Advertisement

ರಾಜ್ಯ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಬೃಹತ್‌ ಸಮಾವೇಶಕ್ಕೆ ಸಿದ್ಧತೆ

12:36 PM Oct 04, 2022 | Team Udayavani |

ಬೆಂಗಳೂರು :  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಕೊಡವಿಕೊಂಡು ಸಿದ್ದತೆ ನಡೆಸಲು ಈಗ ರಾಜ್ಯ ಬಿಜೆಪಿ ಘಟಕ ಮುಂದಾಗಿದ್ದು,ಘಟಾನುಘಟಿ ನಾಯಕರುಗಳನ್ನು ಆಹ್ವಾನಿಸಿ ಸಮಾವೇಶ ನಡೆಸಲು ಮುಂದಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಕೇಂದ್ರ ಸಚಿವರು  ಸೇರಿದಂತೆ ಹಲವು ನಾಯಕರನ್ನು ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಆಹ್ವಾನಿಸಲಾಗುತ್ತಿದೆ.

ಒಂದು ಕಡೆ ಕಾಂಗ್ರೆಸ್  ತನ್ನ ಸಂಘಟನಾತ್ಮಕ ಕಾರ್ಯಗಳಿಂದ ಪುಟಿದೆದ್ದಿದೆ.ಹೀಗಾಗಿ ಬರುವ ದಿನಗಳಲ್ಲಿ ಬಿಜೆಪಿಯ ಪ್ರಮುಖ ನಾಯಕರು ರಾಜ್ಯದಲ್ಲಿ ಸಾಲು ಸಾಲು ಸಮಾವೇಶಗಳನ್ನು ನಡೆಸಿ ಪಕ್ಷದ ಪರವಾದ ಅಲೆಯನ್ನು ಸೃಷ್ಟಿಸಲಿದ್ದಾರೆ.

ನ.2ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ನಾಡಪ್ರಭು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.  ಇದೇ ಸಂದರ್ಭದಲ್ಲಿ ಅವರು ಕೆಂಪೇಗೌಡರ ಥೀಮ್‍ಪಾರ್ಕ್ ಕೂಡ ಲೋಕಾರ್ಪಣೆ ಮಾಡುವರು.

ಇದನ್ನೂ ಓದಿ: ಟಿ-20 ವಿಶ್ವಕಪ್‌ ನಿಂದ ಬುಮ್ರಾ ಔಟ್:‌ ಮೊದಲ ಬಾರಿ ಮೌನ ಮುರಿದ ವೇಗಿ

Advertisement

ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಎರಡನೇ ರನ್‍ವೇಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ದೆಹಲಿ, ಮುಂಬೈ ನಂತರ  ಎರಡನೇ ರನ್‍ವೇ ಹೊಂದಿದ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ.

ಇದೇ ಸಂದರ್ಭದಲ್ಲಿ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಇವೆಲ್ಲವೂ ಚುನಾವಣಾ ತಂತ್ರದ ಮುಂದುವರೆದ ಭಾಗ ಎಂದು ಹೇಳಲಾಗುತ್ತಿದೆ. ರಾಜ್ಯಕ್ಕೆ ಆಗಮಿಸುವ ಅವರು, ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬರುವ ದಿನಗಳಲ್ಲಿ ರಾಜ್ಯಕ್ಕೆ ಮೋದಿ ಅವರನ್ನು ತಿಂಗಳಿಗೆ ಎರಡು ಬಾರಿ ಆಹ್ವಾನಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಚುನಾವಣಾ ಪ್ರಚಾರಕ್ಕೂ ರಣಕಹಳೆ ಮೊಳಗಿಸಲಿದೆ.

ಬಿಜೆಪಿಯ ಚುನಾವಣಾ ಚಾಣಾಕ್ಯ ಎಂದೇ ಕರೆಯುವ ಗೃಹಸಚಿವ ಅಮಿತ್ ಶಾ ಅವರು ಈ ತಿಂಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನ ಕೊಪ್ಪಕ್ಕೆ ಆಗಮಿಸಲಿರುವ ಅವರು, ರಾಜ್ಯಮಟ್ಟದ ಬಂಜಾರ ಸಮಾವೇಶದಲ್ಲಿ ಭಾಗಿಯಾಗುವರು.

ಹಿಂದುಳಿದ ಬಂಜಾರ ಸಮಾವೇಶವನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಬಿಜೆಪಿ ಸೂರಗೊಂಡನ ಕೊಪ್ಪದಲ್ಲಿ ರಾಜ್ಯಮಟ್ಟದ ಲಂಬಾಣಿ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಇದೆ. ಇದಕ್ಕೆ ಖುದ್ದು ಅಮಿತ್ ಶಾ ಅವರೇ ಆಗಮಿಸಲಿದ್ದಾರೆ.

ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಮುಂದಿನ ತಿಂಗಳು ರಾಜ್ಯದ ಐದು ಕಡೆ ಬೃಹತ್ ಸಮಾವೇಶಗಳನ್ನು ನಡೆಸಲಿದೆ. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಪರಿಶಿಷ್ಟ ಜಾತಿ ಸಮಾವೇಶ, ಬಳ್ಳಾರಿಯಲ್ಲಿ ಪರಿಶಿಷ್ಟ ವರ್ಗಗಳ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಹಾಗೂ ಅ.30ರಂದು ಗುಲ್ಬರ್ಗದಲ್ಲಿ  ಹಿಂದುಳಿದ ವರ್ಗಗಳ ಸಮಾವೇಶವನ್ನು ನಡೆಸಲಿದೆ.

ಅ.13ರಿಂದ 16ರವರೆಗೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮಣ ತೀರ್ಥ, ಹೇಮಾವತಿ-ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ ನಡೆಯಲಿದೆ. ಖುದ್ದು ಈ ಕಾರ್ಯಕ್ರಮಕ್ಕೆ 16ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುವರು.

ಮೈಸೂರು ಭಾಗದಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗೆಲ್ಲಲು ರಣತಂತ್ರ ರೂಪಿಸಿರುವ ಕಮಲ ಪಡೆ  ಜಿಲ್ಲೆಗೊಂದು ಸಮಾವೇಶ ನಡೆಸಲು ಮುಂದಾಗಿದೆ. ಮೊದಲ ಹಂತವಾಗಿ ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಮೂಲಕ ಸಮಾವೇಶ ನಡೆಸಿದರೆ, ನಂತರ ಮೈಸೂರಿನಲ್ಲಿ ಪರಿಶಿಷ್ಟ ಜಾತಿ, ಚಾಮರಾಜನಗರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಸೇರಿದಂತೆ ಹೀಗೆ ಅನೇಕ ಕಡೆ ಬೃಹತ್ ರ್ಯಾಲಿಗಳು ನಡೆಯಲಿವೆ.

ಸಮಾವೇಶಕ್ಕೆ ಬರಲು ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಜೆ.ಪಿ.ನಡ್ಡಾ, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕೂಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next