Advertisement
ಮಹಾದಾಯಿ ಅಲ್ಪತೃಪ್ತಿ: ಈ ಭಾಗದ ನಾಲ್ಕು ಜಿಲ್ಲೆಗಳ 11 ತಾಲೂಕಿಗೆ ಜೀವ ಜಲ ಒದಗಿಸುವ ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಈ ಬಾರಿಯೂ ರಾಜ್ಯ ಸರಕಾರದ ಆಯವ್ಯಯದಲ್ಲಿಮಣೆ ಹಾಕಿದ್ದಾರೆ. 2021-22ನೇ ಸಾಲಿನ ಮುಂಗಡಪತ್ರದಲ್ಲಿ 1,677 ಕೋಟಿ ರೂ. ಘೋಷಿಸಿದ್ದಾರೆ. ಅನುಮೋದನೆ ನೀಡಿದ್ದು, ಯೋಜನೆಗೆಕೇಂದ್ರ ಸರ್ಕಾರದ ಸಕ್ಷಮ ಪ್ರಾ ಕಾರಗಳ ಅನುಮೋದನೆ ಪಡೆಯವುದರೊಂದಿಗೆ ಆದ್ಯತೆ ಮೇರೆಗೆ ಯೋಜನೆ ಅನು ಷ್ಠಾನಕ್ಕೆ ಅನುದಾನ ಒದಗಿಸ ಲಾಗುವುದೆಂಬ ಭರವಸೆ ನೀಡಿದ್ದಾರೆ. ಇದರಿಂದ ಈ ಭಾಗದ ರೈತರು ಹಾಗೂ ಮಹಾದಾಯಿ ಹೋರಾಟಗಾರರಲ್ಲಿ ಸಮಾಧಾನ ತಂದಿದೆ.
Related Articles
Advertisement
ಕೈ ತಪ್ಪಿದ “ಜವಳಿ ಪಾರ್ಕ್’: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡಕ್ಕೆ “ಜವಳಿ ಪಾರ್ಕ್’ ಘೋಷಿಸಿದ್ದರಿಂದ ಜಿಲ್ಲೆಯ ಸಾವಿರಾರು ನೇಕಾರರ ಕುಟುಂಬಗಳ ದಶಕಗಳ ಕನಸು ನುಚ್ಚು ನೂರಾಗಿದೆ. ಇಲ್ಲಿನ ಬೆಟಗೇರಿ, ಶಿಗ್ಲಿ ಮತ್ತು ಗಜೇಂದ್ರಗಡ ನೇಕಾರರಿಗೆ ಹೆಸರುವಾಸಿಯಾಗಿವೆ. ಈ ಭಾಗದ ಸಾವಿರಾರು ಕುಟುಂಬಗಳು ನೇಕಾರಿಕೆಯನ್ನೇ ಅವಲಂಬಿಸಿದ್ದು, ಇಲ್ಲಿ ಸಿದ್ಧವಾಗುವ ಸೀರೆ ಮತ್ತಿತರೆ ಜವಳಿ ಉತ್ಪನ್ನಗಳು
ರಾಜ್ಯ ಹಾಗೂ ದೇಶದ ವಿವಿಧೆಡೆ ರಫ್ತಾಗುತ್ತದೆ. ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಬೆಟಗೇರಿ ಸಮೀಪದ ನರಸಾಪುರದಲ್ಲಿ ಟೆಕ್ಸ್ಟ್ ಟೈಲ್ ಪಾರ್ಕ್ ಸ್ಥಾಪಿಸಬೇಕೆಂಬುದು ದಶಕಗಳ ಬೇಡಿಕೆಯಾಗಿತ್ತು. ಆದರೆ, 2021-22 ನೇ ಸಾಲಿನ ಮುಂಗಡ ಪತ್ರದಲ್ಲಿ ರಾಜ್ಯ ಸರಕಾರ ಗುಳೇದಗುಡ್ಡದಲ್ಲಿ ಪಿಪಿಪಿ ಸಹಭಾಗಿತ್ವದಲ್ಲಿ “ಜವಳಿ ಪಾರ್ಕ್, ಹ್ಯಾಂಡ್ ಲೂಮ್ ಡಿಸೈನ್ ಸ್ಟುಡಿಯೋ’ ಸ್ಥಾಪಿಸುವುದಾಗಿ ಪ್ರಕಟಿಸಿದೆ.
ಹತ್ತಾರು ಬೇಡಿಕೆಗಳು ಗೌಣ: ಕಾಂಗ್ರೆಸ್ ಸರಕಾರದಲ್ಲೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಘೋಷಿಸಿದ್ದರೂ, ತಾಂತ್ರಿಕ ಸಮಸ್ಯೆಯಿಂದ ಬಿಡುಗಡೆಯಾಗಿದ್ದ 50 ಲಕ್ಷ ರೂ. ಅನುದಾನ ವಾಪಸ್ಸಾಗಿದೆ. ಈ ಬಾರಿಯೂ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಾರಿಡಾರ್ ರಚನೆ, ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೇರಿಸುವುದು, ಕಪ್ಪತ್ತಗುಡ್ಡದಲ್ಲಿ ಆರ್ಯುವೇದ ಮೆಡಿಕಲ್ ಕಾಲೇಜು ಸ್ಥಾಪನೆ, ಗಜೇಂದ್ರಗಡ, ಲಕ್ಷ್ಮೇಶ್ವರ ನೂತನ ತಾಲೂಕು ಬಲವರ್ಧನೆ ಬಗ್ಗೆ ಪ್ರಸ್ತಾಪವೇ ಇಲ್ಲ.
