿದಂತೆ ಬೆಂಗಳೂರಿನ ಹಲವೆಡೆ ಮಧ್ಯಾಹ್ನ ಮಳೆ ಭಾರಿ ಮಳೆಯಾಗಿತ್ತು.
Related Articles
Advertisement
ಅಂಡರ್‌ಪಾಸ್‌ಗಳಲ್ಲಿ ನೀರು: ಮಳೆಯಿಂದಾಗಿ ಸಹಕಾರನಗರ – ಕೊಡಿಗೆಹಳ್ಳಿ ಅಂಡರ್‌ಪಾಸ್‌ನಲ್ಲಿ 4 ಅಡಿಯಷ್ಟು ನೀರುನಿಂತು ಸ್ವಿಮ್ಮಿಂಗ್ ಪೂಲ್ ಆಗಿತ್ತು. ನೀರು ತೆಗೆಯುವ ಸಾಹಸಕ್ಕೆ ಕೈ ಹಾಕಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಿರ್ಮಾಣ ಮಾಡಿದಾಗಿನಿಂದಲೂ ಇದೇ ಸಮಸ್ಯೆ ಎದುರಾಗಿದೆ. ಶಾಸಕರು, ಸಂಸದರು, ಬಿಬಿಎಂಪಿ ಅಧಿಕಾರಿಗಳಂತು ಇಲ್ಲಿಗೆ ಬರೋದೆ ಇಲ್ಲ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.
ನಾಲ್ಕು ಕಡೆ ಮರ ಬಿದ್ದಿದೆ: ಆರ್.ಆರ್.ನಗರ ಐಡಿಯಲ್ ಹೋಂ ಬಳಿ ಒಂದು , ಮಹಾಲಕ್ಷ್ಮೀ ಲೇಔಟ್‌ನಲ್ಲಿ ಎರಡು, ಗೋವರ್ಧನ ಟಾಕೀಸ್ ಬಳಿ ಎರಡು ಮರ ಸೇರಿ ಒಟ್ಟು ನಾಲ್ಕು ಕಡೆ ಮರ ಬಿದ್ದಿವೆ. ಮರಗಳು ಬುಡಸಮೇತ ನೆಲಕ್ಕುರುಳಿದ್ದರಿಂದ ಕೆಲ ಕಾಲ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಯಿತು.
ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಬಿದ್ದಿದ್ದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗಿದೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಇನ್ನು ಮಳೆಯಿಂದ ಯಾವುದೇ ಮನೆಗಳಿಗೆ ನೀರು ನುಗ್ಗಿರುವ ಕುರಿತು ದೂರು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ. 24 ಮಿ.ಮೀ ಮಳೆ;
ಸಂಜೆ ಬಳಿಕ ತುಂತುರು: ಸಂಜೆ ನಂತರ ಅಲ್ಲಲ್ಲಿ ತುಂತುರು ರೂಪದಲ್ಲಿ ಸುರಿಯಿತು. ಇಡೀ ದಿನ ಬಿಸಿಲಿನ ದರ್ಶನವಾಗದೇ, ಎÇÉೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಕಡೆಗಳಲ್ಲಿ ಆಗಾಗ ಜಿಟಿ ಜಿಟಿ ಮಳೆ ಬಂದರೆ, ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಿದೆ. ತಾಪಮಾನದಲ್ಲಿ ಇಳಿಕೆಯಾಗಿದ್ದರಿಂದ ನಗರಾದ್ಯಂತ ತಂಪು ಗಾಳಿ ಬೀಸುವ ಪ್ರಮಾಣ ಹೆಚ್ಚಾಗಿತ್ತು. ಕನಿಷ್ಠ 20 ಡಿಗ್ರಿ ಸೆಲ್ಸಿಯಸ್, ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಒಟ್ಟಾರೆ ನಗರದಲ್ಲಿ 24 ಮಿ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.