ಮುಂಬಯಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಗ್ರಾಹಕರಿಗೆ ಎಟಿಎಂ ದಂಡ ಶುಲ್ಕವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಿದೆ.
ಕೋವಿಡ್ ವೈರಸ್ ನ ಈ ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ, ಎಸ್‌ಬಿಐ ಗ್ರಾಹಕರು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ವ್ಯವಹಾರ ನಡೆಸಿದರೆ, ಅದಕ್ಕೆ ಯಾವುದೇ ದಂಡ ಶುಲ್ಕಗಳು ಇರುವುದಿಲ್ಲ.
ಮಾ.24ರಂದು ಹಣಕಾಸು ಸಚಿವರು, ಬ್ಯಾಂಕುಗಳು ಎಟಿಎಂ ವಹಿವಾಟುಗಳಿಗೆ ದಂಡ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ, ಎಸ್‌ಬಿಐ ಈ ನಿರ್ಣಯಕ್ಕೆ ಬಂದಿದೆ. ಇದು ಜೂನ್ 30ರವರೆಗೆ ಅನ್ವಯವಾಗಲಿದೆ.
ಈ ಹಿಂದೆ ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ 5, ಇತರೆ ಬ್ಯಾಂಕ್‌ನ ಎಟಿಎಂಗಳಲ್ಲಿ 3 ಬಾರಿ ಹಣ ತೆಗೆಯಲು ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚುವರಿ ಬಳಕೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತಿತ್ತು.