Advertisement
ಚುನಾವಣೆ ವರ್ಷದ ಬಜೆಟ್ ಆಗಿದ್ದರೂ ಜಿಲ್ಲೆಗೆ ಹೇಳಿಕೊಳ್ಳುವಂತಹ ಯೋಜನೆ ನೀಡದಿದ್ದರೂ, ಕಳೆದ ವರ್ಷದಂತೆ ಈ ಬಾರಿಯೂ ನಿರೀಕ್ಷಿತ ಯೋಜನೆಗಳ ಬದಲಿಗೆ ಅನಿರೀಕ್ಷಿತವಾಗಿ ಕೊಡುಗೆ ಮತ್ತು ಯೋಜನೆ ನೀಡಿದೆ.
Related Articles
Advertisement
ವಿಮಾನ ನಿಲ್ದಾಣ ಉನ್ನತೀಕರಣ: ಕಳೆದ ಏಳು ವರ್ಷಗಳಿಂದ ವಿಮಾನ ನಿಲ್ದಾಣ ರನ್ವೇ ವಿಸ್ತರಣೆ ಬೇಡಿಕೆಗೆ ಮನ್ನಣೆ ನೀಡಿ ಕಳೆದ ಆಯವ್ಯಯದಲ್ಲಿ ನಂಜನಗೂಡು ರಸ್ತೆಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಿಸಲು ಬಜೆಟ್‌ನಲ್ಲಿ ಘೋಷ ಣೆ ಮಾಡಲಾಗಿತ್ತು. ಭೂ ಸ್ವಾಧೀನ ಸೇರಿ ಅಗತ್ಯವಿರುವ ಸೌಕರ್ಯ ಕಲ್ಪಿಸಲು ಅಂದಾಜು 400 ಕೋಟಿ ರೂ. ಅನುದಾನ ನೀಡುವು ದಾಗಿ ಘೋಷಿಸಿತ್ತು. ಆದರೆ ಭೂ ಸ್ವಾದೀನ ಪ್ರಕ್ರಿಯೆ ವಿಳಂಬವಾಗಿದೆ. ಈ ನಡುವೆ ಸರ್ಕಾರ ಬಜೆಟ್‌ನಲ್ಲಿ ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕೆ 320 ಕೋಟಿ ರೂ. ಹಂಚಿಕೆ ಮಾಡಿದೆ.
ನಗರಾಭಿವೃದ್ಧಿಗೆ ಪೂರಕವಾದ ಟೌನ್‌ಶಿಪ್: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ತಮ ಕನಸಿನ ಮನೆಯನ್ನು ಹೊಂದುವ ನಿರೀಕ್ಷೆ ಲಕ್ಷಾಂತ ಮಂದಿಯಲ್ಲಿದ್ದು, ಅವರ ಬೇಡಿಕೆಗೆ ಅನುಗುಣವಾಗಿ ಮೈಸೂರಿನಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಇಂಟೆಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹೇಳಲಾಗಿದೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದ್ದ ತಿ.ನರಸೀಪುರ ಚಿರತೆ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಚಿರತೆ ಸೆರೆಗೆ ವಿಶೇಷ ಕಾರ್ಯಪಡೆ ರಚನೆ ಮಾಡಿದ್ದು, ಅದಕ್ಕೆ ಅನುಕೂವಾಗುವ ದೃಷ್ಟಿಯಿಂದ 199 ಮಂದಿ ಸಿಬ್ಬಂದಿ ನೇಮಕಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.
ಈ ಮೂಲಕ ವನ್ಯಜೀವಿ – ಮಾನವ ಸಂಘರ್ಷ ತಡೆಗೆ ಒತ್ತು ನೀಡಲಾಗಿದೆ. ಹಾಗೆಯೇ ಕೇಂದ್ರ ಸರ್ಕಾದ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿ ದೇಗುಲ ಅಭಿವೃದ್ಧಿ ಮಾಡುವುದು ಹಾಗೂ ಮೈಸೂರಿನಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ದಲ್ಲಿ ಶಾಶ್ವತ ಸೌಲಭ್ಯಗಳ ಒದಗಿಸುವ ಬಗ್ಗೆ ಹೇಳಲಾಗಿದೆ.
– ಸತೀಶ್ ದೇಪುರ