Advertisement

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ 6,100 ಅಪ್ರಂಟಿಸ್‌ ಹುದ್ದೆಗಳಿಗೆ ನೇಮಕಾತಿ

11:31 PM Jul 15, 2021 | Team Udayavani |

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾವು ದೇಶದ ವಿವಿಧೆಡೆಗಳಲ್ಲಿ ಖಾಲಿ ಇರುವ ಅಪ್ರಂಟಿಸ್‌ ಹುದ್ದೆಗಳ ನೇಮಕ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ. ಈ ಬೃಹತ್‌ ನೇಮಕಾತಿಯಲ್ಲಿ ಒಟ್ಟು 6,100 ಅಪ್ರಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಪದವೀಧರರು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಮೀಸಲಾತಿಯ ವಿವರಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ  ಲಭ್ಯವಿವೆ.

Advertisement

ಒಟ್ಟು ಹುದ್ದೆಗಳು: 6,100

ಕರ್ನಾಟಕ: 200

ವಿದ್ಯಾರ್ಹತೆ: ಭಾರತದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ, ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಅಭ್ಯರ್ಥಿಗಳು sbi.co.in  ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ ಹಂತದ ವಿವರಣೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Advertisement

ವಯೋಮಿತಿ: ಕನಿಷ್ಠ 20 ವರ್ಷಗಳು, ಗರಿಷ್ಠ 28 ವರ್ಷಗಳು. ಎಸ್ಸಿ, ಎಸ್ಟಿ , ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ವಯೋಮಿತಿ ಯಲ್ಲಿ ಸಡಿಲಿಕೆ ಇರುತ್ತದೆ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಮುಕ್ತಾಯ- ಜು. 26

ಅರ್ಜಿಗಳ ಮುದ್ರಿತ ಪ್ರತಿ ತೆಗೆದುಕೊಳ್ಳಲು ಕೊನೆಯ ದಿನಾಂಕ -ಆ. 10

ಪರೀಕ್ಷೆ ಆಗಸ್ಟ್‌ನಲ್ಲಿ ನಡೆಯಲಿದೆ.

ಪ್ರಶ್ನೆಪತ್ರಿಕೆಯ ಪಠ್ಯಕ್ರಮ :

ಮೊದಲ ಹಂತದ ಪರೀಕ್ಷೆಯು ಬಹು ಆಯ್ಕೆಯ ಮಾದರಿಯದಾಗಿದ್ದು, 100 ಅಂಕಗಳ 100 ಪ್ರಶ್ನೆಗಳನ್ನು ಹೊಂದಿರುತ್ತವೆ. ವಿಷಯಾವಾರು ಅಂಕಗಳು ಇಂತಿವೆ.

ಸಾಮಾನ್ಯ/ ಆರ್ಥಿಕ ಜ್ಞಾನ- 25 ಅಂಕಗಳು

ಸಾಮಾನ್ಯ ಇಂಗ್ಲಿಷ್‌ – 25 ಅಂಕಗಳು

ಮನೋ ಸಾಮರ್ಥ್ಯ- 25 ಅಂಕಗಳು

ಕಂಪ್ಯೂಟರ್‌ ಜ್ಞಾನ- 25 ಅಂಕಗಳು

ಅಪ್ರಂಟಿಸ್‌ ಹುದ್ದೆಯು ತಾತ್ಕಾಲಿಕವಾಗಿದ್ದು ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಮಾಸಿಕ ವೇತನ 15,000ರೂ.

ಆಯ್ಕೆಯ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಆನ್‌ಲೈನ್‌ ನಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆ ಇರುತ್ತದೆ. ದ್ವಿತೀಯ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ರಾಜ್ಯದ ಭಾಷೆಯ ಪರೀಕ್ಷೆಯೂ ಇರುತ್ತದೆ. ಮೊದಲ ಹಂತದ ಪರೀಕ್ಷೆಯನ್ನು ಆಗಸ್ಟ್‌ ತಿಂಗಳಲ್ಲಿ ನಡೆಸುವ ಸಾಧ್ಯತೆಗಳಿವೆ.

ಹೆಚ್ಚಿನ ಮಾಹಿತಿ sbi.co.in ನಲ್ಲಿ ಲಭ್ಯ.

 

Advertisement

Udayavani is now on Telegram. Click here to join our channel and stay updated with the latest news.

Next