ಮಹದಾಯಿ ಯೋಜನೆಗೆ 1600 ಕೋಟಿ ರೂ.ಗಳ ಅನುದಾನ ಮೀಸಲಿಡುವದರೊಂದಿಗೆ ರಾಜ್ಯದ ನಗರಾಭಿವೃದ್ಧಿ,ಗ್ರಾಮೀಣಾಭಿವೃದ್ಧಿ, ಇಂಧನ,ವಸತಿ, ಆರೋಗ್ಯ, ಶೈಕ್ಷಣಿಕ, ರಸ್ತೆ ಹಾಗೂ ಮೂಲ ಸೌಕರ್ಯಗಳಿಗೆ ಆದ್ಯತೆಕೊಡುವುದರ ಜೊತೆಗೆ ಎಲ್ಲ ವಲಯಗಳನ್ನುಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಮಂಡಿಸಿದ 2021-22ನೇ ಸಾಲಿನ ಮುಂಗಡ ಪತ್ರ ಸ್ವಾಗತಾರ್ಹ. – ಶಿವಕುಮಾರ ಉದಾಸಿ, ಸಂಸದ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವಈ ಬಾರಿ ಬಜೆಟ್ ಗದಗ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಸಂಪೂರ್ಣನಿರಾಶಾದಾಯಕವಾಗಿದೆ. ಕಳೆದ ವರ್ಷ ಘೋಷಿಸಿದ್ದ ಮಹದಾಯಿಗೆ 500ಕೋಟಿ ರೂ. ಘೊಷಿಸಿದ್ದನ್ನೇ ಮುಂದುವರಿಸಿ, 1600 ಕೋಟಿರೂ. ನೀಡಿದೆ. ಈ ಬಾರಿ ಬಜೆಟ್ ಬೆಂಗಳೂರು, ಶಿವಮೊಗ್ಗ ಕೇಂದ್ರೀಕೃತವಾಗಿದ್ದು, ಗದಗ ಹಾಗೂ ಈ ಭಾಗದ ಜಿಲ್ಲೆಗಳಿಗೆ ನಿರಾಸೆ ತಂದಿದೆ.– ಜಿ.ಎಸ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಪ್ರತಿ ಜಿಲ್ಲೆಯಲ್ಲಿ ಒಂದೊಂದು ಗೋ ಶಾಲೆ, ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗೆ ವರ್ಷವಿಡೀ ವರಮಾನ ನೀಡುವ ಮೂಲಕ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಹಳ್ಳಿಗಳಿಗೆ ಸಗಟು ನೀರು ಪೂರೈಸಲು 25,740 ಕೋಟಿ ರೂ, ಗ್ರಾಮೀಣ ಭಾಗದ ಕುಡಿಯುವ ನೀರುಪೂರೈಸುವ ಯೋಜನೆಗೆ 6201 ಕೋಟಿ ರೂ, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3000 ಕೋಟಿ ಅನುದಾನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ 1500 ಕೋಟಿ ಅನುದಾನ, 58 ಅಣೆಕಟ್ಟುಗಳ ಪುನಃಶ್ಚೇತನಕ್ಕೆ 1500 ಕೋಟಿ, ಕೃಷ್ಣಾ ಭಾಗ್ಯ ಜಲನಿಗಮಕ್ಕೆ 5,600 ಕೋಟಿ ರೂ. ಅನುದಾನ ನೀಡಿ, ನೀರಾವರಿಗೆ ಒತ್ತು ನೀಡಿದ್ದಾರೆ. – ಮೋಹನ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ
ಮುಖ್ಯಮಂತ್ರಿ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ವರ್ಗ, ಜಾತಿ ಸಮುದಾಯದ ಜನರಿಗೂ ನ್ಯಾಯ ಒದಗಿಸಿದ್ದಾರೆ. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ, ಹಿಂದುಳಿದವರು, ಅಲ್ಪಸಂಖ್ಯಾತರ, ಮಕ್ಕಳು, ಮಹಿಳೆಯರು,ಹಿರಿಯ ನಾಗರಿಕರು, ವಿಕಲಚೇತನರಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಒತ್ತು ನೀಡಿದ್ದಾರೆ. ಅನ್ನದಾತನೆಮ್ಮದಿ ಹಾಗೂ ತೃಪ್ತಿಯಿಂದ ಬದುಕಬೇಕು ಎಂಬ ಆಶಯಬಜೆಟ್‌ನಲ್ಲಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳ ಕ್ರಮ ಶ್ಲಾಘನೀಯ. – ಪ್ರೊ| ವಿ.ಎಸ್.ಸಂಕನೂರ ವಿಧಾನ ಪರಿಷತ್ ಸದಸ್ಯ