Advertisement

ಫೆಬ್ರವರಿಯಲ್ಲಿ ರಾಜ್ಯ ಬಜೆಟ್‌: ಸಿಎಂ ಬೊಮ್ಮಾಯಿ

11:01 PM Dec 24, 2022 | Team Udayavani |

ಹಾವೇರಿ/ಹುಬ್ಬಳ್ಳಿ : ರಾಜ್ಯ ಬಜೆಟ್‌ ಸಂಬಂಧ ಈಗಾಗಲೇ ಹಣಕಾಸು ಇಲಾಖೆಯೊಂದಿಗೆ ಎರಡು ಸುತ್ತಿನ ಚರ್ಚೆ ನಡೆಸಿದ್ದು, ಫೆಬ್ರವರಿ ತಿಂಗಳಲ್ಲಿ ಬಜೆಟ್‌ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ಅ ಧಿವೇಶನ ಮುಗಿದ ಅನಂತರ ಎಲ್ಲ ಇಲಾಖೆಗಳು, ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು. ಜನವರಿ ತಿಂಗಳಿನಿಂದ ಬಜೆಟ್‌ ಪೂರ್ವಭಾವಿ ಸಿದ್ಧತೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ನಿಗದಿಯಂತೆ ಚುನಾವಣೆ
ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆಗೆ ಹೋಗುವ ಯಾವ ಚಿಂತನೆಯೂ ಸರಕಾರ ಮತ್ತು ಪಕ್ಷದಲ್ಲಿ ಇಲ್ಲವೇ ಇಲ್ಲ. ಅದೇನಿದ್ದರೂ ವಿಪಕ್ಷಗಳ ಚಿಂತನೆ, ಹೇಳಿಕೆಯಾಗಿದೆ. ನಮ್ಮ ಸರಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳ ರಿಪೋರ್ಟ್‌ ಕಾರ್ಡ್‌ನೊಂದಿಗೆ ಚುನಾವಣೆಗೆ ಹೋಗುತ್ತೇವೆ ಎಂದರು.

ನಾಳೆ ಹೊಸದಿಲ್ಲಿಗೆ
ಸೋಮವಾರ ಸಂಜೆ ದಿಲ್ಲಿಗೆ ಹೋಗುತ್ತಿರುವುದು ನಿಜ. ಅಲ್ಲಿ ಏನು ಚರ್ಚೆ ನಡೆಯುತ್ತದೆ ಎಂಬುದನ್ನು ಬಳಿಕವೇ ಹೇಳುವೆ. ಅನೇಕ ಅಭಿವೃದ್ಧಿ ಕಾರ್ಯಕ್ರಮ, ಯೋಜನೆಗಳು ಸರಿಯಾಗಿ ನಡೆಯುತ್ತಿವೆ. ಬಿಜೆಪಿ ಘಟಕದ ಅಧ್ಯಕÒ‌ರೊಂದಿಗೆ ಚರ್ಚೆ ಮಾಡುತ್ತೇನೆ. ಖಂಡಿತವಾಗಿ ಈ ವೇಳೆ ರಾಜಕೀಯ ಚರ್ಚೆಯೂ ಆಗಲಿದೆ. ಚುನಾವಣ ತಯಾರಿ ಕೂಡ ಚರ್ಚೆ ಆಗುತ್ತದೆ ಎಂದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು, ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಉಭಯ ಸದನಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದೇನೆ. ಎರಡೂ¾ರು ದಿನ ಚರ್ಚೆಗೆ ಅವಕಾಶ ದೊರೆಯಲಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next